ಭಯಾನಕ ಕೊಲೆ : 80ಕ್ಕೂ ಹೆಚ್ಚು ಬಾರಿ ಚುಚ್ಚಿ ಮೊಮ್ಮಗಳನ್ನು ಕೊಂದ ಅಜ್ಜಾ…!

ಭೋಪಾಲ್‌ನ ಅಯೋಧ್ಯ ನಗರ ಪ್ರದೇಶದಲ್ಲಿ ಭಯಾನಕ ಕೊಲೆಯೊಂದು ಜನರನ್ನು ಬೆಚ್ಚಿಬೀಳಿಸಿದೆ. ಒಂದಲ್ಲಾ ಎರಡಲ್ಲಾ 80ಕ್ಕೂ ಹೆಚ್ಚು ಬಾರಿ ಚುಚ್ಚಿ ಬಾಲಕಿಯನ್ನು ಕೊಲೆ ಮಾಡಿದ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಹೀಗೆ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದ ಬಾಲಕಿಯ ಶವ ಪತ್ತೆಯಾಗಿದೆ. ಆರಂಭದಲ್ಲಿ ಬಾಲಕಿಯ ಮೇಲೆ ಪ್ರಾಣಿಗಳು ದಾಳಿ ನಡೆಸಿರಬಹುದು ಎಂದು ಅನುಮಾನಿಸಿದ್ದ ಪೊಲೀಸರಿಗೆ ಶವಪರೀಕ್ಷೆಯ ಬಳಿಕ ಭಯಾನಕ ಸತ್ಯ ತಿಳಿದಿದೆ. ಬಾಲಕಿ ಪ್ರಾಣಿಗಳ ದಾಳಿಗೆ ಸಾವನ್ನಪ್ಪಿರಲಿಲ್ಲ ಬದಲಿಗೆ ಆಕೆಯನ್ನು ಕೊಲೆ ಮಾಡಲಾಗಿತ್ತು. ಕೊಲೆಯ ಜಾಡುಹಿಡಿದು ಹೊರಟ ಪೊಲೀಸರ ಕೈಗೆ ಸಿಕ್ಕಿದ್ದು ಬಾಲಕಿಯ ಅಜ್ಜಾ.

ಹೌದು… ಬಾಲಕನೊಂದಿಗಿನ ಅಕ್ರಮ ಸಂಬಂಧದ ನಂತರ ಬಾಲಕಿ ಗರ್ಭಿಣಿಯಾಗಿದ್ದಳು. ಈ ಹಿಂದೆ ಮಗುವಿಗೆ ಜನ್ಮ ಕೂಡ ನೀಡಿದ್ದಳು. ತಾಯಿಯೇ ಗರ್ಭಿಣಿ ಮಗಳಿಗೆ ಮನೆಯಲ್ಲಿ ಹೆರಿಗೆ ಮಾಡಿಸಿದ್ದರು. ಮಗಳು ಮಗುವಿಗೆ ಜನ್ಮ ನೀಡಿದಾಗ ಸಮಾಜದ ಭಯ ಅವರನ್ನು ಕಾಡಿದೆ. ಹೀಗಾಗಿ ಬಾಲಕಿಯ ಅಜ್ಜಾ-ಅಜ್ಜಿ ಆಕೆಯನ್ನು ಕೊಂದಿದ್ದಾರೆ. ಈ ಪ್ರಕರಣದಲ್ಲಿ ಬಾಲಕಿಯ ಅಜ್ಜಾ -ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, 2 ದಿನಗಳ ಹಿಂದೆ ಅಜ್ಜಾ-ಅಜ್ಜಿ ರಾತ್ರಿಯ ಕತ್ತಲೆಯಲ್ಲಿ ಚಾಕು ಬ್ಲೇಡ್‌ನಿಂದ ಚುಚ್ಚು ಹುಡುಗಿ ಸತ್ತಾಗ ಆಕೆಯ ದೇಹವನ್ನು ಪೊದೆಗಳಲ್ಲಿ ಎಸೆದಿದ್ದಾರೆ. ನಂತರ ಭೋಪಾಲ್‌ನ ಅಯೋಧ್ಯ ನಗರ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಪೊದೆಗಳಿಂದ 2 ದಿನಗಳ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯ ದೇಹದ ಮೇಲಿನ ಗಾಯವನ್ನು ನೋಡಿದ ಪೊಲೀಸರು ಆರಂಭದಲ್ಲಿ ಯಾವುದಾದರೂ ಪ್ರಾಣಿ ಬಾಲಕಿಯನ್ನು ಕೊಂದಿರಬೇಕು ಎಂದು ಭಾವಿಸಿದ್ದರು. ಆದರೆ ಮರಣೋತ್ತರ ವರದಿಯಲ್ಲಿ ಆಕೆಯ ಮೇಲೆ ಹಲ್ಲೆ ನಡೆದಿರುವುದು ಬಹಿರಂಗವಾಗಿದೆ.

ಮರಣೋತ್ತರ ವರದಿಯ ಪ್ರಕಾರ, ತೀಕ್ಷ್ಣವಾದ ಆಯುಧದಿಂದ ಬಾಲಕಿಯ ದೇಹದ ಮೇಲೆ 80 ಕ್ಕೂ ಹೆಚ್ಚು ದಾಳಿಗಳು ನಡೆದಿವೆ ಎಂಬುದು ತಿಳುದು ಬಂದಿದೆ. ಇದರ ನಂತರ ತನಿಖೆಯ ದಿಕ್ಕು ಬದಲಾಯಿತು. ಪೊಲೀಸರು ಅದನ್ನು ಕೊಲೆ ಕೋನದಿಂದ ತನಿಖೆ ಮಾಡಲು ಪ್ರಾರಂಭಿಸಿದರು. ಪ್ರಕರಣದ ತನಿಖೆಯಲ್ಲಿ ತೊಡಗಿದರು. ಪೊಲೀಸರ ಮುಂದೆ ಮೊದಲ ಪ್ರಮುಖ ಸವಾಲು ಮಗುವಿನ ಪೋಷಕರನ್ನು ಹುಡುಕುವುದು. ಇದಕ್ಕಾಗಿ ಪೊಲೀಸರು ದೇಹವನ್ನು ಸ್ವೀಕರಿಸಿದ ಒಂದು ವಾರದೊಳಗೆ ಜನಿಸಿದ ಹೆಣ್ಣು ಮಗುವಿನ ಬಗ್ಗೆ ಆಸ್ಪತ್ರೆಗಳಿಂದ ಮಾಹಿತಿ ಸಂಗ್ರಹಿಸಿದರು. ಘಟನೆ ನಡೆದ ಸ್ಥಳದಿಂದ 5 ಕಿ.ಮೀ.ವರೆಗೆ ಸ್ಥಾಪಿಸಲಾದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ತುಣುಕನ್ನು ಸಹ ಪರಿಶೀಲಿಸಿದರು.

ತನಿಖೆಯ ವೇಳೆ, ಸೂಲಗಿತ್ತಿ ವಿದ್ಯಾಬಾಯಿ ಮತ್ತು ಪತಿ ಪುರಾನ್ ಸಿಂಗ್ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪುರಾನ್ ಸಿಂಗ್ ಅಹಿರ್ವಾರ್ ಮತ್ತು ಅವರ ಪತ್ನಿಯನ್ನು ಪೊಲೀಸರು ಕಟ್ಟುನಿಟ್ಟಾಗಿ ಪ್ರಶ್ನಿಸಿದಾಗ ಈ ವಿಷಯವನ್ನು ಬಹಿರಂಗವಾಗಿದೆ. ಪೊಲೀಸರ ಪ್ರಕಾರ, ಇಬ್ಬರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ‘ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ ನಂತರ ತಮ್ಮ ಮಗಳು ಜನವರಿಯಲ್ಲಿ ಗರ್ಭಿಣಿಯಾಗಿದ್ದಳು.  ಆದ್ದರಿಂದ ತಾಯಿ ವಿದ್ಯಾಬಾಯಿ ಗರ್ಭಿಣಿ ಮಗಳನ್ನು ಮನೆಯಲ್ಲಿ ಹೆರಿಗೆ ಮಾಡಿದೆ. ಆದರೆ ಸಮಾಜಕ್ಕೆ ಹೆದರಿ ನಾವು ಆಕೆಯನ್ನು ಕೊಲೆ ಮಾಡಿದೆವು’ ಎಂದಿದ್ದಾರೆ. ಘಟನೆಯಲ್ಲಿ ಬಳಸಿದ ಚಾಕು ಮತ್ತು ಬ್ಲೇಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights