ಮಿತ್ರಪಕ್ಷಗಳ ವಿಶ್ವಾಸ ಕಳೆದುಕೊಳ್ಳುತ್ತಿರುವ ಬಿಜೆಪಿ! ಮೈತ್ರಿ ತೊರೆದ 18 ಪಕ್ಷಗಳು!

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಪಂಜಾಬ್‌ನ ಶಿರೋಮಣಿ ಅಕಾಲಿ ದಳ ಕಳೆದ ವಾರ ಹೊರಬಂದಿದೆ. ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಪಂಜಾಬ್‌ನಲ್ಲಿ ರೈತರ ಹೋರಾಟ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷ ಅಕಾಲಿ ದಳ ಎನ್‌ಡಿಎ ಮೈತ್ರಿಯನ್ನು ತೊರೆದಿದೆ.

1998ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ವಾಜಪೇಯಿ ಮತ್ತು ಅಡ್ವಾಳಿ ಸೇರಿದಂತೆ ಬಿಜೆಪಿ ನಾಯಕರು ಬಿಜೆಪಿ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷಗೊಳಿಂದ ಮೈತ್ರಿ ಮಾಡಿಕೊಂಡು ಎನ್‌ಡಿಎ ರಚಿಸಿದ್ದರು. ಅಂದಿನಿಂದಲೂ ಶಿರೋಮಣಿ ಅಕಾಲಿದಳ, ಸಮತಾ ಪಾರ್ಟಿ, ಎಐಎಡಿಎಂಕೆ, ಶಿವಸೇನೆ, ಬಿಜು ಜನತಾದಳ ಪಕ್ಷಗಳು ಎನ್‌ಡಿಎ ಭಾಗವಾಗಿದ್ದವು. ನಂತರದಲ್ಲಿ 31 ಪಕ್ಷಗಳು ಎನ್‌ಡಿಎ ಭಾಗವಾಗಿದ್ದವು. ಆದರೆ, ಈಗ ಪ್ರಮುಖ ಪಕ್ಷಗಳು ಎನ್‌ಡಿಎಯಿಂದ ಹೊರಬಂದಿದ್ದು, ಅಕಾಲಿ ದಳವು ಕಳೆದ ವಾರ ಹೊರಬಂದಿದೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರದಲ್ಲಿ 18 ಪಕ್ಷಗಳು ಮೈತ್ರಿಕೂಟದಿಂದ ಹೊರಬಂದಿವೆ. 1999ರ ಏಪ್ರಿಲ್‌ನಲ್ಲಿ (ಅಂದರೆ ಎನ್‌ಡಿಎ ರಚನೆಯಾದ 13 ತಿಂಗಳಿಗೆ) ಜಯಲಲಿತಾ ಅವರ ಎಐಎಡಿಎಂಕೆ ಪಕ್ಷವು ಎನ್‌ಡಿಎಯಿಂದ ಹೊರ ಉಳಿಯಿತು. ನಂತರದಲ್ಲಿ, ‘‘ಬಿಜೆಪಿ ಕೋಮುವಾದಿ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಸೀಟು ಕೊಡುತ್ತಿಲ್ಲ,’’ ಎಂದು ಸಿಟ್ಟಿಗೆದ್ದ ಬಿಜು ಜನತಾದಳ 1999ರಲ್ಲಿ ಹೊರ ಬಂದಿತು.

ಅದಾದ ನಂತರ, 2018ರಲ್ಲಿ ಆಂಧ್ರ ಪ್ರದೇಶಕ್ಕೆ ಮೋದಿ ಸರಕಾರ ಹೆಚ್ಚಿನ ಅನುದಾನ ನೀಡುತ್ತಿಲ್ಲ ಎಂದು ಟಿಡಿಪಿ ಪಕ್ಷವು ಹೊರಬಂದಿದೆ. ಕಳೆದ ವರ್ಷ (2019) ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಶಿವಸೇನೆ ಕೂಡ ಬಿಜೆಪಿಯಿಂದ ದೂರ ಉಳಿದಿದೆ.

​2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ, ಬಿಜೆಪಿಯು ಮಿತ್ರಪಕ್ಷಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎಂದು ಮೈತ್ರಿಯಲ್ಲಿರುವ ಪಕ್ಷಗಳು ಆರೋಪಿಸುತ್ತಿವೆ. ಅಲ್ಲದೆ, ರಾಜ್ಯಗಳಲ್ಲಿ ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡಲು ಮುಂದಾಗಿದೆ. ಪ್ರದೇಶಿಕ ಪಕ್ಷಗಳ ಸ್ಥಾನಮಾನವನ್ನು ಕಡಿತಗೊಳಿಸುತ್ತಿದೆ ಎಂದು ಅವುಗಳು ಆರೋಪಿಸಿವೆ.

ಈ ಕಾರಣದಿಂದಾಗಿ ಪ್ರದೇಶಿಕ ಪಕ್ಷಗಳು ಎನ್‌ಡಿಎ ತೊರೆದು ಬಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿವೆ.


ಇದನ್ನೂ ಓದಿ: ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆ ಸಾವು! ಯೋಗಿ ಸರ್ಕಾರದ ರಾಜೀನಾಮೆಗೆ ವಿರೋಧ ಪಕ್ಷಗಳ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights