ಭಾರತದಲ್ಲಿ ಮುಂದುವರೆದ ಕೊರೊನಾ ಹಾವಳಿ : 60 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!
ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳೇ ಕಾಣ ಸಿಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ 82,170 ಹೊಸ ಪ್ರಕರಣಗಳು ದಾಖಲಾಗಿದ್ದು ಆ ಮೂಲಕ ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷ ದಾಟಿದೆ.
ಕೋವಿಡ್ -19 ವಿರುದ್ಧ ಭಾರತದ ಜನ ಪ್ರತಿನಿತ್ಯ ಹೋರಾಡುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಶನಿವಾರ ಐಸಿಎಂಆರ್ನ ಎರಡನೇ ಸಿರೊ-ಸಮೀಕ್ಷೆಯನ್ನು ಉಲ್ಲೇಖಿಸಿ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 82,170 ಹೊಸ ಪ್ರಕರಣಗಳು ಮತ್ತು 1,039 ಸಾವುಗಳು ದಾಖಲಾಗಿ ಭಾರತದ ಕೊರೊನಾವೈರಸ್ ಸೋಮವಾರ 60 ಲಕ್ಷ ದಾಟಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ಒಟ್ಟು 60,74,703 ಸೋಂಕಿತರ ಪೈಕಿ 9,62,640 ಸಕ್ರಿಯ ಪ್ರಕರಣಗಳು, 5,01,6521 ಸೋಂಕಿತರು ಗುಣಮುಖರಾಗಿದ್ದು, 95,542 ಸೋಂಕಿತರು ಸಾವನ್ನಪ್ಪಿದ್ದಾರೆ.

