ನಿಮ್ಮ ಮನೆಯಂಗಳದಲ್ಲಿ ಇರುವ ಹಿರೇಕಾಯಿಯಲ್ಲಿ ಅಡಗಿದೆ ನೋಡಿ ಹಲವಾರು ರೋಗಗಳಿಗೆ ಪರಿಹಾರ..!

ನಿಮ್ಮ ಮನೆಯಂಗಳದಲ್ಲಿ ಇರುವ ಹಿರೇಕಾಯಿಯಲ್ಲಿ ಅಡಗಿದೆ ನೋಡಿ ಹಲವಾರು ರೋಗಗಳಿಗೆ ಪರಿಹಾರ..!

ಹೌದು ನಮ್ಮ ಮನೆಯ ಹಿತ್ತಲಲ್ಲಿ ಹಲವಾರು ರೀತಿಯ ತರಕಾರಿಗಳನ್ನು ಬೆಳೆಯುತ್ತೇವೆ ಆದರೆ ಅವುಗಳಿಂದ ಆಗುವ ಲಾಭಗಳ ಬಗ್ಗೆ ತಿಳಿದಿರುವುದಿಲ್ಲ ಹಾಗೆ ಹಿರೇಕಾಯಿಯಲ್ಲಿ ಸಹ ಅಡಗಿದೆ ಹಲವಾರು ರೀತಿಯ ರೋಗನಿವಾರಕ ಗುಣಗಳು.

ಹೀರೆಕಾಯಿ ಪೌಷ್ಟಿಕ ತರಕಾರಿ ಮಾತ್ರವಲ್ಲದೇ ಹಲವಾರು ಔಷಧ ಗುಣಗಳನ್ನು ಹೊಂದಿದೆ.

ಇಡೀ ದೇಹದಲ್ಲಿ ಉರಿ ಇದ್ದರೆ, ಹೀರೆಕಾಯಿಯ ತಿರುಳನ್ನು ತುಪ್ಪದಲ್ಲಿ ಬೇಯಿಸಿ ಮೊಸರಿನ ಜೊತೆ ಸೇವಿಸಿದರೆ ಉರಿ ಕಡಿಮೆಯಾಗಿ ದೇಹ ತಂಪಾಗುತ್ತದೆ.

ಪಿತ್ತದಿಂದ ಬರುವ ಜ್ವರಕ್ಕೆ ಹೀರೆಕಾಯಿ ಎಲೆಯ ಕಷಾಯವನ್ನು ಮಾಡಿ ಅದಕ್ಕೆ ಸಕ್ಕರೆ ಸೇರಿಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.

ದೇಹದ ಯಾವುದೇ ಭಾಗದಲ್ಲಿ ಉರಿ ಇದ್ದರೆ, ಹೀರೆಕಾಯಿ ತಿರುಳನ್ನು ನೀರಲ್ಲಿ ಅರೆದು ಲೇಪಿಸಿದರೆ, ಉರಿ ಗುಣವಾಗುತ್ತದೆ.

ಅಕ್ಕಿತೊಳೆದ ನೀರಿಗೆ ಜೀರಿಗೆ ಪುಡಿ, ಕಲ್ಲುಸಕ್ಕರೆ ಮತ್ತು ಹೀರೆಕಾಯಿಯ ಬೀಜಗಳನ್ನು ಸೇರಿಸಿ ಸೇವಿಸಿದರೆ ಮೂತ್ರ ಮಾರ್ಗದ ನೋವು ಕಡಿಮೆಯಾಗುತ್ತದೆ.

ಮೂಲವ್ಯಾದಿ ಹಾಗೂ ಮಹಿಳೆಯರ ಮಾಸಿಕ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ಬಲಿತ ಹೀರೆಕಾಯಿ ಬೀಜದ ಒಳ ಭಾಗವನ್ನು ತಣ್ಣೀರಿನಲ್ಲಿ ಸೇರಿಸಿ ಕುಡಿದರೆ ರಕ್ತಸ್ರಾವ ನಿಲ್ಲುತ್ತದೆ.

ಪಿತ್ತ ಹೆಚ್ಚಿದ್ದರೆ ಹೀರೆಕಾಯಿ ಹಾಗೂ ಹೆಸರುಬೇಳೆಯನ್ನು ಸಮಪ್ರಮಾಣದಲ್ಲಿ ಬೇಯಿಸಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights