ಫ್ಯಾಕ್ಟ್‌ಚೆಕ್: FaceBook ನಲ್ಲಿ 3 ಬಾರಿ ಹುಡುಗಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರೆ ಜೈಲು ಶಿಕ್ಷೆಯೆ?
ನೀವು ಸೋಶಿಯಲ್ ಮೀಡಿಯಾದ ಬಳಕೆದಾರರಾಗಿದ್ದರೆ, ಹುಡುಗಿಯರಿಗೆ ಫ್ರೆಂಡ್ ರಿಕ್ವಸ್ಟ್ ಕಳುಹಿಸುವ ಮೊದಲು ಹತ್ತು ಬಾರಿ ಯೋಚಿಸಿ ಫ್ರೆಂಡ್ ರಿಕ್ವಸ್ಟ್ ಸೆಂಡ್ ಮಾಡಿದರೆ ಒಳ್ಳೆಯದು. ಒಂದು ವೇಳೆ ನೀವು ಫ್ರೆಂಡ್ ರಿಕ್ವಸ್ಟ್ ಹುಡುಗೆ ಏನಾದರೂ ಸತತ ಮೂರು ಬಾರಿ ನಿಮ್ಮ ಫ್ರೆಂಡ್ ರಿಕ್ವಸ್ಟ್ ರಿಜೆಕ್ಟ್ ಮಾಡಿದರೆ ನಿಮಗೆ ಜೈಲು ವಾಸ ಗ್ಯಾರೆಂಟಿ, ಇಂತಹದೊಂದು ಕಾನೂನನ್ನು ಉತ್ತರ ಪ್ರದೇಶದಲ್ಲಿ ಜಾರಿಗೆ ತರಲಾಗಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಹೊಸ ಕಾನೂನೊಂದನ್ನು ರೂಪಿಸಿದ್ದು , ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅನ್ನು ಹುಡುಗಿಯೊಬ್ಬಳಿಗೆ 3 ಕ್ಕಿಂತ ಹೆಚ್ಚು ಕಳುಹಿಸಿ ಆಕೆ ಅದನ್ನು ರಿಜೆಕ್ಟ್ ಮಾಡಿದ್ದರೆ , ನಂತರವೂ ಅದನ್ನು ಮುಂದುವರೆಸಿದರೆ, ಅಂತಹವರಿಗೆ ಐದು ಲಕ್ಷ ರೂಪಾಯಿಗಳ ದಂಡದೊಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಗೆ ಸಂಬಂಧಿಸಿದಂತೆ ಗೂಗಲ್ ಸರ್ಚ್ ಮಾಡಿದಾಗ, 2013 ರಿಂದ ಇದೇ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ. ‘ದೈನಿಕ್ ಭಾಸ್ಕರ್’ ಮತ್ತು ‘ಜಾಗರಣ್ ನಂತಹ ಕೆಲವು ಸುದ್ದಿ ಸಂಸ್ಥೆಗಳು 2013 ರಲ್ಲಿ ಇದೇ ರೀತಿಯ ಸುದ್ದಿ ವರದಿಗಳನ್ನು ಪ್ರಕಟಿಸಿವೆ. ಸುದ್ದಿ ವರದಿಗಳ ಪ್ರಕಾರ, ಡಿಜಿಪಿಯ ಸುತ್ತೋಲೆಯಲ್ಲಿ ಹುಡುಗಿ ದೂರು ನೀಡಿದರೆ ಮತ್ತು ಹಲವಾರು ಸ್ನೇಹಿತರ ವಿನಂತಿಗಳ ಪುರಾವೆಗಳನ್ನು ಒದಗಿಸಿದರೆ, ಅದು ಸೈಬರ್ ಕ್ರೈಮ್ ಅಡಿಯಲ್ಲಿ ಬರಬಹುದಾದ್ದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಇದು ಇತ್ತೀಚಿನ ಬೆಳವಣಿಗೆಯಲ್ಲ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರ ತಂದದ್ದಲ್ಲ.
ಮಾರ್ಚ್ 2015 ರಲ್ಲಿ ಶ್ರೇಯಾ ಸಿಂಘಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66 ಎ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಎಂಬುದು ಗಮನಿಸಬೇಕಾದ ಅಂಶ. SC ಸೆಕ್ಷನ್ 66A ಅನ್ನು ರದ್ದು ಪಡಿಸಿದ ನಂತರವೂ, ಪೊಲೀಸರು ಈ ಸೆಕ್ಷನ್ ಅಡಿಯಲ್ಲಿ ಜನರ ಮೇಲೆ ಪ್ರಕರಣ ದಾಖಲಿಸುತ್ತಿದ್ದರು. ಆದ್ದರಿಂದ, ಇತ್ತೀಚೆಗೆ 2022 ರಲ್ಲಿ, ಐಟಿ ಕಾಯ್ದೆಯ ಸೆಕ್ಷನ್ 66 ಎ ಅಡಿಯಲ್ಲಿ ಕಾನೂನು ಕ್ರಮಗಳನ್ನು ನಿಲ್ಲಿಸುವಂತೆ ಸುಪ್ರಿಂಕೋರ್ಟ್ ರಾಜ್ಯಗಳಿಗೆ ಮತ್ತು ಅಲ್ಲಿಯ ಪೊಲೀಸ್ ಪಡೆಗಳಿಗೆ ಆದೇಶಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಫೇಸ್‌ಬುಕ್‌ನಲ್ಲಿ ಮೂರು ಬಾರಿ ಯಾವುದೇ ವ್ಯಕ್ತಿಗೆ ಸ್ನೇಹಿತರ ವಿನಂತಿಗಳನ್ನು ಕಳುಹಿಸಿದ್ದರೆ, ಉತ್ತರ ಪ್ರದೇಶದ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 66 (ಎ) ಅಡಿಯಲ್ಲಿ ಐದು ಲಕ್ಷ ರೂಪಾಯಿಗಳ ದಂಡದೊಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಎಂಬ ಉಲ್ಲೇಖ ಹಳೆಯದು. ಅಲ್ಲದೆ, ಐಟಿ ಕಾಯ್ದೆಯ ಸೆಕ್ಷನ್ 66 (ಎ) ಈಗ ಅನ್ವಯಿಸುವುದಿಲ್ಲ. ಅಲ್ಲದೆ, ಐಟಿ ಕಾಯಿದೆಯ ಸೆಕ್ಷನ್ 66 (A) ಅನ್ನು 2015 ರಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಶುಭಮನ್ ಗಿಲ್ ಮತ್ತು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್‌ಗೆ ನಿಶ್ಚಿತಾರ್ಥವಾಗಿದೆಯೇ?