ಮೆಡಿಕಲ್‌ ಕಿಟ್ ಅವ್ಯವಹಾರ; ಸರ್ಕಾರ ಉತ್ತರ ಕೊಡಬೇಕು; ತನಿಖೆಗೆ ಸದಸ ಸಮಿತಿ ರಚನೆಯಾಗಬೇಕು: ಕಾಂಗ್ರೆಸ್‌ ಲೀಡರ್ಸ್‌

ಕರ್ನಾಟಕ ಮೆಡಿಕಲ್ ಕಿಟ್ ಖರೀದಿ ಅವ್ಯವಹಾರದ ಬಗ್ಗೆ ಸರ್ಕಾರ ಉತ್ತರ ಕೊಡಬೇಕು ಎಂದು ಕಾಂಗ್ರೆಸ್‌ನ ಮಾಜಿ ಸಚಿವರುಗಳಾದ ಹೆಚ್.ಕೆ.ಪಾಟೀಲ್ ಮತ್ತು ಯು.ಟಿ. ಖಾದರ್​ ಆಗ್ರಹಿಸಿದ್ದಾರೆ.

ಕೊರೊನಾ ವೈರಸ್‌ ಹರಡುತ್ತಿರುವ ಭೀತಿಯ ಜೊತೆಗೆ ಅದೇ ರೀತಿಯಲ್ಲಿ ಮೆಡಿಕಲ್ ಕಿಟ್ ಖರೀದಿ ಅವ್ಯವಹಾರವೂ ಕರ್ನಾಟಕದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೊರೊನಾ ಕಿಟ್‌ಗಳಲ್ಲಾಗಿರುವ ಅವ್ಯವಹಾರಕ್ಕೆ ಪೂರಕವಾಗಿ ದುಪ್ಪಟ್ಟು ಹಣ ಕೊಟ್ಟು ಖರೀದಿಸಲಾದ ವೆಂಟಿಲೇಟರ್‌ಗಳು ಹಾಗೂ ಕಳಪೆ ಗುಣಮಟ್ಟದ ವೆಂಟಿಲೇಟರ್‌ ಖರೀದಿಯಲ್ಲಾಗಿರುವ ಧೋಖಾ ಎಲ್ಲವೂ ಹೊರ ಬರುತ್ತಿವೆ. ಈ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್​ ಧ್ವನಿ ಎತ್ತಿದ್ದು, ಹಲವಾರು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಕಲ್ಲಿ ಲೆಕ್ಕಕೊಡಿ, ಉತ್ತರ ಕೊಡಿ ಬಿಜೆಪಿ ಎಂಬ ಎರಡು ಅಂಧೋಲನವನ್ನೂ ಆರಂಭಿಸಿದೆ.

ಬಿಬಿಎಂಪಿ ಆಯುಕ್ತರ ವರ್ಗಾವಣೆಯೂ ಹಲವಾರು ಅನುಮಾನಗಳನ್ನು ಮೂಡಿಸುತ್ತಿದೆ. ಅವರು ಜನರ ಬಳಿ ಹೋಗಿ ಮನವರಿಕೆ ಮಾಡಿಕೊಡ್ತಿದ್ರು. ಪ್ರಮಾಣಿಕ ಪ್ರಯತ್ನ ಮಾಡಿದ್ರು ಎಂದು ನನಗೆ ಅನ್ನಿಸಿದೆ. ಇದರ ಬಗ್ಗೆ ನಾನು ಹೆಚ್ಚೇನು ಮಾತನಾಡಲ್ಲಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದೆವು, ಕೊರೊನಾ ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಖರೀದಿಸಲಾದ ಕೊರೊನಾ ಕಿಟ್‌ಗಳಲ್ಲಿ ಮಾಡಿರುವ ಕರ್ಮಕಾಂಡ ಬಯಲಾಗುತ್ತಿದೆ. ಸರ್ಕಾರದ ಲೂಟಿಕೋರತನದ ಬಗ್ಗೆ ರಾಜ್ಯದ ಜನರಿಗೆ ಎಲ್ಲವೂ ಈಗ ಅರ್ಥವಾಗುತ್ತಿದೆ ಎಂದು ಯುಟಿ ಖಾದರ್ ಹೇಳಿದ್ದಾರೆ.

ಕೊರೊನಾ ಹಾಗೂ ಜನರ ಆರೋಗ್ಯದ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ನಾವು ಟೀಕೆ ಟಿಪ್ಪಣಿ ಮಾಡುತ್ತಿಲ್ಲ. ಸರ್ಕಾರವನ್ನು ಉತ್ತಮವಾಗಿ ನೆಡೆಸುವುದಕ್ಕೆ ಒಂದು ಚುಚ್ಚುಮದ್ದು ಅಂತ ತಿಳಿದುಕೊಳ್ಳಿ. ಲೆಕ್ಕಾಚಾರವನ್ನು ಬರೆದುಕೊಟ್ಟದ್ದು ನಾವಲ್ಲ, ರಾಜ್ಯ ಸರ್ಕಾರ ತಾನೆ. ಮಾಧ್ಯಮಗಳ ಸಹಾಯದಿಂದ ಮೆಡಿಕಲ್​ ಕಿಟ್​ ದಂಧೆ ಹೆಚ್ಚು ಬಯಲಾಗಿದೆ ತನಿಖೆ ಮಾಡುವುದಕ್ಕೆ ಸದನ ಸಮಿತಿ ರಚನೆ ಮಾಡಲಿ ಅವರು ಎಂದು ಆಗ್ರಹಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights