ಶ್ರೀರಾಮನ ವಂಶಸ್ಥರಿಗೆ ಅಯೋಧ್ಯೆ ರಾಮಮಂದಿರದ ಮಾಹಿತಿ ನೀಡಲು ನಿರಾಕರಿಸಿದ ಅಮಿತ್ ಶಾ
ಅಯೋಧ್ಯೆ ಯ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆಗಾಗಿ ರಚಿಸಲಾಗಿರುವ ಸ್ವತಂತ್ರ ಟ್ರಸ್ಟ್ನ ಟ್ರಸ್ಟಿಗಳ ಮಾಹಿತಿಯನ್ನು ಕೋರಿ ಸಲ್ಲಿಸಲಾಗಿದ್ದ ಆರ್ಟಿಐ ಅರ್ಜಿಯನ್ನು ಯಾವುದೇ ಕಾನೂನಾತ್ಮಕ ಕಾರಣಗಳನ್ನು ನೀಡದೆ ತಿರಸ್ಕರಿಸಿರುವ ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ಮಾಹಿತಿ ನೀಡಲು ನಿರಾಕರಿಸಿದೆ.
“ನೀವು ಬಯಸಿದ ಮಾಹಿತಿಗಳು ಆರ್ಟಿಐ ಕಾಯ್ದೆ 2005ರ ಸೆಕ್ಷನ್ 8ರ ಅಡಿಯಲ್ಲಿ ಬರುತ್ತದೆ. ಆದ್ದರಿಂದ, ಮಾಹಿತಿಯನ್ನು ಒದಗಿಸಲಾಗುವುದಿಲ್ಲ” ಎಂದು ಆರ್ಟಿಐ ಕಾರ್ಯಕರ್ತ ಸುಶೀಲ್ ರಾಘವ್ ಅವರಿಗೆ ನೀಡಿರುವ ಒಂದೇ ಪುಟದ ಉತ್ತರದಲ್ಲಿ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ವಿ.ಎಸ್.ರಾಣ ಹೇಳಿದ್ದಾರೆ.
ಆರ್ಟಿಐ ಕಾಯ್ದೆಯ ಸೆಕ್ಷನ್ 8 ರಲ್ಲಿನ ಹಲವಾರು ಷರತ್ತುಗಳು ಮಾಹಿತಿಯನ್ನು ಒದಗಿಸುವ ನಿರಾಕರಿಸಲು ಕಾನೂನುಬದ್ದ ವಿನಾಯಿತಿಗಳನ್ನು ವಿವರಿಸುತ್ತವೆ. ಆದರೆ, ಗೃಹ ಸಚಿವಾಲಯವು ಅನುಗಳಲ್ಲಿ ಯಾವ ನಿಯಮದ ಆಧಾರದ ಮೇಲೆ ಮಾಹಿತಿ ನೀಡಲು ನಿರಾಕರಿಸಲಾಗಿದೆ ಎಂದು ಉಲ್ಲೇಖಿಸಿಲ್ಲ.

ರಾಘವ್ ತಮ್ಮ ಅರ್ಜಿಯಲ್ಲಿ, ಟ್ರಸ್ಟಿಗಳು ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಅನುಸಾರವಾಗಿ ನರೇಂದ್ರ ಮೋದಿ ಸರ್ಕಾರ ನೇಮಿಸಿದ ಟ್ರಸ್ಟ್ ಬಗ್ಗೆ ಆರು ನಿರ್ದಿಷ್ಟ ಅಂಶಗಳನ್ನೊಳಗೊಂಡ ಮಾಹಿತಿ ಕೋರಿದ್ದರು. ಇವುಗಳಲ್ಲಿ, ಟ್ರಸ್ಟಿಗಳ ಹೆಸರುಗಳ ಸಂಪೂರ್ಣ ಪಟ್ಟಿ, ಟ್ರಸ್ಟಿಗಳಾಗಿ ಆಯ್ಕೆಯಾಗಿದ್ದಕ್ಕಾಗಿ ಅವರ ಲೊಕಸ್ ಸ್ಟ್ಯಾಂಡಿ, ಅವರ ವಿರುದ್ಧ ಎಫ್ಐಆರ್ಗಳಾಗಿ ನೋಂದಾಯಿಸಲ್ಪಟ್ಟ ಕ್ರಿಮಿನಲ್ ಪ್ರಕರಣಗಳ ವಿವರಗಳ ಪ್ರತಿಗಳು, ಟ್ರಸ್ಟ್ನ ಸಂವಿಧಾನದ ಪ್ರತಿ, ಅದರ ನಿಧಿಗಳು, ಗುರಿಗಳು ಮತ್ತು ಉದ್ದೇಶಗಳ ವಿವರಗಳನ್ನು ನೀಡುವಂತೆ ಅರ್ಜಿಯಲ್ಲಿ ನಮೂದಿಸಲಾಗಿದೆ.
ಈ ಆರು ಪ್ರಶ್ನೆಗಳ ಹೊರತಾಗಿ, ಜೂನ್ ತಿಂಗಳಿನಲ್ಲಿ ಆರ್ಟಿಐ ಸಲ್ಲಿಸಿದ್ದ ರಾಘವ್, ಅರ್ಜಿ ಸಲ್ಲಿಕೆಗೂ ಮೊದಲ ಒಂದು ತಿಂಗಳು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪನೆಗಿ ಸ್ಥಾಪಿಸಲಾದ ಟ್ರಸ್ಟ್ಗೆ ಸ್ಥಾಪನೆಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಟ್ರಸ್ಟ್ಗೆ ಸಂಬಂಧಿಸಿದಂತೆ ಒಂದು ತಿಂಗಳ ‘ದೈನಂದಿನ ಪ್ರಗತಿಯ ವರದಿಯ’ ಮಾಹಿತಿಯನ್ನೂ ಅವರು ಕೇಳಿದ್ದರು. ಫೆ
ಬ್ರವರಿ ಆರಂಭದಲ್ಲಿ ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದ ರಾಘವ್, “ತಾವು ಭಗವಾನ್ ಶ್ರೀ ರಾಮ ಅಥವಾ ರಾಮ್ಲಾಲ್ಲಾ (ನ್ಯಾಯಶಾಸ್ತ್ರೀಯ ವ್ಯಕ್ತಿ) ರಾಜವಂಶದಿಂದ ಬಂದವರು” ಎಂದು ಹೇಳಿಕೊಂಡರು. ರಾಘವ್ ಎಂಬ ಉಪನಾಮವು “ಭಗವಾನ್ ಶ್ರೀ ರಾಮನ ಪೂರ್ವಜ ರಘುವಿನ ವಂಶಸ್ಥರಿಂದ ಬಂದಿದೆ. ನಾನು ರಾಮನ ವಂಶದಲ್ಲಿ ಹುಟ್ಟಿರುವವನು” ಎಂದು ಅವರು ಪ್ರತಿಪಾದಿಸಿದ್ದರು.
ಅವರ ಲೆಕ್ಕಾಚಾರದಲ್ಲಿ, “ರಾಘವ್ (ರಘುಕುಲ) ವಂಶದಲ್ಲಿ ಜನಿಸುವುದು ಎಂದರೆ ಭಗವಾನ್ ರಾಮನ ವಂಶಸ್ಥ ವ್ಯಕ್ತಿ”. ಭಗವಾನ್ ರಾಮನ ವಂಶವೃಕ್ಷ ಎಂದು ಅವರು ಹೇಳಿರುವ ಪ್ರಾತಿನಿಧಿಕ ನಕ್ಷೆಯನ್ನು ರಚಿಸಿದ್ದಾರೆ.
ಫೆಬ್ರವರಿ 6 ರಂದು ಅವರು ತಮ್ಮ ಪ್ರಾತಿನಿಧ್ಯವನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದಾಗ, ಅದನ್ನು ಫೆಬ್ರವರಿ 7ರಂದು ಗೃಹ ಸಚಿವಾಯಲವು ಸ್ವೀಕರಿಸಿತ್ತು.
“ನಾನು ಈ ಅರ್ಜಿಯನ್ನು ಎಂಹೆಚ್ಎ (ಗೃಹ ಸಚಿವಾಲಯ) ಯಲ್ಲಿ ಸಲ್ಲಿಸಿದ್ದೇನೆ ಮತ್ತು ಎಂಎಚ್ಎ ಯಾವುದೇ ಉತ್ತರ/ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ನಾನು ಆರ್ಟಿಐ ಸಲ್ಲಿಸಿದ್ದೇನೆ” ಎಂದು ರಾಘವ್ ತಿಳಿಸಿದ್ದಾರೆ.
ಆರ್ಟಿಐ ಅರ್ಜಿಗೆ ಕೇವಲ ಒಂದು ವಾರದೊಳಗೆ ತ್ವರಿತವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವಾಲಯವು, ಸೆಕ್ಷನ್ 8 ರ ಅಡಿಯಲ್ಲಿ ಅರ್ಜಿಯನ್ನು ನಿರಾಕರಿದೆ. ಆದಾಗ್ಯೂ, ಇದು ಅಪೂರ್ಣವಾದ ಪ್ರತಿಕ್ರಿಯೆಯಾಗಿ ಕಂಡುಬರುತ್ತದೆ. ಏಕೆಂದರೆ, ಗೃಹ ಸಚಿವಾಲಯದ ಉತ್ತರವು ನಿರಾಕರಣೆಗೆ ಸೂಕ್ತವಾದ ಕಾರಣವನ್ನೂ, ಷರತ್ತನ್ನು ಉಲ್ಲೇಖಿಸಿಲ್ಲ.
ಆರ್ಟಿಐ ಕಾಯ್ದೆಯ ಸೆಕ್ಷನ್ 8 ರ ಅಡಿನ್ನು ಸರ್ಕಾರಿ ಅಧಿಕಾರಿಗಳು “ಮಾಹಿತಿ ಬಹಿರಂಗ ಪಡಿಸಲು ಸೂಕ್ತ ಕಾರಣಗಳ ಜೊತೆಗೆ ನಿರಾಕರಿಸಲು ಅವಕಾಶ ನೀಡಲಾಗಿದೆ.” ಆದಾಗ್ಯೂ, ಕೇಂದ್ರ ಮಾಹಿತಿ ಆಯೋಗದ ದಾಖಲೆಯ ಹಲವಾರು ಆದೇಶದಂತೆ, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಕಾಯಿದೆಯ ಸೆಕ್ಷನ್ 8 ರಲ್ಲಿ (ಎ) ರಿಂದ (ಜೆ) ವರೆಗಿನ ಯಾವ ಷರತ್ತುಗಳ ಆಧಾರದ ಮೇಲೆ ಮಾಹಿತಿ ನಿರಾಕರಿಸಲಾಗಿದೆ ಎಂದು ಉಲ್ಲೇಖಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಯಾವುದೇ ಕಾರಣವನ್ನು ನೀಡದೆ ಮಾಹಿತಿ ನೀಡಲು ನಿರಾಕರಿಸಿದರೆ ಅದು ಕಾನೂನುಬಾಹಿರ ಎಂದು ಹೇಳಲಾಗಿದೆ.
ರಾಘವ್ ಅವರ ಅರ್ಜಿಗೆ ಮಾಹಿತಿ ನೀಡಲು ನಿರಾಕರಿಸಿರುವ ಗೃಹ ಸಚಿವಾಲಯ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಲು ವಿಫಲವಾಗಿದೆ.

ಅಯೋಧ್ಯೆ ಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ಟ್ರಸ್ಟ್ ಸ್ಥಾಪಿಸಬೇಕೆಂದು ಸುಪ್ರೀಂ ಕೋರ್ಟ್ 2019 ರ ನವೆಂಬರ್ನ ತೀರ್ಪಿನಲ್ಲಿ ಸೂಚಿಸಿತ್ತು. ಫೆಬ್ರವರಿ 05 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ರಸ್ಟ್ ಸ್ಥಾಪಿಸುವುದಾಗಿ ಘೋಷಿಸಿದ್ದರು. ಈ ಟ್ರಸ್ಟ್ನ ಸದಸ್ಯರ ಬಗ್ಗೆ ಕೆಲವು ವಿವರಗಳನ್ನು ಅದೇ ದಿನ ಗೃಹ ಸಚಿವ ಶಾ ಘೋಷಿಸಿದರೂ, ಪೂರ್ಣ ವಿವರಗಳು ಅವರ ಘೋಷಣೆಯಲ್ಲಿ ಸ್ಪಷ್ಟವಾಗಿರಲಿಲ್ಲ.
ಇದನ್ನೂ ಓದಿ: ಚೀನೀ ಆಮದು ನಿಲ್ಲಿಸಲು ಸಾಧ್ಯವಿಲ್ಲ; ಮಾರಾಟದ ಸರಕಿಗೆ ಉತ್ಪಾದನಾ ದೇಶದ ಟ್ಯಾಗ್ ಕಡ್ಡಾಯ: ಮೋದಿ ಸರ್ಕಾರ

