ಮೇಡ್‌ ಇನ್‌ ಇಂಡಿಯಾದಲ್ಲಿ ಭಾರತದ್ದೆಷ್ಟು ಪಾಲು, ಚೀನಾದ ಪಾಲೆಷ್ಟು?

ಚೀನಾ ಜೊತೆಗಿನ ಸಂಘರ್ಷ ಭುಗಿಲೆದ್ದಾಗಲೆಲ್ಲಾ ಬಾಯ್ಕಾಟ್‌ ಚೀನಾ ಸದ್ದು ಜೋರಾಗಿಯೇ ಕೇಳಿಬರುತ್ತದೆ. ಅಂದಹಾಗೆ ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಶೇ.95 ರಷ್ಟು ಎಲೆಕ್ಟ್ರಾನಿಕ್ಸ್ ಹಾಗೂ ಯಂತ್ರೋಪಕರಣಗಳು ಭಾರತದಲ್ಲಿಯೇ ತಯಾರಾಗುತ್ತವೆ. ಆದರೆ, ಅವುಗಳಿಗೆ ಅಗತ್ಯವಿರುವ ಕಾಂಪೊನೆಂಟ್ (ಘಟಕ) ಹಾಗೂ ಕೆಲವು ಬಿಡಿ  ಭಾಗಗಳು ಹಾಗೂ ಬಂಡವಾಳಗಳಿಗೆ ಶೇ.25-70 ರಷ್ಟು ಚೀನಾ ಮೇಲೆಯೇ ಅವಲಂಬನೆ ಇದೆ.

ಕನ್‌ಸ್ಯೂಮರ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಅಪ್ಲೈಯನ್ಸ್ ಮಾನ್ಯುಫಾಕ್ಚರರ್ಸ್‌ ಅಸೋಸಿಯೇಶನ್(ಸಿಇಎಎಂಎ) ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ ತಯಾರಾಗುವ ಬಹುತೇಕ ವಸ್ತುಗಳು ಸ್ಥಳೀಯವಾಗಿಯೇ ಉತ್ಪಾದನೆಯಾದರೂ ಸಹ ಅವುಗಳಿಗೆ ಅಗತ್ಯವಿರುವ ಕಾಂಪೊನೆಂಟ್ ಗಳಿಗೆ ಶೇ.25-70 ರಷ್ಟು ಚೀನಾದ ಅವಲಂಬನೆ ಇದ್ದೇ ಇದೆ, ಅವುಗಳನ್ನು ರಾತ್ರೋ ರಾತ್ರಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

“ಕಳೆದ 2-3 ವರ್ಷಗಳ ಅವಧಿಯಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಾಗಿದೆ. ಸಿದ್ಧಪಡಿಸಿದ ವಸ್ತುಗಳ ಎಲ್ಲಾ ವಿಭಾಗದಲ್ಲಿಯೂ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ” ಎಂದು ಸಿಇಎಎಂಎ ಅಧ್ಯಕ್ಷ ಕಮಲ್ ನಂದಿ ಹೇಳಿದ್ದಾರೆ.

ಹವಾನಿಯಂತ್ರಕಗಳ ವಿಭಾಗದಲ್ಲಿ ಶೇ.30 ರಷ್ಟು ಇನ್ನೂ ಆಮದಾಗುತ್ತಿದೆ. ಲಾಕ್ ಡೌನ್ ಇಲ್ಲದೇ ಇದ್ದಿದ್ದರೆ ಈ ಪ್ರಮಾಣ ಇನ್ನೂ ಕಡಿಮೆಯಾಗಿರುತ್ತಿತ್ತು. ಮುಂದಿನ ಋತುವಿನಲ್ಲಿ ಇದು ಇನ್ನಷ್ಟು ಕಡಿಮೆಯಾಗಲಿದೆ ಎಂದು ನಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ ಮಷೀನ್ ವಿಭಾಗದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಚೀನಾ ಆಮದು ಮಾಡಿಕೊಳ್ಳಲಾಗುತ್ತಿದ್ದರೆ, ಹವಾ ನಿಯಂತ್ರಕದ ವಿಭಾಗದ ಹೆಚ್ಚು ಚೀನಾ ಆಮದುಗಳ ಮೇಲೆ ಅತಿ ಹೆಚ್ಚು ಅವಲಂಬನೆಯಾಗಿವೆ, ಸ್ಥಳೀಯವಾಗಿ ಕಾಂಪೊನೆಂಟ್ ಗಳ ಲಭ್ಯತೆಯ ವಾತಾವರಣ ಸೃಷ್ಟಿಸಬೇಕು, ಚೀನಾದ ಮೇಲಿನ ಅವಲಂಬನೆಯನ್ನು ರಾತ್ರೋ ರಾತ್ರಿಬಿಡುವುದಕ್ಕೆ ಸಾಧ್ಯವಿಲ್ಲ ಇದಕ್ಕೆ ಒಂದೆರಡು ವರ್ಷಗಳ ಕಾಲ ಬೇಕಾಗುತ್ತದೆ ಎಂದು ಗಾಜ್ರೇಜ್ ಅಪ್ಲೈಯನ್ಸ್ ನ ಬ್ಯುಸಿನೆಸ್ ವಿಭಾಗದ ಮುಖ್ಯಸ್ಥರಾಗಿರುವ ನಂದಿ ಹೇಳಿದ್ದಾರೆ.


ಇದನ್ನೂ ಓದಿ: ಬಾಯ್‌ಕಾಟ್‌ ಚೀನಾ: ಜೊಮ್ಯಾಟೋ ಟೀ-ಶರ್ಟ್‌ ಸುಟ್ಟು ಪ್ರತಿಭಟಿಸಿದ ಸಿಬ್ಬಂದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights