ದೇಶದಲ್ಲಿವೆ 24 ನಕಲಿ ವಿಶ್ವವಿದ್ಯಾನಿಲಯಗಳು: ಯುಜಿಸಿ ಹೇಳಿದ ನಕಲಿ ವಿವಿಗಳಾವು ತಿಳಿಯಿರಿ!
ಕರ್ನಾಟಕವೂ ಸೇರಿದಂತೆ ದೇಶದಲ್ಲಿರುವ 24 ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ಘೋಷಿಸಿದ್ದು, ವಿದ್ಯಾರ್ಥಿಗಳಿಗೆ ಪದವಿ ನೀಡುವ ಅಧಿಕಾರ ಅವರಿಗೆ ಇಲ್ಲ ಎಂದು ಹೇಳಿದೆ. ಈ 24 ನಕಲಿ ವಿಶ್ವವಿದ್ಯಾಲಯಗಳು ಯುಜಿಸಿ ಕಾಯ್ದೆಯ ವಿರುದ್ಧ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಉತ್ತರ ಪ್ರದೇಶದಲ್ಲಿ 08 ಮತ್ತು ದೆಹಲಿಯಲ್ಲಿ 07, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಲಾ ಎರಡು ಹಾಗೂ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ತಲಾ ಒಂದು ನಕಲಿ ವಿಶ್ವವಿದ್ಯಾಲಯಗಳಿವೆ ಎಂದು ಯುಜಿಸಿ ಹೇಳಿದೆ.
ಕರ್ನಾಟಕದಲ್ಲಿರುವ ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ, ಬೆಳಗಾಂ ನಕಲಿ ವಿವಿ ಎಂದು ಹೇಳಲಾಗಿದೆ. ದೇಶದ 24 ವಿವಿಗಳು ಸ್ವಯಂ ಘೋಷಿತ ವಿಶ್ವವಿದ್ಯಾನಿಲಯಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ವಿವಿಗಳು ಯಾವುದೇ ಪದವಿ ನೀಡುವಂತಹ ಅಧಿಕಾರವನ್ನು ಹೊಂದಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದ್ದಾರೆ.
ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿ:
ಉತ್ತರ ಪ್ರದೇಶ:
ವಾರಣೇಶ್ಯ ಸಂಸ್ಕೃತ ವಿಶ್ವವಿದ್ಯಾಲಯ,
ಮಹಿಳಾ ಗ್ರಾಮ ವಿದ್ಯಾಪೀಠ್, ವಾರಣಾಸಿ,
ಗಾಂಧಿ ಹಿಂದಿ ವಿದ್ಯಾಪಿತ್, ಅಲಹಾಬಾದ್,
ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ,
ನೇತಾಜಿ ಸುಭಾಷ್ ಚಂದ್ರ ಬೋಸ್ ಓಪನ್ ಯೂನಿವರ್ಸಿಟಿ, ಕಾನ್ಪುರ,
ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಅಲಿಗಡ,
ಮಹಾರಾಣಾ ಪ್ರತಾಪ್ ಶಿಕ್ಷ ನಿಕೇತನ್ ವಿಶ್ವವಿದ್ಯಾಲಯ, ಮಥುರಾ
ಪ್ರತಾಪಗಡ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷತ್, ನೋಯ್ಡಾ
ದೆಹಲಿ
ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್,
ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ,
ವೊಕೇಶನಲ್ ಯೂನಿವರ್ಸಿಟಿ,
ಎಡಿಆರ್ ಕೇಂದ್ರಿತ ನ್ಯಾಯಾಂಗ ವಿಶ್ವವಿದ್ಯಾಲಯ,
ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಸ್ಥೆ,
ವಿಶ್ವಕರ್ಮ ಸ್ವಯಂ ಉದ್ಯೋಗಕ್ಕಾಗಿ ಮುಕ್ತ ವಿಶ್ವವಿದ್ಯಾಲಯ ಮತ್ತು
ಆಧ್ಯಾತ್ಮಿಕ ವಿಶ್ವವಿದ್ಯಾಲಯ.
ಒಡಿಶಾ ಮತ್ತು ಪಶ್ಚಿಮ ಬಂಗಾಳ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಕೋಲ್ಕತ್ತಾ
ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್, ಕೋಲ್ಕತಾ
ನಬಭರತ್ ಶಿಕ್ಷಾ ಪರಿಷತ್, ರೂರ್ಕೆಲಾ,
ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಉತ್ತರ ಒರಿಸ್ಸಾ
ಅಲ್ಲದೆ, ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಪುದುಚೇರಿ,
ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ, ಆಂಧ್ರಪ್ರದೇಶ
ರಾಜಾ ಅರೇಬಿಕ್ ವಿಶ್ವವಿದ್ಯಾಲಯ, ನಾಗ್ಪುರ
ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ, ಬೆಳಗಾಂ
ಕೇರಳದ ಸೇಂಟ್ ಜಾನ್ಸ್ ವಿಶ್ವವಿದ್ಯಾಲಯ ನಕಲಿ ಎನ್ನಲಾಗಿದೆ.
ಇದನ್ನೂ ಓದಿ: ಡಿಜೆಹಳ್ಳಿ ಗಲಬೆಯ ಅಸಲಿಯತ್ತೇನು? ಪೊಲೀಸರು-ಸರ್ಕಾರ ಮಾಡಿದ್ದೇನು? ಸತ್ಯಶೋಧನಾ ವರದಿ!

