ವಿಶ್ವದ ಅತಿ ಉದ್ದವಾದ ಅಟಲ್‌ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ!

ವಿಶ್ವದಲ್ಲಿಯೇ ಅತಿ ಉದ್ದವಾದ ಸುರಂಗ ಎಂದು ಖ್ಯಾತಿ ಪಡೆದಿರುವ, ಹಿಮಾಚಲ ಪ್ರದೇಶದ ಮನಾಲಿಯಿಂದ ಲೇಹ್‌ಗೆ ಸಂಪರ್ಕ ಕಲ್ಪಿಸುವ ಅಟಲ್ ಸುರಂಗ ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

09.2 ಕಿಮೀ ಇರುವ ಈ ಸುರಂಗ ಮಾರ್ಗವು  ಮನಾಲಿ ಮತ್ತು ಲೇಹ್ ನಡವಿನ ಸಂಪರ್ಕ ಕೊಂಡಿಯಾಗಿದ್ದು, ಈ ಎರಡು ನಗರಗಳ ನಡುವಿನ 46 ಕಿ.ಮೀ. ಪ್ರಯಾಣದ ಅಂತರವನ್ನು ಕಡಿಮೆ ಮಾಡಲಿದೆ. ಇದರಿಂದಾಗಿ ಪ್ರಯಾಣಿಕರಿಗೆ 4ರಿಂದ 5 ಗಂಟೆ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

ಹಿಮತುಂಬಿದ ಪ್ರದೇಶವಾಗಿರುವ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುವುದರಿಂದಾಗಿ ಮನಾಲಿ ಮತ್ತು ಲೇಹ್ ನಗರಗಳ ನಡುವೆ ವರ್ಷದ 6 ತಿಂಗಳು ಮಾತ್ರ ಸಂಚಾರ ಸಂಪರ್ಕ ಸಾಧ್ಯವಾಗುತ್ತಿತ್ತು. ಇದರಿಂದಾಗಿ ಈ ಎರಡೂ ನಗರಗಳ ನಡುವೆ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜನೆ ಮಾಡಲಾಗಿತ್ತು.

ಮನಾಲಿ ಪಟ್ಟಣದಿಂದ 25 ಕಿ.ಮೀ. ದೂರದಲ್ಲಿರುವ ಲೌಹಾಲ್‌ನಿಂದ ಆರಂಭವಾಗುವ ಈ ಸುರಂಗ ಮಾರ್ಗ ತೆಲ್ಲಿಂಗ್ ಎಂಬಲ್ಲಿ ಕೊನೆಯಾಗುತ್ತದೆ. ಸುರಂಗವು 10.5 ಮೀಟರ್ ಅಗಲವಿದ್ದು, ಪ್ರತಿ 250 ಮೀಟರ್​ಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುರಂಗ ಮಾರ್ಗ ನಿರ್ಮಾಣಕ್ಕೆ ಒಟ್ಟು 3,500 ಕೋಟಿ ರೂ. ಖರ್ಚು ಮಾಡಲಾಗಿದೆ. ಒಂದು ದಿನಕ್ಕೆ ಇದರಲ್ಲಿ 1,500 ಟ್ರಕ್​ಗಳು ಮತ್ತು ಸುಮಾರು 3 ಸಾವಿರ ಕಾರುಗಳು ಸಂಚರಿಸಬಹುದಾಗಿದೆ ಎಂದು ಹೇಳಲಾಗಿದೆ.

1983ರಲ್ಲಿ ಇಂದಿರಾ ಗಾಂಧಿ ಸರ್ಕಾರ ಈ ಸುರಂಗ ಮಾರ್ಗಕ್ಕೆ ಯೋಜನೆ ರೂಪಿಸಿದ್ದರು. 2000ರಲ್ಲಿ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಶಂಕು ಸ್ಥಾಪನೆ ನೆರವೇರಿಸಿದ್ದರು. ಸುರಂಗದ ಕೆಲಸ ಪದೇ ಪದೇ ನಿಂತು ಹೋಗಿ 2010ರಲ್ಲಿ ಪುನರಾರಂಭವಾಯಿತು. ಅಟಲ್ ಬಿಹಾರಿ ವಾಜಪೇಯಿ 95ನೇ ಜಯಂತಿ ನೆನಪಿಗಾಗಿ 2019ರಲ್ಲಿ ರೋಹ್ಟಾಂಗ್ ಮಾರ್ಗವನ್ನು ಅಟಲ್ ಸುರಂಗ ಎಂದು ಮರುನಾಮಕರಣ ಮಾಡಲಾಯಿತು.


ಇದನ್ನೂ ಓದಿ: Fact Check: ಬಿಜೆಪಿ ನಾಯಕರ ಪಕ್ಕದಲ್ಲಿ ನಿಂತಿರುವ ಈ ವ್ಯಕ್ತಿ ಹತ್ರಾಸ್ ಅತ್ಯಾಚಾರ ಆರೋಪಿಗಳ ತಂದೆ ಅಲ್ಲ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights