ಭಾರತದಲ್ಲಿ 70,496 ಹೊಸ ಕೊರೊನಾ ಕೇಸ್ : 69 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಸಾರ್ವಜನಿಕರಲ್ಲಿ ಭಯಭೀತರನ್ನಾಗಿ ಮಾಡಿದೆ. ವಯಸ್ಕರು, ಮಕ್ಕಳನ್ನು ಕೊರೊನಾದಿಂದ ಕಾಪಾಡುವುದೇ ಒಂದು ದೊಡ್ಡ ಸವಾಲಾಗಿ ಹೋಗಿದೆ.

ಪ್ರತಿ ನಿತ್ಯ 70 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 70,496 ಹೊಸ ಕೊರೊನಾ ಕೇಸ್ ದಾಖಲಾಗಿದ್ದು, ಈವರೆಗೆ ಒಟ್ಟು 69 ಲಕ್ಷಕ್ಕೂ ಹೆಚ್ಚು ಜನ ಸೋಂಕಿಗೆ ಒಳಗಾಗಿದ್ದಾರೆ.

ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 964 ಜನರು ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.

ಸಾಂಕ್ರಾಮಿಕ ರೋಗ ದೇಶವನ್ನು ಅಪ್ಪಳಿಸಿದಾಗಿನಿಂದ, ಭಾರತ ಒಟ್ಟು 69,06,152 ಕೊರೊನಾವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಈ ಪೈಕಿ 8,93,592 ಸಕ್ರಿಯ ಪ್ರಕರಣಗಳಿದ್ದರೆ, ಈವರೆಗೆ 59,06,070 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು 1,06,490 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಸೋಂಕಿಗೆ ಮೃತಪಟ್ಟ ವಯಸ್ಕರಲ್ಲಿ ಬಹುತೇಕರಲ್ಲಿ ಕಡಿಮೆ ಜನ ಚೇತರಿಸಿಕೊಂಡಿದ್ದಿದೆ. ಆದರೆ ಸೋಂಕಿನಿಂದ ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚಿನವರು ವಯಸ್ಕರು ಎನ್ನಲಾಗುತ್ತಿದೆ. ಹೀಗಾಗಿ 50 ರಿಂದ 60 ವರ್ಷ ಮೇಲ್ಪಟ್ಟವರು ಸೋಂಕು ತಾಗದಂತೆ ಕಾಪಾಡುವುದು ಮುಖ್ಯವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights