ಲಾಕ್‌ಡೌನ್‌ ಎಂಬುದು ಅಸಂಘಟಿತರು ಮತ್ತು ಬಡವರ ಮೇಲಿನ ದಾಳಿ: ರಾಹುಲ್‌ ಗಾಂಧಿ

ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌, ಕೊರೊನಾ ವಿರುದ್ಧದ ದಾಳಿಯಲ್ಲ, ಅದು ಅಸಂಘಟಿತರ ಮತ್ತು ಬಡವರ ಮೇಲಿನ ದಾಳಿ. ಲಾಕ್‌ಡೌನ್‌ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು, ಬಡವರ ಪಾಲಿಗೆ ಮರಣದಂಡನೆಯಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಹೇಳಿದ್ದಾರೆ.

ಕೊರೊನಾ ಹೆಸರಿನದಲ್ಲಿ ಅಸಂಘಟಿತರು ಹಾಗೂ ಯುವಕರ ಭವಿಷ್ಯದ ಮೇಲೆ ಆಕ್ರಮಣ ನಡೆಸಲಾಗಿದೆ. ಇದರ ವಿರುದ್ಧ ಪ್ರತಿಯೊಬ್ಬರು ನಿಲ್ಲಬೇಕು ಎಂದು ರಾಹುಲ್‌ ಕರೆಕೊಟ್ಟಿದ್ದಾರೆ.

‘ಬಡವರು, ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು, ಕೂಲಿ ಕಾರ್ಮಿಕರಂತಹ ದುಡಿಯುವ ವರ್ಗ ದಿನನಿತ್ಯದ ದುಡಿಯನ್ನು ಅವಲಂಭಿಸಿ ಜೀವನ ಸಾಗಿಸುತ್ತದೆ. ದೇಶದಲ್ಲಿ ಈ ಜನರ ಪ್ರಮಾಣವೇ ಹೆಚ್ಚಿದೆ. ಹೀಗಿರುವಾಗ ಯಾವುದೇ ಮುನ್ಸೂಚನೆಯನ್ನೂ ನೀಡದೆ ಲಾಕ್‌ಡೌನ್‌ ಹೇರಿ, ಜನರ ಜೀವನವನ್ನು ಅಸ್ಥವ್ಯಸ್ತ ಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ಆಹಾರ, ನೀರು ನೀಡಿ, ಪ್ರಯಾಣ ದರ ವಿಧಿಸಬೇಡಿ: ಸುಪ್ರೀಂ ಕೋರ್ಟ್‌ |  Prajavani

ಕೊರೊನಾ ವಿರುದ್ಧ 21 ದಿನಗಳ ಹೋರಾಟ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಈ ಅವಧಿಯಲ್ಲಿ ಲಕ್ಷಗಟ್ಟಲೆ ಉದ್ಯೋಗ ಮತ್ತು ಸಣ್ಣ ಉದ್ದಿಮೆಗಳನ್ನು ಮುಚ್ಚಿಹೋದವು. ಜನರು ಬೀದಿಪಾಲಾಗಿ ರಸ್ತೆಗಳಲ್ಲಿ ಸಾವಿರಾರು ಕಿ.ಮೀ ನಡೆದಿದ್ದಾರೆ. ಹಲವರು ಮನೆ ತಲುಪದೆ ರಸ್ತೆಯಲ್ಲೇ ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

‘ಸಣ್ಣ ಮತ್ತು ಮಧ್ಯಮ ವ್ಯಾಪಾರಗಳು ಹಣವಿಲ್ಲದೆ ಬದುಕಲು ಸಾಧ್ಯವಾಗುವುದಿಲ್ಲ. ಅವರಿಗೆ ಸರ್ಕಾರ ಪರಿಹಾರದ ಪ್ಯಾಕೇಜ್ ಸಿದ್ಧಪಡಿಸಬೇಕು ಎಂದು ನಾವು ಸೂಚಿಸಿದ್ದೇವೆ. ಆದರೆ ಸರ್ಕಾರ ಯಾವ ವ್ಯವಸ್ಥೆಯನ್ನು ಮಾಡಿಲ್ಲ. ಬದಲಾಗಿ, ಹದಿನೈದು-ಇಪ್ಪತ್ತು ಶ್ರೀಮಂತರ ಕೋಟ್ಯಂತರ ಮೌಲ್ಯದ ತೆರಿಗೆಯನ್ನು ಮನ್ನಾ ಮಾಡಿದೆ’ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಮೋದಿ ಸರ್ಕಾರದ ಹೇಡಿತನದ ಕ್ರಮಗಳಿಂದ ಭಾರತ ಬೆಲೆ ತೆರಬೇಕಾಗಿದೆ: ರಾಹುಲ್‌ಗಾಂಧಿ

Spread the love

Leave a Reply

Your email address will not be published. Required fields are marked *