ಭಾರತಕ್ಕೆ ಸಂಕಷ್ಟಗಳ ಹಾದಿ; ಕೊರೊನಾ, ಪೆಟ್ರೋಲ್ ಬೆಲೆ, ಮಿಡತೆ ಹಾವಳಿ! ಬಸವಳಿದ ಭಾರತೀಯ
ಒಂದಡೆ ಕಳೆದ 20 ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಲೇ ಇದೆ. ಇನ್ನೊಂದಡೆ ಗಡಿಯಲ್ಲಿ ಉಂಟಾದ ಘರ್ಷಣೆಯಿಂದ ಹಾಗು ವಿರೋಧ ಪಕ್ಷಗಳ ಒತ್ತಡದಿಂದ ರಾಜಧಾನಿಯಲ್ಲಿ ಬಿಸಿ ಎರುತ್ತಿದೆ, ಅದಕ್ಕೆ ಕರೋನಾ ವೈರಸ್ ಸಾಥ್ ಬೆರೆ ಇದೆ, ಇದರ ಮಧ್ಯ ರಾಜಧಾನಿ ದೆಹಲಿ ಮೇಲೆ ಮತ್ತೊಂದು ಅಟ್ಯಾಕ್ ನಡೆದಿದೆ.
ಚೀನಾ ಮತ್ತು ಪಾಕ್ ಬೆದರಿಕೆಗಳನ್ನು ಗಡಿಯಲ್ಲೇ ಮಟ್ಟಹಾಕುತ್ತಿರುವ ಭಾರತ ಈಗ ಕೀಟದ ಕಾಟಕ್ಕೆ ಹೆದರಿದೆ. ರಾಜಧಾನಿ ದೆಹಲಿ ಲೊಕಸ್ಟ್ ಕೀಟಕ್ಕೆ ಕಂಗೆಟ್ಟಿದೆ. ಮೊದಲೇ ಕೊರನಾಕ್ಕೆ ಹೆದರಿ ಮನೆಯೊಳಗೆ ಕುಳಿತಿದ್ದವರು ಈಗ ಕಿಟಕಿ ಬಾಗಿಲುಗಳನ್ನು ಕೂಡ ಮುಚ್ಚಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.
03 ದಶಕಗಳ ಬಳಿಕ ಭಾರತದಲ್ಲಿ ಈ ರೀತಿಯ ಕೀಟಗಳು ರೈತರ ಪಾಲಿಗೆ ಯಮರೂಪಿಯಾಗಿವೆ. ಕೀಟಗಳಿಂದ ರೈತರ ಬೆಳೆಗಳನ್ನು ರಕ್ಷಿಸಲು ಕೆಲವು ರಾಜ್ಯ ಸರಕಾರಗಳು ಡ್ರೋಣ್ ಪ್ರಯೋಗವನ್ನೂ ಮಾಡಿದ್ದವು. ಆದ್ರೆ ಈ ಲೊಕಸ್ಟ್ಗಳ ಕಂಟ್ರೋಲ್ ಮಾತ್ರ ಇನ್ನೂ ಸಾಧ್ಯವಾಗಿಲ್ಲ.
ಅಂದಹಾಗೇ, ಈ ಲೊಕಸ್ಟ್ ಕೀಟಗಳು ಆಫ್ರಿಕಾದಲ್ಲಿ ತಿಂದು ತೇಗಿವೆ. ಅಲ್ಲಿಂದ ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಬೆಳದ ಬೆಳೆಗಳನ್ನು ನೆಲಸಮ ಮಾಡಿಬಿಟ್ಟಿವೆ. ಬಕಾಸುರ ಹೊಟ್ಟೆಯ ಈ ಲೊಕಸ್ಟ್ಗಳು ಭಾರತದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ತನ್ನ ಕೆಲಸ ಮುಗಿಸಿ ಈಗ ರಾಷ್ಟ್ರರಾಜಧಾನಿಯತ್ತ ಎಂಟ್ರಿಕೊಡುತ್ತಿದೆ. ಹಗಲಿನ ವೇಳೆಯಲ್ಲಿ ಮಾತ್ರ ಚಲಿಸುವ ಈ ಕೀಟಗಳನ್ನು ಕಂಟ್ರೋಲ್ ಮಾಡಲು ಸರಕಾರಗಳು ಹರಸಾಹಸ ಮಾಡುತ್ತಿದೆ.
ಉತ್ತರ ಪ್ರದೇಶದ ಗಾಝಿಯಬಾದ್ ಮೂಲಕ ರಾಷ್ಟ್ರರಾಜಧಾನಿ ದೆಹಲಿ ಪ್ರವೇಶಕ್ಕೆ ಲೊಕಸ್ಟ್ಗಳು ಸಜ್ಜಾಗುತ್ತಿರುವಾಗಲೇ ಗುರ್ ಗಾಂವ್ ಸ್ಥಳೀಯ ಆಡಳಿತ ಜನರಿಗೆ ಎಲ್ಲಾ ಕಿಟಿಕಿ ಬಾಗಿಲುಗಳನ್ನು ಮುಚ್ಚುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲ ಈ ಕೀಟಗಳನ್ನು ಜೋರಾದ ಶಬ್ದದಿಂದ ಮಾತ್ರ ದೂರವಿಡಲು ಸಾಧ್ಯವಿರುವುದರಿಂದ ಆದಷ್ಟು ಶಬ್ದ ಮಾಡುವಂತೆ ಸೂಚನೆ ನೀಡಿದೆ.
ಒಂದು ಕಡೆ ಕೊರೊನಾ ಮತ್ತೊಂದು ಕಡೆ ಲೊಕಸ್ಟ್. ಸರಕಾರಗಳ ಪಾಲಿಗೆ ಕೊರೊನಾ ಕಟ್ಟಿಹಾಕುವುದೇ ಸವಾಲಿನ ಕೆಲಸವಾಗಿರುವ ಈ ಸಮಯದಲ್ಲಿ ಕೀಟಗಳ ಕಾಟವನ್ನು ಹೇಗೆ ತಪ್ಪಿಸುವುದು ಅನ್ನೋದು ಮತ್ತೊಂದು ಚಿಂತೆಯಾಗಿದೆ.
ಲೊಕಸ್ಟ್ ದೈತ್ಯ ಕೀಟ. ಇದರ ಟಾರ್ಗೆಟ್ ರೈತರು ಬೆಳೆಯುವ ಬೆಳೆಗಳು. ಅದ್ರಲ್ಲೂ ಸೀಸನಲ್ ಬೆಳೆಗಳ ಮೇಲೆ ಈ ಲೊಕಸ್ಟ್ಗಳು ಅಟ್ಯಾಕ್ ಮಾಡ್ತು ಅಂದ್ರೆ ಸಾಕು ಆ ಬೆಳೆಗಳ ಕಥೆ ಮುಗಿದ ಹಾಗೆಯೇ. ಕೇವಲ ಹಸಿರು ಬೆಳೆಗಳನ್ನು ನಾಶಪಡಿಸುವ ಈ ಕೀಟಗಳು ರೈತರ ಪಾಲಿಗೆ ಯಮದೂತ. ಗುಂಪು ಗುಂಪಾಗಿ ಹಾರುವ ಈ ಕೀಟಗಳು ಗಾಳಿ ಹೇಗೆ ಚಲಿಸುತ್ತದೋ ಅದೇ ಮುಖದಲ್ಲಿ ಚಲಿಸಿಬಿಡುತ್ತವೆ. ದಿನಕ್ಕೆ ಸರಿಸುಮಾರು 150 ಕಿಲೋಮೀಟರ್ ಚಲಿಸುವ ಈ ಲೊಕಸ್ಟ್ಗಳು ಕೊರೊನಾದ ಜೊತೆ ರೈತರ ಹೊಟ್ಟೆಗೆ ಚೆನ್ನಾಗಿ ಹೊಡೆಯುತ್ತಿವೆ.

