ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಫೆಬ್ರವರಿ ಒಳಗೆ ಅಂತ್ಯ..!

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಫೆಬ್ರವರಿ ಅಂತ್ಯದ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಸೌತ್ ವೆಸ್ಟರ್ನ್ ರೈಲ್ವೆ (ಎಸ್‌ಡಬ್ಲ್ಯುಆರ್) ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಎಸ್‌ಡಬ್ಲ್ಯುಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ, “ಫೆಬ್ರವರಿ ಅಂತ್ಯದ ವೇಳೆಗೆ ಟರ್ಮಿನಲ್ ಸಿದ್ಧವಾಗುವ ನಿರೀಕ್ಷೆಯಿದೆ. ಈ ಟರ್ಮಿನಲ್ ಕಾರ್ಯಗತವಾದ ನಂತರ ಬೆಂಗಳೂರಿನಿಂದ ಮುಂಬೈ ಮತ್ತು ಚೆನ್ನೈನಂತಹ ಇತರ ಮಹಾನಗರಗಳಿಗೆ ಹೋಗುವ ರೈಲುಗಳು ಮತ್ತು ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಬೆಂಗಳೂರನ್ನು ಸಂಪರ್ಕಿಸುವ ರೈಲುಗಳನ್ನು ಸಹ ಓಡಿಸಬಹುದು ” ಎಂದಿದ್ದಾರೆ.

ರೈಲ್ವೆ ಟರ್ಮಿನಲ್ ಅನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ರೂಪಿಸಲಾಗಿದೆ. ಅಧಿಕಾರಿಗಳ ಪ್ರಕಾರ, 314 ಕೋಟಿ ರೂ. ವೆಚ್ಚದ ಟರ್ಮಿನಲ್ ದೇಶದ ಮೊದಲ ಅತಿದೊಡ್ಡ ಹವಾನಿಯಂತ್ರಿತ ರೈಲು ಕೇಂದ್ರವಾಗಿದೆ. ಇದು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವವನ್ನು ನೀಡುತ್ತದೆ ಎಂದಿದ್ದಾರೆ.

ಅಧಿಕಾರಿಗಳ ಪ್ರಕಾರ, ರೈಲ್ವೆ ಟರ್ಮಿನಲ್ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿದೆ. ಪ್ರತಿ ಪ್ಲಾಟ್‌ಫಾರ್ಮ್ 15 ಮೀ ಅಗಲ ಮತ್ತು 600 ಮೀ ಉದ್ದವಿದೆ.

4,200 ಚದರ ಮೀಟರ್ ಟರ್ಮಿನಲ್ ನಿಂದ ಪ್ರತಿದಿನ 50 ರೈಲುಗಳು ಚಲಿಸುತ್ತವೆ. ಇಲ್ಲಿ ಎರಡು ಸುರಂಗಮಾರ್ಗಗಳನ್ನು ಸಹ ನಿರ್ಮಿಸಲಾಗಿದೆ. ಇದು ಏಳು ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುತ್ತದೆ. ತನ್ನದೇ ಆದ ಮಳೆನೀರು ಕೊಯ್ಲು ಮತ್ತು ಶೇಖರಣಾ ಸೌಲಭ್ಯವನ್ನು ಹೊಂದಿರುತ್ತದೆ. ನಾಲ್ಕು ಲಕ್ಷ ಲೀಟರ್ ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕವೂ ಸಹ ಪೈಪ್‌ಲೈನ್‌ನಲ್ಲಿದೆ. ಟರ್ಮಿನಲ್ 200 ಕ್ಕೂ ಹೆಚ್ಚು ಕಾರುಗಳು ಮತ್ತು 900 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಸ್ಥಳವನ್ನು ಹೊಂದಿರುತ್ತದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಎಂಜಿನಿಯರ್ ಸರ್ ಎಂ ವಿಶ್ವೇಶ್ವರಾಯ್ಯ ಟರ್ಮಿನಲ್ ಎಂದು ಮರುನಾಮಕರಣ ಮಾಡಿತ್ತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights