ರಜೆಗೆಂದು ಬಂದಿದ್ದ ಏಳು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ತಾತ!

ರಜೆಗೆಂದು ತನ್ನ ಮನೆಗೆ ಬಂದ 7 ವರ್ಷದ ಮೊಮ್ಮಗಳ ಮೇಲೆ 65 ವರ್ಷದ ಅಜ್ಜನೇ ಅತ್ಯಾಚಾರವೆಸಗಿರುವ ಹೀನ ಕೃತ್ಯ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಕೊಯಮತ್ತೂರಿನ 7 ವರ್ಷದ ಹುಡುಗಿ ತನ್ನ ತಮ್ಮ ಮತ್ತು ಅಪ್ಪ-ಅಮ್ಮನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆಕೆಯ ಅಪ್ಪ ಈರುಳ್ಳಿ ವ್ಯಾಪಾರಿಯಾಗಿದ್ದು, ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಇಂದಿನ ಸಂದರ್ಭದಲ್ಲಿ  ತಾನು ವ್ಯಾಪಾರಕ್ಕೆ ಹೊರಗೆ ಹೋದಾಗ ತನಗೂ ಸೋಂಕು ತಗುಲಬಹುದು. ಇದರಿಂದಾಗಿ ಮನೆಯಲ್ಲಿರುವ ಮಕ್ಕಳಿಗೆ ಸೋಂಕು ತಗುಲಬಹುದು ಎಂದು ಆತಂಕಗೊಂಡಿದ್ದ.

ಈ ಕಾರಣದಿಂದಾಗಿ, ಮಕ್ಕಳಿಗೆ ರಜೆ ಇದ್ದುದರಿಂದ ಸುರಕ್ಷತೆಯಿಂದ ಇರಲಿ ಎಂದು ಮಕ್ಕಳನ್ನು ಅಜ್ಜನ ಮನೆಯಲ್ಲಿ ಬಿಡಲಾಗಿತ್ತು.  ಹೆಂಡತಿ ಮತ್ತು ಮಗ ಕೆಲಸಕ್ಕೆ ಹೋದ ನಂತರ ತನ್ನ ಮೊಮ್ಮಗಳ ಜೊತೆ ಆಟವಾಡುತ್ತಿದ್ದ ಅಜ್ಜ, ಮೊಮ್ಮಗಳು ಮಲಗಿದ್ದ ಸಮಯದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಜೂನ್ 26ರಿಂದ ಜುಲೈ 2ರವರೆಗೆ ಆತ ಪ್ರತಿದಿನ ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಹೇಳಲಾಗಿದೆ.

ಇದರಿಂದ ಗಾಬರಿಗೊಂಡಿದ್ದ ಆಕೆ ತನ್ನ ಅಪ್ಪ-ಅಮ್ಮ ಬಂದಾಗ ನಾನಿನ್ನು ಅಜ್ಜನ ಜೊತೆ ಇರುವುದಿಲ್ಲ ಎಂದು ಹಠ ಮಾಡಿದ್ದಾಳೆ. ಮಗಳ ದಿಢೀರ್ ನಡವಳಿಕೆಯಿಂದ ಸಂಶಯಗೊಂಡ ಅವರು ಏನಾಯಿತು ಎಂದು ವಿಚಾರಿಸಿದ್ದಾರೆ. ಆಗ ಆ ಬಾಲಕಿ ಎಲ್ಲ ವಿಷಯವನ್ನು ಅಪ್ಪ- ಅಮ್ಮನಿಗೆ ತಿಳಿಸಿದ್ದಾಳೆ. ತಕ್ಷಣ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ 65 ವರ್ಷದ ಕಾಮುಕ ವ್ಯಕ್ತಿಯನ್ನು ಬಂಧಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights