ಜಮ್ಮುವಿನಲ್ಲಿ 185 ಕೈದಿಗಳಿಗೆ ಕೊರೊನಾ : ತಾತ್ಕಾಲಿಕ ಜೈಲುಗಳ ಸ್ಥಾಪನೆ!

ಜಮ್ಮುವಿನಲ್ಲಿ 185 ಕೈದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರನ್ನು ಪ್ರತ್ಯೇಕಿಸಲು ತಾತ್ಕಾಲಿಕ ಜೈಲುಗಳನ್ನು ಸ್ಥಾಪಿಸಲಾಗುತ್ತಿದೆ.

ಈ ವರೆಗೆ ಜಮ್ಮು-ಕಾಶ್ಮೀರದಲ್ಲಿ ಒಟ್ಟು 77,253 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 16,089 ಸಕ್ರಿಯ ಪ್ರಕರಣಗಳಿವೆ. 59,952 ಸೋಂಕಿತರು ಗುಣಮುಖರಾಗಿದ್ದು ಮಹಾಮಾರಿಗೆ 1,212 ಜನ ಬಲಿಯಾಗಿದ್ದಾರೆ. 16.7 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ದಾಖಲಿಸಿದೆ.

ಕಳೆದ 24 ಗಂಟೆಗಳಲ್ಲಿ 79,476 ಹೊಸ ಪ್ರಕರಣಗಳು ಮತ್ತು 1,069 ಸಾವುಗಳು ದಾಖಲಾಗಿದ್ದು, ಭಾರತದ ಕೊರೊನಾವೈರಸ್ ಸಂಖ್ಯೆ 64,73,545 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

79,476 ಹೊಸ ಪ್ರಕರಣಗಳೊಂದಿಗೆ, ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ 9,44,996 ಸಕ್ರಿಯ ಪ್ರಕರಣಗಳು, 54,27,707 ಗುಣಮುಖ ಪ್ರಕರಣಗಳು ಮತ್ತು 1,00,842 ಸಾವುಗಳು ಸೇರಿದಂತೆ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 64,73,545 ಕ್ಕೆ ತಲುಪಿದೆ.

ಭಾರತ ಕಳೆದ 24 ಗಂಟೆಗಳಲ್ಲಿ 1,069 ಸಾವುಗಳನ್ನು ವರದಿ ಮಾಡಿದೆ, ಜಾಗತಿಕವಾಗಿ ಒಂದು ಲಕ್ಷ ಸಾವುಗಳನ್ನು ವರದಿ ಮಾಡಿದ ಮೂರನೇ ರಾಷ್ಟ್ರವಾಗಿದೆ.

ಒಟ್ಟು ಸಾವುಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಾರಾಷ್ಟ್ರದಲ್ಲಿ ವರದಿಯಾಗಿದೆ, ನಂತರ ತಮಿಳುನಾಡು ಮತ್ತು ನಂತರ ಕರ್ನಾಟಕ ಮೂರನೇ ಅತಿ ಹೆಚ್ಚು ಸಾವುಗಳನ್ನು ವರದಿ ಮಾಡಿದೆ.

https://twitter.com/intent/tweet?text=Coronavirus%20cases%20drop%20further%20is%20Odisha%20but%20due%20to%20dip%20in%20testinghttps://www.newindianexpress.com/live/2020/oct/03/covid-19-live–temporary-jails-being-set-up-across-jammu-as185-prisoners-test-positive-2205208.html%20via%20@NewIndianXpress

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights