ಬೆಂಗಳೂರಿನಲ್ಲಿ ಕೊರೊನಾ ಶವ ಸುಡಲು ಸೌದೆ ಅಭಾವ : ಬಿಬಿಎಂಪಿಗೆ ಭಾರಿ ತಲೆನೋವು!
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಸಾವಿನ ಸಂಖ್ಯೆಯೂ ಉಲ್ಬಣವಾಗುತ್ತಿದೆ. ಹೀಗಾಗಿ ಪ್ರತಿನಿತ್ಯ ಶವ ಸುಡಲು ಸೌದೆ ಅಭಾವ ಉಂಟಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ರುದ್ರನರ್ತನವಾಡುತ್ತಿದ್ದುಮ ಶವ ಸಂಸ್ಕಾರಕ್ಕೂ ಸೌದೆ ಕೊರತೆ ಎದುರಾಗಿದೆ. ಶವಗಾರದಲ್ಲಿ ಶವ ಸುಡಲು ಸೌದೆಗಳೇ ಇಲ್ಲದಂತಾಗಿದೆ. ಕೊರೊನಾ ಬಂದಾಗಲೂ ಕಷ್ಟ, ಆಸ್ಪತ್ರೆ ಸೇರುವಾಗಲೂ ಪರದಾಟ, ಚಿಕಿತ್ಸೆಗೂ ಹಣದ ಸಂಕಷ್ಟ, ಸತ್ತಮೇಲೂ ಹೆಣ ಸುಡಲೂ ಕೂಡ ಸೌದೆಗಾಗಿ ಹಾಹಾಕಾರ ಶುರುವಾಗಿದೆ.
ಪ್ರತಿ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸುಮಾರು 1500 ಕೆಜಿ ಕಟ್ಟಿಗೆ ಬೇಕು. ಪ್ರತಿ ಶವಗಾರದಲ್ಲಿ ನಿತ್ಯ 40ಕ್ಕಿಂತ ಹೆಚ್ಚು ಶವ ಸುಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೌದೆ ಕೊರತೆಯ ಆತಂಕ ಎದುರಾಗಿದ್ದು, ನಿತ್ಯ ಸೌದೆ ಸಂಗ್ರಹ ಬಿಬಿಎಂಪಿಗೆ ಭಾರಿ ತಲೆನೋವಾಗಿದೆ.
ಬೆಂಗಳೂರಿನಲ್ಲಿ ನಿತ್ಯ ಸಾವಿನ ಸಂಖ್ಯೆ ಹೆಚ್ಚಳದಿಂದ ಪರಿಸ್ಥಿತಿ ನಿಭಾಯಿಸಲು ಹೆಚ್ಚು ಮರಗಳನ್ನ ಕಡಿಯುತ್ತಾ ಪಾಲಿಕೆ ಅನ್ನೋ ಪ್ರಶ್ನೆ ಉದ್ಬವಿಸಿದೆ.
ಈಗಾಗಲೇ ಶವಗಾರಗಳ ಮುಂದೆ ಶವಸಂಸ್ಕಾರಕ್ಕೆ ಫುಲ್ ಬೋರ್ಡ್ ಗಳನ್ನು ಹಾಕಲಾಗುತ್ತಿದೆ. ನಗರದ ಹೊರಹೊಲಯದಲ್ಲಿ ಶವಗಳ ಸಂಸ್ಕಾರ ಮಾಡಲಾಗುತ್ತಿದೆ.

