ಪೆಟ್ರೋಲ್‌ ಬೆಲೆ ಏರಿಕೆ; ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೈಕಲ್ ಪ್ರತಿಭಟನೆ!

ಕಳೆದ 22 ದಿನಗಳಲ್ಲಿ ಪೆಟ್ರೋಲ್‌ ಡೀಸೆಲ್‌ ದರ ಸರಿ ಸುಮಾರು 10 ರೂಪಾಯಿಗೂ ಹೆಚ್ಚು ದರ ಏರಿಕೆಯಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಡೀಸೆಲ್​ ಬೆಲೆ ಪೆಟ್ರೋಲ್ ಕಿಂತ ಕಡಿಮೆಯಾಗಿದೆ. ಒಂದಡೆ ಕೊರೊನಾ ವೈರಸ್ ಸಮಾಜವನ್ನು ಕಾಡಿತ್ತಿದೆ, ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ, ಇದರ ಮದ್ಯ ಇಂದನ ಬೆಲೆ ಹೆಚ್ಚಳ ಜನ ಸಂಕಷ್ಟದಲ್ಲಿ ತಳ್ಳಿದೆ.. ಪೈನಲಿ ವಿರೋದ ಪಕ್ಷ ಎಚ್ಚೆತ್ತುಕೊಂಡಿದೆ..

ಕಳೆದ 22 ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್​ ಬೆಲೆ ಏರುತ್ತಲೇ ಇದೆ. ಕೊರೋನಾ ಸಂಕಷ್ಟದಲ್ಲಿ ಜನ ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಪೆಟ್ರೋಲ್ ಕಂಪನಿಗಳು ದರವನ್ನ ಹೆಚ್ಚು ಮಾಡುತ್ತಲೇ ಬಂದಿವೆ. 22 ದಿನಗಳಲ್ಲಿ ಸರಿ ಸುಮಾರು 10 ರೂಪಾಯಿಗೂ ಹೆಚ್ಚು ದರ ಏರಿಕೆಯಾಗಿದೆ. ಇದರ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆಗೆ ಮುಂದಾಗಿದೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಈಗ ತೊಡೆತಟ್ಟಿದೆ. ದೇಶಾದ್ಯಂತ ಜೂನ್ 29ರಂದು ಸೋಮವಾರ ಪ್ರತಿಭಟನೆಗೆ ಮುಂದಾಗಿದೆ. ಎಲ್ಲರ ಗಮನ ಸೆಳೆಯೋ ಉದ್ದೇಶದಿಂದ ಸೈಕಲ್​ ಚಳವಳಿ ನಡೆಸಲು ಕಾಂಗ್ರೆಸ್​ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೈಕಲ್​ ಜಾಥಾ ಮಾಡಲು ನಿರ್ಧರಿಸಲಾಯ್ತು.

ಸಭೆ ಬಳಿಕ ಮಾತ್ನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾನು ಹಾಗೂ ಸಿದ್ದರಾಮಯ್ಯ ಅವರು ಸೈಕಲ್​ನಲ್ಲಿ ಓಡಾಡುತ್ತೇವೆ. ಸಾಕಷ್ಟು ಕಾರ್ಯಕರ್ತರು ಕೂಡ ಸೈಕಲ್​ನಲ್ಲಿ ಬರ್ತಾರೆ ಅಂತ ಮಾಹಿತಿ ನೀಡಿದ್ರು.

ಸೈಕಲ್​ ಜನ ಸಾಮಾನ್ಯರ ಫೇವರಿಟ್​​. ಹೀಗಾಗಿಯೇ, ಜನ ಸಾಮಾನ್ಯರ ಗಮನ ಸೆಳೆಯೋಕೆ ಕಾಂಗ್ರೆಸ್ ಈ ರೀತಿಯ ಪ್ಲಾನ್ ಮಾಡಿದೆ. ಕೇವಲ ಕರ್ನಾಟಕದಲ್ಲೇ ಅಲ್ಲದೇ ಇಡೀ ದೇಶಾದ್ಯಂತ ಸೈಕಲ್ ಚಳವಳಿ ಮಾಡ್ತಿದೆ ಕಾಂಗ್ರೆಸ್​. ಎಲ್ಲ ರಾಜ್ಯ ಕಾಂಗ್ರೆಸ್ ಸಮಿತಿಗಳು ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights