ಪ್ರತಿಯೊಬ್ಬರಿಗೂ ಪಡಿತರ, ಮೃತರ ಕುಟುಂಬಕ್ಕೆ ಪರಿಹಾರ – ಜನಾಗ್ರಹ ಆಂದೋಲನದ ಒತ್ತಾಯ!
ಕೊರೋನಾ ಸಂದರ್ಭದಲ್ಲಿ ಪಂಚಕ್ರಮಗಳು ಯುದ್ಧೋಪಾದಿಯಲ್ಲಿ ಜಾರಿಯಾಗಲಿ ಎಂದು ಜನಾಗ್ರಹ ಆಂದೋಲನ ಒತ್ತಾಯಿಸಿದೆ. ಸೋಂಕಿತ ಪ್ರತಿಯೊಬ್ಬ ವ್ಯಕ್ತಿಗೂ ಬೆಡ್, ಆಕ್ಸಿಜನ್, ವ್ಯಾಕ್ತಿನ್, ಪಡಿತರ, ಪರಿಹಾರ ದೊರೆಯಬೇಕು ಎಂದು ಆಗ್ರಹಿಸಿದೆ.
ಇಂದು ಆನ್ ಲೈನ್ ಪತ್ರಿಕಾಗೋಷ್ಠಿಯಲ್ಲಿ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಸಾಮಾಜಿಕ ಚಿಂತಕ ಸಸಿಕಾಂತ್ ಸೆಂಥಿಲ್, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಹಲವು ಪ್ರಮುಖರು ಒತ್ತಾಯಿಸಿದ್ದಾರೆ.
ಬೇಡಿಕೆಗಳ ಬಗ್ಗೆ ಮಾತನಾಡಿದ ಸಸಿಕಾಂತ್ ಸೆಂಥಿಲ್ ಅವರು, ಇದು ರಾಜಕೀಯ ಮಾಡುವ ಕಾಲ ಅಲ್ಲ. ಅನಗತ್ಯ ಕೆಲಗಳಿಗೆ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ಬೆಡ್ ಸಿಗಬೇಕು. ಎಲ್ಲರಿಗೂ ಉಚಿತವಾಗ ವ್ಯಾಕ್ಸಿನ್ ಸಿಗಬೇಕು. ಆಕ್ಸಿಜನ್ ಕೊರತೆ ಆಗಬಾರದು ಎಂದರು.
ಪ್ರತಿಯೊಬ್ಬರಿಗೂ ಸಮಗ್ರ ಪಡಿತರ ಕಿಟ್ ದೊರೆಯಬೇಕು. ದಿನಗೂಲಿಗಳು ಹಾಗೂ ಶ್ರಮಿಕರಿಗೆ ತಲಾ 5 ಸಾವಿರ ರೂ. ಆರ್ಥಿಕ ನೆರವನ್ನು ನೀಡಬೇಕು. ಯಾವ ಕುಟಂಬದ ಆಧಾರ ಸ್ಥಂಭವಾಗಿದ್ದ ವ್ಯಕ್ತಿಯು ಕೊರೋನಾದಿಂದ ಮೖತಪಟ್ಟರೆ ಅವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದರು.
ಸರ್ಕಾರ ಜನರನ್ನು ಭಯದಿಂದ ಮುಕ್ತಗೊಳಿಸಿ, ಸ್ಥಳೀಯ ಮಟ್ಟದಲ್ಲಿ ಅವರೊಂದಿಗೆ ಕೈಜೋಡಿಸಬೇಕು. ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಕೋಮುಗಲಭೆ ಸೖಷ್ಟಿಸುವ ಪ್ರಯತ್ನ ಮಾಡಬಾರದು ಎಂದ ಅವರು ಸೆಂಟ್ರಲ್ ವಿಸ್ತ ಯೋಜನೆ ಈ ಸಂದರ್ಭದಲ್ಲಿ ಅನಗತ್ಯ. ಇದಕ್ಕಾಗಿ ವಿನಿಯೋಗಿಸುತ್ತಿರುವ 20 ಸಾವಿರ ಕೋಟಿ ಹಣವನ್ನು ಜನರಿಗಾಗಿ ಬಳಸಬೇಕು.ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಅವರು, ಮಾನವ ಅದ್ಭತ ಶಕ್ತಿ ಸಾಮರ್ಥಗಳೊಂದಿಗೆ ಅಹಂಕಾರ, ಸ್ವಾರ್ಥ ಮುಕ್ತನಾಗಬೇಕು. ಆಳುವ ನೇತಾರರು, ಪ್ರಜಾಪ್ರತಿನಿಧಿರಗ್ಗಳು ಬದಲಾಗುತ್ತಾರೆ. ಅವರು ರಾಜರಂತೆ ವರ್ತಿಸುವ ಅಗತ್ಯವಿಲ್ಲ ಎಂದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ನಮ್ಮ ಮಠವು ಕೊರೋನಾ ಪೀಡತರ ನೆರವಿಗೆ ನಿಂತಿದೆ. ಬೇರೆ ಮಠಗಳ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ ಎಂದರು.
ಕೊರೋನಾ ಸೋಂಕಿನಿಂದ ಅಗಲಿದ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸೋಣ. ನಾಳೆ ಗುರುವಾರ ಸಂಜೆ 7 ಗಂಟೆಗೆ ಎಲ್ಲರೂ ತಾವಿದ್ಧ ಸ್ತಳದಲ್ಲಿ ಇದನ್ನು ನೆರವೇರಿಸೋಣ ಎಂದರು.
ಮಾಜಿ ಸಚಿವೆ ಲಲಿತಾ ನಾಯಕ್ ಅವರು, ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಿರುವ ಜನರ ಹಣವನ್ನು ಈ ಸಂದರ್ಭದಲ್ಲಾದರೂ ಜನರಿಗಾಗಿ ಬಳಸಬೇಕು ಎಂದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಡಿಯೋ ಸಂದೇಶದ ಮೂಲಕ ಬೆಂಬಲ ವ್ಯಕ್ತಪಡಿಸಿದರು. ದಸಂಸ ಮುಖಂಡ ಮಾವಳ್ಳಿ ಶಂಕರ್ ಅವರು, ಸರ್ಕಾರಗಳು ಪಂಚೇದ್ರಿಯಗಳ ಸಂವೇದನೆ ಕಳೆದುಕೊಂಡಿವೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೇಜವಾಬ್ದಾರಿ ಸರಿ ಅಲ್ಲ ಎಂದರು.

