ಕೊರೊನಾ 2ನೇ ದಾಳಿ ಅಬ್ಬರ : ‘ಮೈಮರೆತರೆ ಸಾರ್ವಜನಿಕರೇ ಹೊಣೆ’ ಕೆ.ಸುಧಾಕರ್ ವಾರ್ನಿಂಗ್!
ರಾಜ್ಯದಲ್ಲಿ ಕೊರೊನಾ 2ನೇ ದಾಳಿ ಅಬ್ಬರ ಹೆಚ್ಚಾಗುತ್ತಿದೆ. ಗಡಿ ಭಾಗಗಳಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ‘ಕೊರೊನಾ ನಿರ್ಲಕ್ಷ್ಯ ಮಾಡಿದರೆ ಸಾರ್ವಜನಿಕರೇ ಹೊಣೆ’ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಾರ್ನಿಂಗ್ ಕೊಟ್ಟಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಆರೋಗ್ಯ ಸಚಿವರು, ” ಕೊರೊನಾ ಕಂಟ್ರೋಲ್ ಮಾಡಲು ಸರ್ಕಾರ ಮುಂದಾಗಿದೆ. ನಿಯಮ ಜಾರಿಗೆ ತಂದಿದೆ. ಇದನ್ನು ಪಾಲಿಸದೇ ಇದ್ದರೆ ಅದಕ್ಕೆ ನೀವೆ ಹೊಣೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಅನಗತ್ಯ ಭೇಟಿಗೆ ಬ್ರೇಕ್ ಹಾಕಿ. ಇದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ತಜ್ಞರ ಸಲಹೆಗಳನ್ನು ಪಾಲಿಸದೇ ಇದ್ದರೆ ಕಠೀಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಯುವಕರು ಅನಗತ್ಯ ಭೇಟಿಗೆ ಬ್ರೇಕ್ ಹಾಕಿ. ಯಾಮಾರಿದ್ರೆ ನೀವೆ ಹೊಣೆ” ಎಂದಿದ್ದಾರೆ.
ಈಗಾಗಲೇ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಕಂಡುಬರುತ್ತಿವೆ. ಹಾಗಾದರೆ ಈಗಾಗಲೇ ಆರಂಭವಾಗಿರುವ ಶಾಲಾ ಕಾಲೇಜುಗಳ ನಿರ್ಧಾರ ಏನು? ಪಾರ್ಟಿ ಜಾತ್ರೆ ಸಮಾರಂಭಕ್ಕೆ ಮೂಗು ದಾರ ಹಾಕುತ್ತಾರಾ? ಇದಕ್ಕೆ ಆರೋಗ್ಯ ಸಚಿವರು ಏನ್ ಹೇಳುತ್ತಾರೆ? ಜಾತ್ರಾ ಮೊಹೋತ್ಸವ, ಚುನಾವಣೆ ಸಮಾವೇಶಗಳು ನಡೆಯುತ್ತವೆಯಾ? ಇದೆಲ್ಲದಕ್ಕೂ ಸಾರ್ವಜನಿಕರೇ ಎಚ್ಚರ ವಹಿಸಬೇಕು ಎಂದಿದ್ದಾರೆ.
ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಹೀಗಾಗಿ ಸಿಎಂ ಯಡಿಯೂರಪ್ಪ ಜೊತೆಗೆ ನಾವು ಮಾತನಾಡುತ್ತೇವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.