FACT CHECK | ಕರ್ನಾಟಕ ಲಾಕ್ಡೌನ್ ಆಗಲಿದೆ ಎಂಬುದು ಸುಳ್ಳು
ಕೊರೋನಾ ವೈರಸ್ ಬಳಿಕ ಇದೀಗ ಭಾರತ ಮತ್ತು ಪ್ರಪಂಚದಾದ್ಯಂತ ಮತ್ತೆ ಭಯದ ವಾತಾವರಣವೊಂದು ಸೃಷ್ಟಿಯಾಗಿದೆ. ಹ್ಯೂಮನ್ ಮೆಟಾಪ್ನ್ಯುಮೋ ವೈರಸ್ (HMPV) ಪ್ರಕರಣಗಳು ಕಂಡುಬಂದ ಬೆನ್ನಲ್ಲೆ ಭಾರತ ಸರ್ಕಾರವು ದೇಶಾದ್ಯಂತ ಲಾಕ್ಡೌನ್ ಘೋಷಿಸಿದೆ ಎಂಬ ಹೇಳಿಕೆಯೊಂದಿಗೆ ಹಲವಾರು ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ನಾಳೆ ಸಂಜೆಯಿಂದ ಕರ್ನಾಟಕ ಲಾಕ್ ಡೌನ್ ಎಂಬ ಬ್ರೇಕಿಂಗ್ ಸುದ್ದಿಯ ವಿಡಿಯೋ ಕ್ಲಿಪ್ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇನ್ಸ್ಟಾಗ್ರಾಂನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
View this post on Instagram
ಕರ್ನಾಟಕದಲ್ಲಿ 15 ದಿನಗಳ ಲಾಕ್ಡೌನ್ ಘೋಷಿಸುವ ಸುದ್ದಿ ಬುಲೆಟಿನ್ ಆಗಿದೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹಾಗಿದ್ದರೆ ಭಾರತ ಸರ್ಕಾರ ನಿಜವಾಗಿಯೂ ಲಾಕ್ಡೌನ್ ಘೋಷಿಸಿದೆಯೇ ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಕರ್ನಾಟಕದಲ್ಲಿ 15 ದಿನ ಲಾಕ್ಡೌನ್ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗೆ ಸಂಬಂಧಿಸಿದಂತೆ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, 2025ರ ಈ ಸಂದರ್ಭದಲ್ಲಿ ಭಾರತ ಸರ್ಕಾರ ಯಾವುದೇ ರೀತಿಯ ಲಾಕ್ಡೌನ್ ಘೋಷಿಸಿರುವ ಬಗ್ಗೆ ವರದಿಯಾಗಿಲ್ಲ.
ವಿಡಿಯೋದ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, 2021ರಲ್ಲಿ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಗೆ ಸಂಬಂಧಿಸಿ ಟಿವಿ9 ಕನ್ನಡ ಏಪ್ರಿಲ್ 26, 2021ರಂದು ಪೋಸ್ಟ್ ಮಾಡಿದ ಯೂಟ್ಯೂಬ್ ವರದಿ ಲಭ್ಯವಾಗಿದೆ. “Karnataka Announces 15 Days Lockdown | 15 ದಿನಗಳ ಕಾಲ ಕರ್ನಾಟಕ ಲಾಕ್ ಡೌನ್” ಎಂಬ ಶಿರ್ಷಿಕೆಯೊಂದಿಗೆ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಜೊತೆಗೆ ನಾಳೆಯಿಂದ 15 ದಿನಗಳ ಕಾಲ ಲಾಕ್ ಡೌನ್ – 15 ದಿನಗಳ ಕಾಲ ಕರ್ನಾಟಕ ಲಾಕ್ ಡೌನ್ – 15 ದಿನಗಳ ಬಳಿಕ ಪರಿಸ್ಥಿತಿ ಹತೋಟಿಗೆ ಬರದಿದ್ರೆ – ಮತ್ತೊಂದು ವಾರ ಲಾಕ್ ಡೌನ್ ಮುಂದುವರಿಕೆ – ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗೆ ವಿನಾಯಿತಿ ಎಂದು ವಿವರಣೆಯಲ್ಲಿದೆ.
ವೀಡಿಯೋದಲ್ಲಿ ಕೋವಿಡ್ ಹಿನ್ನೆಲೆ ಸಚಿವ ಸಂಪುಟ ಸಭೆ ನಿರ್ಣಯದಂತೆ ಲಾಕ್ ಡೌನ್ ಗೆ ಉದ್ದೇಶಿಸಲಾಗಿದೆ ಎಂದಿದೆ. ವೈರಲ್ ವೀಡಿಯೋವನ್ನು ನಾವು ಪರಿಶೀಲಿಸಿದ ವೇಳೆ ಟಿವಿ9 ಕನ್ನಡದ ಈವೀಡಿಯೋ ಗೆ ಸಾಮ್ಯತೆ ಇರುವುದು ಕಂಡುಬಂದಿದೆ. ಜೊತೆಗೆ ಈ ಬ್ರೇಕಿಂಗ್ ಸುದ್ದಿಯ ವಿಡಿಯೋ ಎಡಿಟ್ ಮಾಡಿ ಎಚ್ಎಂಪಿವಿ ವೈರಸ್ ಹರಡಿಕೆ ಹಿನ್ನೆಲೆ ಎಂದು ಹಂಚಿಕೊಳ್ಳಲಾಗಿದೆ.
ಏಪ್ರಿಲ್ 26, 2021ರಂದು ದಿ ನ್ಯೂಸ್ ಮಿನಿಟ್ ವರದಿಯಲ್ಲಿ “ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್-19 ಬಿಕ್ಕಟ್ಟನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಬೆಂಗಳೂರು ನಗರ ಸೇರಿದಂತೆ ಇಡೀ ರಾಜ್ಯವು ಏಪ್ರಿಲ್ 27 ರ ರಾತ್ರಿಯಿಂದ ಎರಡು ವಾರಗಳವರೆಗೆ ಸಂಪೂರ್ಣ ಲಾಕ್ಡೌನ್ಗೆ ಹೋಗಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಏಪ್ರಿಲ್ 26 ರಂದು ಘೋಷಿಸಿದರು. ಭಾನುವಾರ ಒಂದೇ ದಿನದಲ್ಲಿ ರಾಜ್ಯದಲ್ಲಿ 34,000 ಕೋವಿಡ್-19 ಪ್ರಕರಣಗಳು ದಾಖಲೆಯ ಗರಿಷ್ಠ ದಾಖಲಾಗಿರುವುದರಿಂದ ಸೋಮವಾರ ಬೆಳಗ್ಗೆ ನಡೆದ ಸಚಿವ ಸಂಪುಟ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.” ಎಂದಿದೆ.

ಏಪ್ರಿಲ್ 27, 2021ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ, “ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಕಾರಣ, ಕರ್ನಾಟಕ ಸರ್ಕಾರವು ಮಂಗಳವಾರ ಸಂಜೆಯಿಂದ ರಾಜ್ಯದಲ್ಲಿ 14 ದಿನಗಳ ‘ಕರೋನಾ ಕರ್ಫ್ಯೂ’ಗೆ ಆದೇಶಿಸಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಪ್ರಸ್ತುತ ವಾರಾಂತ್ಯದ ಕರ್ಫ್ಯೂನಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.” ಎಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಸ್ತುತ ಯಾವುದೇ ಲಾಕ್ ಡೌನ್ ಘೋಷಣೆಯಾಗಿಲ್ಲ. 2021ರ ಕೋವಿಡ್ ಸಮಯದಲ್ಲಿ ಘೋಷಣೆಯಾದ ಲಾಕ್ ಡೌನ್ ಕುರಿತ ಟಿವಿ ವರದಿಯ ಬ್ರೇಕಿಂಗ್ ಸುದ್ದಿಯ ಕ್ಲಿಪ್ಅನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇದೊಂದು ಸುಳ್ಳು ಸುದ್ದಿಯಾಗಿದ್ದು ಯಾರೂ ಕೂಡ ಆತಂಕಗೊಳ್ಳುವ ಅಗತ್ಯವಿಲ್ಲ. HMPV ವೈರಸ್ನಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿವಹಿಸಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತೀಯ ಮೂಲದ ಜಗದೀಪ್ ಸಿಂಗ್ ಒಂದು ದಿನಕ್ಕೆ 48 ಕೋಟಿ ಸಂಬಳ ಪಡೆಯುತ್ತಾರೆ ಎಂಬುದು ನಿಜವೇ?

