FACT CHECK | ಮಧ್ಯರಾತ್ರಿಯಲ್ಲಿ ಅಯೋಧ್ಯೆ ಬೀದಿಗಳಲ್ಲಿ ಹನುಮಂತ ಕಾಣಿಸಿಕೊಂಡಿದ್ದು ನಿಜವೇ?
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದೊಂದಿಗೆ ಹಿಂದೂಗಳ ದಶಕಗಳ ಕನಸು ನನಸಾಗಿದೆ. ದೇಶಾದ್ಯಂತ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಈ ಮಧ್ಯೆ, ಅಯೋಧ್ಯೆಯಲ್ಲಿ ಆಂಜನೇಯ ಸ್ವಾಮಿ ಕಾಣಿಸಿಕೊಂಡಿದ್ದಾನೆಂದು ಹೇಳಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹನುಮಂತ ಅಯೋಧ್ಯೆಯ ಬೀದಿಗಳಲ್ಲಿ ಓಡಾಡುತ್ತ, ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿ ಕಣ್ಮರೆಯಾಗುವುದನ್ನು ತೋರಿಸುವ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
View this post on Instagram
ಅಯೋಧ್ಯೆಯ ಬೀದಿಗಳಲ್ಲಿ ಹನುಮಂತನ ಸಂಚಾರ ಎಂಬ ಶೇರ್ಷಿಕೆಯೊಂದಿಗೆ- ಏಪ್ರಿಲ್ 12 ರಂದು ಇನ್ಸ್ಟಾಗ್ರಾಮ್ನಲ್ಲಿ shyamlifetips ಎಂಬ ಖಾತೆಯಿಂದ ವಿಡಿಯೋವನ್ನು ಹಂಚಿಕೊಂಡ ಅವರು, ‘ರಾತ್ರಿಯಲ್ಲಿ ಅಯೋಧ್ಯೆಯ ಬೀದಿಗಳಲ್ಲಿ ಹನುಮಾನ್ ಜಿ ಕಾಣಿಸಿಕೊಂಡರು’ ಎಂದು ಬರೆದಿದ್ದಾರೆ.
ಫೇಸ್ಬುಕ್ನಲ್ಲಿ ‘ಸಂತೋಷ್ ನಿಶಾದ್ ಕಾಖ್’ ಎಂಬ ಬಳಕೆದಾರ ಕೂಡ ಅದೇ ವಿಡಿಯೋವ್ನು ಹಂಚಿಕೊಂಡಿದ್ದು, ಅಯೋಧ್ಯೆಯಲ್ಲಿ ಹನುಮನನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಲವಾರು ಇತರ ಬಳಕೆದಾರರು ಇದೇ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವಿಡಿಯೋಗೆ ಸಂಬಂಧಿಸಿದಂತೆ ಅನೇಕ ಪೋಸ್ಟ್ಗಳು ಲಭ್ಯವಾಗಿವೆ. ‘ಜೈ ಶ್ರೀ ರಾಮ್.. ಜೈ ಹನುಮಾನ್.’ ಈ ವೀಡಿಯೊವನ್ನು “ಈ ವೀಡಿಯೊವನ್ನು ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗುತ್ತಿದೆ.
ಕೆಲವು ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಏಪ್ರಿಲ್ 15 ರಂದು ನ್ಯೂಸ್ ನೇಷನ್ ವೆಬ್ಸೈಟ್ ಪ್ರಕಟಿಸಿದ ಸುದ್ದಿ ಲೇಖನ ಲಭ್ಯವಾಗಿದೆ. ಈ ವಿಡಿಯೋವನ್ನು AI ಬಳಸಿ ರಚಿಸಲಾಗಿದೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ Instagram ಲಿಂಕ್ ಅನ್ನು ಸಹ ಸೇರಿಸಲಾಗಿದೆ.
AI ಬಳಸಿ ಈ ವೀಡಿಯೊವನ್ನು ರಚಿಸಿದ ಅನ್ಮೋಲ್ ಬೊಹ್ರಾ ಎಂಬ ವ್ಯಕ್ತಿಯನ್ನು ನಾವು ಗುರುತಿಸಿದ್ದೇವೆ. ಅನ್ಮೋಲ್ ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ತಮ್ಮನ್ನು ‘ವಿಡಿಯೋ ಕ್ರಿಯೇಟರ್, ಎಐ ಆರ್ಟಿಸ್ಟ್’ ಎಂದು ಬಣ್ಣಿಸಿಕೊಂಡಿದ್ದಾರೆ. ಅವರ ಇನ್ಸ್ಟಾಗ್ರಾಮ್ ಪುಟದಲ್ಲಿ AI ಬಳಸಿ ರಚಿಸಲಾದ ಅನೇಕ ವೀಡಿಯೊಗಳಿವೆ.
“ನಾವು ಅಯೋಧ್ಯೆಯಲ್ಲಿ ಹನುಮಂತನನ್ನು ನೋಡಿದ್ದೇವೆ” ಎಂದು ಹೇಳಿಕೊಂಡು ಅನ್ಮೋಲ್ ಎಐ ಸಹಾಯದಿಂದ ರಚಿಸಲಾದ ವಿಡಿಯೋವನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಸುಳ್ಳು ಹೇಳಿಕೆಯೊಂದಿಗೆ ಪೋಸ್ಟ್ ಮಾಡಿರುವುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಯೋಧ್ಯೆಯಲ್ಲಿ ರಾತ್ರಿ ವೇಳೆ ಆಂಜನೇಯ ಸ್ವಾಮಿ ಕಾಣಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ನಕಲಿ. AI ಸಹಾಯದಿಂದ ರಚಿಸಲಾದ ವೀಡಿಯೊವನ್ನು ದಾರಿತಪ್ಪಿಸುವ ರೀತಿಯಲ್ಲಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಆಸ್ತಿಗಾಗಿ ತನ್ನ ಸ್ವಂತ ಮಗಳನ್ನೆ ಮದುವೆಯಾದನೇ 80ರ ವೃದ್ದ?

