ಮೋದಿ ತವರಿನಲ್ಲೇ ಬಿಜೆಪಿ ಬಂಡಾಯ: 38 ಕೌನ್ಸಿಲರ್‌ಗಳ ಅಮಾನತು!

ಆಪರೇಷನ್‌ ಮೂಲಕ ಎಲ್ಲೆಡೆ ಕಮಲ ಅರಳಿಸಲು ಯತ್ನಿಸುತ್ತಿರುವ ಬಿಜೆಪಿಗೇ ಆಪರೇಷನ್‌ ಶಾಕ್‌ ಎದುರಾಗಿದೆ. ಅದೂ ಪ್ರಧಾನಿ ಮೋದಿ ಯವರ ತವರು ರಾಜ್ಯ ಗುಜರಾತ್‌ನಲ್ಲೇ ಬಿಜೆಪಿಯೊಳಗೆ ಬಂಡಾಯ ಭುಗಿಲೆದ್ದಿರುವುದು ಬಿಜೆಪಿಗರನ್ನು ದಿಗ್ಭ್ರಾಂತರನ್ನಾಗಿಸಿದೆ.

ಆಗಸ್ಟ್‌ 24 ರಂದು ಗುಜರಾತ್‌ನ 6 ಪಾಲಿಕೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ  ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ಆದೇಶವನ್ನು ಉಲ್ಲಂಘಿಸಿದ ಆರೋಪದಲ್ಲಿ ಬಿಜೆಪಿಯ 38 ಕೌನ್ಸಿಲರ್‌ಗಳನ್ನು ಅಮಾನತು ಮಾಡಲಾಗಿದ್ದು, ಬಿಜೆಪಿಯಲ್ಲಿ ಬಂಡಾಯದ ಕಾವು ಆರಂಭವಾಗಿದೆ.

ಸೋಮವಾರ ನಡೆದ ಮತದಾನದ ವೇಳೆ ವಿವಿಧ ಪಾಲಿಕೆಗಳ 38 ಕೌನ್ಸಿಲರ್ ಗಳು ಪಕ್ಷದ ಆದೇಶ ಉಲ್ಲಂಘಿಸಿ ಚುನಾವಣೆಗೆ ಗೈರಾಗಿದ್ದರು  ಮತ್ತು ಪಕ್ಷದ ವಿರುದ್ಧ ಮತದಾನ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.

ಪ್ರಸ್ತುತ ಅಮಾನತು ಮಾಡಲಾಗಿರುವ ಕೌನ್ಸಿಲರ್ ಗಳ ಪೈಕಿ ರಾಜ್‌ಕೋಟ್‌ನ ಉಪ್ಲೇಟಾ ಮುನ್ಸಿಪಾಲಿಟಿಯ 14, ಕಚ್ ನ ರಾಪರ್ ಮುನ್ಸಿಪಾಲಿಟಿಯ 13, ಹರಿಜ್, ತರಾದ್, ಖೇಡ್‌ಬ್ರಹ್ಮ ಮತ್ತು ತಲಾಜಾ ಪಾಲಿಕೆಗಳ ಕೌನ್ಸಿಲರ್ ಗಳನ್ನು ಅಮಾನತು  ಮಾಡಲಾಗಿದೆ.


ಇದನ್ನೂ ಓದಿ:  ರಾಜಕಾರಣಿಗಳಿಗೆ ಆಟ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ: ಪರೀಕ್ಷೆ ರದ್ದುಗೊಳಿಸಲು ಕೆವಿಎಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights