ಕಲ್ಪನಾ ಚಾವ್ಲಾ ಹೆಸರಿನ ಎನ್‌ಜಿ-14 ಸಿಗ್ನಸ್ ಗಗನನೌಕೆ ಯಶಸ್ವಿ ಉಡಾವಣೆ!

ಭಾರತೀಯ ಮೂಲಕ ನಾಸಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಡಲಾಗಿರುವ  ಎನ್‌ಜಿ-14 ಸಿಗ್ನಸ್ ಗಗನನೌಕೆಯನ್ನು ನಾಸಾದ ವಾಲಪ್ಸ್‌ ಫ್ಲೈಟ್‌ ಫೆಸಿಲಿಟಿ ಉಡ್ಡಯನ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.

ಅಮೆರಿಕದ ನಾರ್ಥ್‌ರಾಪ್‌ ಗ್ರುಮ್ಯಾನ್ ಎಂಬ ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಕಂಪನಿಯು ‘ಎನ್‌ಜಿ-14 ಸಿಗ್ನಸ್‌’  ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕು ಮತ್ತು ಸರಕುಗಳನ್ನು ಹೊತ್ತೊಯ್ಯುತ್ತಿದೆ.

ಬಾಹ್ಯಾಕಾಶ ಅನ್ವೇಷಣೆ, ಸಂಶೋಧನೆಗೆ ಅಗತ್ಯವಿರುವ ಒಟ್ಟು 3,629 ಕೆ.ಜಿ ತೂಕದ ಸಾಮಗ್ರಿಗಳನ್ನು ಹೊತ್ತು ಸಾಗಲಿರುವ ಈ ನೌಕೆ ಎರಡು ದಿನಗಳ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸೇರಲಿದೆ.

The Cygnus cargo craft from Northrop Grumman | NASA

ಭಾರತೀಯ ಮೂಲದ ಕಲ್ಪನಾ ಚಾವ್ಲಾ ಅವರು 1962ರ ಮಾರ್ಚ್‌ 17ರಂದು ಹರಿಯಾಣದ ಕರ್ನಾಲ್‌ನಲ್ಲಿ ಜನಿಸಿದ್ದರು. ಪಂಜಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. 1984ರಲ್ಲಿ ಅಮೆರಿಕಾದ ಯೂನಿವರ್ಸಿಟಿ ಆಫ್‌ ಟೆಕ್ಸಾಸ್‌ನಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು, 1988ರಲ್ಲಿ ಕೊಲರಾಡೊ ಯೂನಿವರ್ಸಿಟಿಯಿಂದ ಪಿಎಚ್‌.ಡಿ ಪಡೆದಿದ್ದರು. ನಂತರ ಅವರು ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಅಮೇಸ್‌ ರಿಸರ್ಚ್‌ ಸೆಂಟರ್‌ನಲ್ಲಿ ಸಂಶೋಧಕಿಯಾಗಿ ಸೇರಿಕೊಂಡರು.

ಅಲ್ಲಿಂದ,  ನಾಸಾ ಉಡಾವಣೆ ಮಾಡಿದ್ದ ಕೊಲಂಬಿಯಾ ಗಗನನೌಕೆಯ ತಜ್ಞರ ತಂಡದ ಸದಸ್ಯೆಯಾಗಿದ್ದ ಇವರು, 2003ರಲ್ಲಿ ಗಗನಯಾತ್ರೆಗೆ ತೆರಳಿದ್ದರು. ಎಸ್‌ಟಿಎಸ್‌ 87 ಎಂಬ ಗಗನನೌಕೆ ಭೂಮಿಗೆ ಮರಳವಾಗ ವಿಫಲಗೊಂಡು ಚಾವ್ಲಾ ಸೇರಿದಂತೆ ಏಳು ಜನರು ಸಾವನ್ನಪ್ಪಿದರು.

ಕೊಲಂಬಿಯಾ ಪರ್ವತಶ್ರೇಣಿಯಲ್ಲಿರುವ ಏಳು ಪರ್ವತಗಳಗಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಸಾವನ್ನಪ್ಪಿದ್ದ ಏಳು ಜನರ ಹೆಸರನ್ನು ಇಡಲಾಗಿದ್ದು, ಅದರಲ್ಲಿ ಒಂದು ಪರ್ವತೆಕ್ಕೆ ಚಾವ್ಲಾ ಪರ್ವತ ಎಂದು ಹೆಸರಿಡಲಾಗಿದೆ. ಅಲ್ಲದೆ, ನ್ಯಾಯಾರ್ಕ್‌ ನಗರದ ಜಾಕ್ಸನ್ ಹೈಟ್ಸ್ ವಲಯದ “ಲಿಟಲ್ ಇಂಡಿಯಾ” ಪ್ರದೇಶದ 74ನೇ ರಸ್ತೆಯನ್ನು “ಕಲ್ಪನಾ ಚಾವ್ಲಾ ಪಥ” ಎಂದು ಹೆಸರಿಸಲಾಗಿದೆ.


ಇದನ್ನೂ ಓದಿ: ವಿಶ್ವದ ಅತಿ ಉದ್ದವಾದ ಅಟಲ್‌ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights