ನಿರ್ಬಂಧದ‌ ನಡುವೆಯೂ ಅಧಿಕಾರ ಸ್ವೀಕಾರಕ್ಕೆ ಮುಂದಾದ ಡಿಕೆಶಿ: ಕಾರ್ಯಕ್ರಮದ ಸ್ವರೂಪವೇನು ಗೊತ್ತಾ?

ಡಿ.ಕೆ ಶಿವಕುಮಾರ್ ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಗುರುವಾರ (ಜುಲೈ 02) ದಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಪ್ರತಿಜ್ಞಾ ದಿನವನ್ನ ಕಾಂಗ್ರೆಸ್ ಅಚ್ಚಳಿಯದ ದಿನದಂತೆ ಆಚರಿಸಲು ಸರ್ವರೀತಿಯಲ್ಲೂ ಸನ್ನದ್ಧವಾಗಿದೆ. ಕಾರ್ಯಕ್ರಮ ಹೇಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಏನೆಲ್ಲಾ ನಡೆಯಲಿದೆ. ಪ್ರತಿಜ್ಞಾ ದಿನದ ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ನೋಡೋಣ ಬನ್ನಿ.

ಬೆಳಗ್ಗೆ 10.45ಕ್ಕೆ ಸೇವಾದಳ ತಂಡದಿಂದ ಗೌರವ ರಕ್ಷೆ ಸ್ವೀಕರಿಸಲಾಗುತ್ತದೆ. 11 ಗಂಟೆಗೆ ಸಾಮೂಹಿಕವಾಗಿ ವಂದೇಮಾತರಂ ಗೀತೆ ಹಾಡಲಿದ್ದಾರೆ. 11 ಗಂಟೆ 03 ನಿಮಿಷಕ್ಕೆ ಸ್ವಾಗತ ಭಾಷಣ ನೆರವೇರಲಿದೆ. 11 ಗಂಟೆ 7 ನಿಮಿಷಕ್ಕೆ ಕಾರ್ಯಕ್ರಮದ ಉದ್ಘಾಟನೆಯಾಗಲಿದೆ, ಈ ಸಮಾರಂಭವನ್ನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಶ್ರೀ ಕೆ.ಸಿ ವೇಣುಗೋಪಾಲ್ ನಡೆಸಿಕೊಳ್ಳಲಿದ್ದಾರೆ. 11.10ಕ್ಕೆ ಜ್ಯೋತಿ ಬೆಳಗೋ ಕಾರ್ಯಕ್ರಮ, 11.15ಕ್ಕೆ ಸಂವಿಧಾನ ಪೀಠಿಕೆಯ ಪಠಣವಾಗಲಿದೆ. 11.20ಕ್ಕೆ ಶ್ರೀ ಕೆ.ಸಿ ವೇಣುಗೋಪಾಲ್ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಸರಿಯಾಗಿ 11 ಗಂಟೆ 30 ನಿಮಿಷಕ್ಕೆ ಡಿ.ಕೆ ಶಿವಕುಮಾರ್ ಸಾಮೂಹಿಕ ಪ್ರತಿಜ್ಞೆ ಮಾಡಲಿದ್ದಾರೆ. 11.35ಕ್ಕೆ ದಿನೇಶ್ ಗುಂಡೂರಾವ್‌ ಅವರು ಅಧಿಕಾರವನ್ನ ಹಸ್ತಾಂತರಿಸಲಿದ್ದಾರೆ. 11.55 ರಿಂದ 12.25ರವರೆಗೆ ಅತಿಥಿಗಳು ಭಾಷಣ ಮಾಡಲಿದ್ದಾರೆ. ಇದ್ರಲ್ಲಿ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀ ಸಿದ್ದರಾಮಯ್ಯ, ಶ್ರೀ ಎಸ್‌.ಆರ್ ಪಾಟೀಲ್ ಮಾತನಾಡಲಿದ್ದಾರೆ. ಕೆಪಿಸಿಸಿ ನೂತನ ಅಧ್ಯಕ್ಷರ ಭಾಷಣ 12 ಗಂಟೆ 25 ನಿಮಿಷಕ್ಕೆ ಶುರುವಾಗಲಿದೆ. 12. 55ಕ್ಕೆ ವಂದನಾರ್ಪಣೆ ಕಾರ್ಯಕ್ರಮವಿದ್ದು, 12.58ಕ್ಕೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಅಂತ್ಯವಾಗಲಿದೆ.

ರಾಜ್ಯ ಕಾಂಗ್ರೆಸ್ ನಾಯಕರ ಮಾರ್ಗದರ್ಶನದಂತೆ ಪಕ್ಷದಲ್ಲಿ ಕಾರ್ಯ ಚಟುವಟಿಕೆಗಳನ್ನು ‌ನಡೆಸುತ್ತಿರುವ ಯಾದಗಿರಿ ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಅವಿನಾಶ್ ಜಗನಾಥ್, ತಮ್ಮ ನೆಚ್ಚಿನ ನಾಯಕ, ಅಭಿವೃದ್ಧಿ ಹರಿಕಾರ ಡಿಕೆಶಿ ಶಿವಕುಮಾರ ಅವರ ಕೆಪಿಸಿಸಿ “ಪ್ರತಿಜ್ಞಾ” ಕಾರ್ಯಕ್ರಮ ನಡೆಯಲಿದೆ. ಬಹಳ ಹುರುಪಿನಿಂದ ಅವಿನಾಶ್ ತನ್ನದೆ ಯುವ ಬಳಗದೊಂದಿಗೆ ತನ್ನ ಬಡಾವಣೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಸಿದ್ದತೆ ಮಾಡುತ್ತಿದ್ದಾರೆ.

ಲಾಕ್ ಡೌನ್ ಹಿನ್ನಲೆಯಲ್ಲಿ ನೇರವಾಗಿ ಬೆಂಗಳೂರು ಕಾರ್ಯಕ್ರಮಕ್ಕೆ ತೆರಳಿ ಶುಭಾಶಯಗಳು ಕೋರಲು ಸಾಧ್ಯವಾಗ್ತಿಲ್ಲ. ಡಿಕೆಶಿ ಅವರ ಕಟ್ಟಾ ಅಭಿಮಾನಿಯಾಗಿರುವ ಅವಿನಾಶ್​, ಅವರಂತೆ ಆಗದಿದ್ದರೂ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡುತ್ತಿದ್ದಾರೆ. ಡಿಕೆಶಿಯಂತೆ ರಾಜಕೀಯ ಚತುರತೆ ಬೆಳೆಸಿಕೊಂಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ತಾಯಿಯನ್ನು ಗೆಲ್ಲಿಸಿದ್ದಾರೆ. ಅಲ್ಲದೆ ಲಾಕ್ ಡೌನ್ ಸಮಯದಲ್ಲಿ ಸತತ ಎರಡು ತಿಂಗಳು ಕಾಲ ಬಡವರಿಗೆ ಉಚಿತ ಊಟ, ಆಹಾರದ ಕಿಟ್ ವಿತರಣೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ನೆಚ್ಚಿನ ನಾಯಕ ನೂತನ ಕೆಪಿಸಿಸಿ ಪಟ್ಟಧಿಕಾರ ಸ್ವೀಕಾರ ಹಿನ್ನಲೆಯಲ್ಲಿ ಡಿಕೆಶಿಗೆ ಶುಭಾಶಯಗಳನ್ನು ಕೋರಿದ್ದಾರೆ.‌ ಅಲ್ಲದೆ ಕಾಂಗ್ರೆಸ್ ನ ಮುಂದಿನ ಸಿಎಂ ಡಿಕೆಶಿ ಎಂಬುದು ಅವಿನಾಶ್​ ಬಲವಾದ ನಂಬಿಕೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights