ವಿದೇಶಿ ಮಹಿಳೆಗೆ ಜನಿಸಿದವರು ದೇಶಭಕ್ತರಲ್ಲ; ಪ್ರಗ್ಯಾ ಸಿಂಗ್‌ ವಿವಾದಾತ್ಮಕ ಹೇಳಿಕೆ!

ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಬಗೆಗೆ ಕಾಂಗ್ರೆಸ್‌ ಪ್ರಶ್ನೆಗಳನ್ನು ಎತ್ತುತ್ತಲೇ. ಕಾಂಗ್ರೆಸ್‌ ಪ್ರಶ್ನೆಗಳಿಗೆ ನೈತಿಕವಾಗಿ ಉತ್ತರ ಕೊಡುವಲ್ಲಿ ವಿಫಲಾವಾಗಿರುವ ಬಿಜೆಪಿ ಸರ್ಕಾರ ವೈಯಕ್ತಿಕ ಟೀಕೆಗಳಿಗೆ ಇಳಿದಿದ್ದು, ಬಿಜೆಪಿ ನಾಯಕರು ಮಾತಿನ ಸ್ಥಿಮಿತ ಕಳೆದುಕೊಂಡಿದ್ದಾರೆ.  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನುಟೀಕಿಸುವ ಭರದಲ್ಲಿ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ವಿದೇಶದವರಿಗೆ ಜನಿಸಿದವರು ದೇಶಭಕ್ತರಾಗಲು ಸಾಧ್ಯವಿಲ್ಲ ಎಂದಿದ್ದು,  ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ದೇಶಭಕ್ತಿಯನ್ನು ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಣ್ಣಿನ ಮಗ ಮಾತ್ರ ದೇಶವನ್ನು ರಕ್ಷಿಸುತ್ತಾನೆ. ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ದೇಶಭಕ್ತನಾಗಲ್ಲ ಎಂಬ ಚಾಣಕ್ಯನ ಹೇಳಿಕೆಯನ್ನು ಉಲ್ಲೇಖಿಸಿ ಪ್ರಗ್ಯಾ ಸಿಂಗ್ ಕಾಂಗ್ರೆಸಿಗರನ್ನು‌ ಟೀಕೆ ಮಾಡಿದ್ದಾರೆ.

ಎರಡು ದೇಶದ ಪೌರತ್ವವನ್ನು ನೀವು ಹೊಂದಿದ್ದರೆ, ನಿಮಗೆ ದೇಶಭಕ್ತಿ ಭಾವನೆ ಎಲ್ಲಿಂದ ಬರುತ್ತದೆ. ಕಾಂಗ್ರೆಸ್‌ ಪಕ್ಷಕ್ಕೆ ನೈತಿಕತೆ ಹಾಗೂ ದೇಶಭಕ್ತಿ ಇಲ್ಲ. ಕಾಂಗ್ರೆಸ್‌ ತನ್ನನ್ನು ತಾನೂ ನೋಡಿಕೊಳ್ಳಬೇಕು. ಅವರಿಗೆ ಹೇಗೆ ಮಾತನಾಡಬೇಕು ಎಂದು ಗೊತ್ತಿಲ್ಲ. ಆ ಪಕ್ಷಕ್ಕೆ ನೈತಿಕತೆ ಇಲ್ಲ, ಸ್ಥೈರ್ಯ ಇಲ್ಲ ಮತ್ತು ದೇಶಭಕ್ತಿಯೂ ಇಲ್ಲ ಎಂದು ಪ್ರಗ್ಯಾ ಹೇಳಿಕೆ ನೀಡಿದ್ದಾರೆ.

ಭಾರತ – ಚೀನಾ ಗಡಿ ಸಂಘರ್ಷದ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಮಾತಿನ ಸಮರ ನಡೆಯುತ್ತಿದೆ. ಚೀನಾ ವಿಚಾರವಾಗಿ ಬಿಜೆಪಿ ಮೃದು ಧೋರಣೆ ತೋರುತ್ತಿದೆ ಎಂದು ಕಾಂಗ್ರೆಸ್‌ ನಿರಂತರವಾಗಿ ಆರೋಪ ಮಾಡುತ್ತಾ ಬರುತ್ತಿದೆ. ಬಿಜೆಪಿ ನಾಯಕರು ಅದಕ್ಕೆ ತಿರುಗೇಟು ನೀಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್‌ ವಕ್ತಾರ ಜೆಪಿ ಧನೋಪಿಯಾ, “ಪ್ರಗ್ಯಾ ಸಂಸದ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ಭಯೋತ್ಪಾದಕ ಪ್ರಕರಣಗಳಲ್ಲಿಯೂ ಅವರು ಭಾಗಿಯಾಗಿದ್ದರು. ಅವರೀಗ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಬಿಜೆಪಿ ಅವರಿಗೆ ಚಿಕಿತ್ಸೆ ಕೊಡಿಸಬೇಕು” ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಚೀನಾ ಗಡಿ ವಿವಾದ; ‘ಮೋದಿ ಮೂಡ್ ಸರಿ ಇಲ್ಲ’:

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights