ರಾಜ್ಯದ ಅನ್‌ಲಾಕ್‌ ಮಾರ್ಗಸೂಚಿ ಪ್ರಕಟ: ಶಾಲೆಗಳಿಗಿದ್ಯ ಓಪನ್ ಭಾಗ್ಯ!

ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ ತೆರವುಗೊಳಿಸುವ ಅನ್‌ಲಾಕ್‌ ಪ್ರಕ್ರಿಯೆಯಲ್ಲಿ ಅನ್‌ಲಾಕ್‌ 04ನ ಕಾರ್ಯಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ನಂತರದಲ್ಲಿ ರಾಜ್ಯವೂ ಕೇಂದ್ರದ ಮಾರ್ಗಸೂಚಿ ಆಧಾರದ ಮೇಲೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರಾಜ್ಯದ ಅನ್‌ಲಾಕ್‌ ಮಾರ್ಗಸೂಚಿಯ ಪ್ರಕಾರ, ಸೆಪ್ಟಂಬರ್ 30ರವರೆಗೂ ಶಾಲಾ ಕಾಲೇಜುಗಳನ್ನ ತೆರಯದಿರಲು ನಿರ್ಧಾರ ಮಾಡಲಾಗಿದೆ.

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಸೆಪ್ಟೆಂಬರ್ 30ರವರೆಗೂ ಶಾಲಾ-ಕಾಲೇಜು ಆರಂಭ ಇರುವುದಿಲ್ಲ. ಆನ್ ಲೈನ್ ಶಿಕ್ಷಣ ಮುಂದುವರಿಕೆಗೆ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 7ರಿಂದ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ.

ಹಾಗೆಯೇ ಥಿಯೇಟರ್, ಸ್ವಿಮ್ಮಿಂಗ್ ಪೂಲ್ ಗೆ ಅನುಮತಿ ನೀಡಿಲ್ಲ. ಮಲ್ಟಿಫ್ಲೆಕ್ಸ್, ಮನರಂಜನಾ ಪಾರ್ಕ್ ಗಳು ಕೂಡ ಬಂದ್ ಆಗಿರಲಿವೆ. ಸೆಪ್ಟೆಂಬರ್ 30ರವರೆಗೆ ಯಾವುದು ತೆರೆಯದಂತೆ ಮಾರ್ಗಸೂಚಿಯಲ್ಲಿ ನಿರ್ಬಂಧ  ಹೇರಲಾಗಿದೆ.

ಅನ್‌ಲಾಕ್‌ 04ನ ಮುಖ್ಯಾಂಶಗಳು: 

    ಶಿಕ್ಷಣ

    • ಶಾಲೆ ಕಾಲೇಜುಗಳನ್ನು ತೆರೆಯಲು ಮಾರ್ಗಸೂಚಿಯಲ್ಲಿ ಅವಕಾಶ.
    • 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗೆ ಭೇಟಿ ನೀಡಬಹುದು.
    • ಶೇಕಡಾ 50% ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳನ್ನು ಬಳಸಿಕೊಂಡು ತರಗತಿಗಳನ್ನು ನಡೆಸಬಹುದು.
    • ಪೋಷಕರ ಒಪ್ಪಿಗೆ ಮೇರೆಗೆ ವಿದ್ಯಾರ್ಥಿಗಳು ಶಾಲೆಗೆ ತೆರಳಬಹುದು.
    • ಕಂಟೈನ್ಮೆಂಟ್ ಝೋನ್ ಹೊರೆತಾದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
    • ಕೌಶಲ್ಯ ಅಥಾವ ಉದ್ಯೋಗ ತರಬೇತಿಗಳಿಗೆ ಅನುಮತಿ.
    • 1 ರಿಂದ 9ರ ವರೆಗಿನ ಶಾಲೆಗಳಿಗೆ ಸೆಪ್ಟೆಂಬರ್ 30 ವರೆಗೂ ನಿರ್ಬಂಧ.
    • ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬಹುದು.
    •  ಸಂಶೋಧನೆ ( ಪಿಎಚ್ ಡಿ ) ತಾಂತ್ರಿಕ ಮತ್ತು ವೃತ್ತಿಪರ ಸ್ನಾತಕೋತ್ತರ ಕೋರ್ಸ್ ಗಳು ನಡೆಸಲು ಒಪ್ಪಿಗೆ.
    • ಸಂಚಾರ

    • ಅಂತರರಾಜ್ಯ ಮತ್ತು ರಾಜ್ಯದೊಳಿಗೆ ಸಂಚಾರಿಸಲು ಮುಕ್ತ ಅವಕಾಶ.
    • ಇನ್ನು ಮುಂದೆ ಯಾವುದೇ ಇ ಪಾಸ್‌ಗಳ ಅವಶ್ಯಕತೆ ಇಲ್ಲ
    • ಯಾವುದಕ್ಕೆ ಅವಕಾಶವಿಲ್ಲ?

    • • ಸಿನಿಮಾ ಹಾಲ್, ಈಜುಕೊಳಗಳಿಗೆ ನಿಷೇಧ ಮುಂದುವರಿಕೆ.
      • ಮನೋರಂಜನಾ ಪಾರ್ಕ್‌ಗಳಿಗೆ ಅವಕಾಶವಿಲ್ಲ.
      • ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶವಿಲ್ಲ.
      • ಕೇವಲ ಒಂದೇ ಭಾರತ್ ಮಿಷನ್ ಅಡಿಯಲ್ಲಿ ಮಾತ್ರ ಅವಕಾಶ

ಇದನ್ನೂ ಓದಿನಮ್ಮ ಮೆಟ್ರೋ ಬೇಗ ಬೇಗ ಹತ್ರೋ ಅನ್ನೋ ಮುನ್ನ ಇದು ತಿಳಿದಿರಲಿ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights