ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ : ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಅಲ್ವಾಗೆ ಸಿಸಿಬಿ ನೋಟಿಸ್!
ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಆದಿತ್ಯ ಅಲ್ವಾ ಅವರೊಂದಿಗಿನ ಸಂಬಂಧದ ಬಗ್ಗೆ ನಟ ವಿವೇಕ್ ಒಬೆರಾಯ್ ಅವರ ಪತ್ನಿ ಪ್ರಿಯಾಂಕಾ ಅಲ್ವಾ ಒಬೆರಾಯ್ ಅವರಿಗೆ ಬೆಂಗಳೂರು ಪೊಲೀಸರ ನಗರ ಅಪರಾಧ ಶಾಖೆ (ಸಿಸಿಬಿ) ನೋಟಿಸ್ ನೀಡಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನಟ ವಿವೇಕ್ ಒಬೆರಾಯ್ ಅವರ ಮುಂಬೈ ನಿವಾಸದ ಮೇಲೆ ಸಂಬಂಧಿ ಆದಿತ್ಯ ಅಲ್ವಾ ಅವರನ್ನು ಹುಡುಕಿಕೊಂಡು ಗುರುವಾರ ದಾಳಿ ನಡೆಸಿತ್ತು. ಮಾಜಿ ಕರ್ನಾಟಕ ಸಚಿವ ಜೀವರಾಜ್ ಅಲ್ವಾ ಅವರ ಪುತ್ರ ಆದಿತ್ಯ ಅಲ್ವಾ ಅವರು ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ಆರೋಪಿಗಳಲ್ಲಿ ಒಬ್ಬರು.
ಕನ್ನಡ ಚಲನಚಿತ್ರ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರು ಸಿಸಿಬಿ ಮುಂದೆ ಹಾಜರಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಮಾದಕ ದ್ರವ್ಯ ಸೇವನೆಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ ನಂತರ ಕನ್ನಡದ ನಟಿ ರಾಗಿಣಿ ದ್ವಿವೇದಿ, ಸಂಜನಾ ಸೇರಿದಂತೆ ಹಲವರನ್ನು ಅವರನ್ನು ಮಾದಕವಸ್ತು ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

