ಕೊನೆಗೂ ರಾಹುಲ್, ಪ್ರಿಯಾಂಕಾಗೆ ಹತ್ರಾಸ್‌ ಹೋಗಲು ಅವಕಾಶ ಕೊಟ್ಟ ನೋಯ್ಡಾ ಪೊಲೀಸ್!

ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಪರಿಗಣಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಸಂಸದರ ನಿಯೋಗದ ಐವರು ಸದಸ್ಯರಿಗೆ ಮಾತ್ರ ನೋಯ್ಡಾ ಮೂಲಕ ಹತ್ರಾಸ್‌ಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ಗೌತಮ್ ಬುದ್ಧ ನಗರ ಪೊಲೀಸರು ಶನಿವಾರ ತಿಳಿಸಿದ್ದಾರೆ.

ದೆಹಲಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ದಲಿತ ಮಹಿಳೆಯ ಕುಟುಂಬವನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರು ಪಶ್ಚಿಮ ಯುಪಿಯ ಹತ್ರಾಸ್ಗೆ ತೆರಳಿದ್ದಾರೆ. ಹದಿನೈದು ದಿನಗಳ ನಂತರ ತನ್ನ ಹಳ್ಳಿಯ ಹೊರಗೆ ನಾಲ್ಕು ಪುರುಷರು ಅತ್ಯಾಚಾರಕ್ಕೊಳಗಾದ ಯುವತಿ ಸಾವನ್ನಪ್ಪಿದ್ದಳು. ಆಕೆಯ ದೇಹವನ್ನು ಪೋಷಕರಿಗೆ ನೀಡದೇ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದಾರೆಂದು ಆರೋಪ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಸಂತ್ರಸ್ತೆಯ ಕುಟುಂಬ ಭೇಟಿಗೆ ರಾಜಕೀಯ ವ್ಯಕ್ತಿಗಳ ಹಾಗೈ ಮಾಧ್ಯಮದವರ ಭೇಟಿಗೆ ಅವಕಾಶ ನೀಡದೇ ಪೊಲೀಸರು ಒಳಸಂಚು ನಾಡೆಸಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಈ ಹಿಂದೆ ಹತ್ರಾಸ್ ಹೋಗಲು ಪ್ರಯತ್ನಿಸಿದ್ದ ರಾಹುಲ್ ಗಾಂಧಿಯರನ್ನು ತಡೆಯಲಾಗಿತ್ತು. ಪ್ರಯತ್ನ ಬಿಡದ ರಾಹುಲ್ ಇಂದು ಮತ್ತೆ ಹತ್ರಾಸ್ ಗೆ ಹೋಗಲು ಯಶಸ್ವಿಯಾಗಿದ್ದಾರೆ.

ಈ ನಡುವೆ ಯುಪಿಯಲ್ಲಿ ಕೋವಿಡ್ -19ನಿಂದಾಗಿ ಏಕಾಏಕಿ ಸಿಆರ್‌ಪಿಸಿ ಸೆಕ್ಷನ್ 144 ಅನ್ನು ನೋಯ್ಡಾ, ಹತ್ರಾಸ್ ಮತ್ತು ಉತ್ತರ ಪ್ರದೇಶದ ಇತರ ಕೆಲವು ಜಿಲ್ಲೆಗಳಲ್ಲಿ ವಿಧಿಸಲಾಗಿದೆ.

ಸಾಮಾಜಿಕ ದೂರ ಮತ್ತು ಇತರ ಸಂಬಂಧಿತ ನಿಯಮಗಳನ್ನು ಪರಿಗಣಿಸಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಐದು ಜನರಿಗೆ ಹತ್ರಾಸ್ ಗೆ ತೆರಳಲು ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಅಲೋಕ್ ಸಿಂಗ್ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights