ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಗುಂಡಿನ ಸದ್ದು : ಗುಂಡು ಹಾರಿಸಿ ಪಬ್ ಮಾಲೀಕನ ಕೊಲೆ…!
ನಿನ್ನೆ ರಾತ್ರಿ ಬೆಂಗಳೂರಿನ ಹೃದಯಭಾಗದಲ್ಲಿ ಗುಂಡು ಹಾರಿಸಿ ಪಬ್ ಮಾಲೀಕರೊಬ್ಬರನ್ನು ಕೊಲೆಮಾಡಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಬ್ರಿಗೇಡ್ ರಸ್ತೆ ಬಳಿ ಬಾರ್ ಹೊಂದಿರುವ ಮನೀಶ್ ಶೆಟ್ಟಿ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ.
45 ವರ್ಷದ ಮನೀಶ್ ಶೆಟ್ಟಿ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯು ಜನಪ್ರಿಯ ಬ್ರಿಗೇಡ್ ರಸ್ತೆಯ ಆರ್ಎಚ್ಪಿ ರಸ್ತೆಯಲ್ಲಿರುವ ಪಬ್ ಬಳಿ ನಡೆದಿದೆ.
ಮನೀಶ್ ಶೆಟ್ಟಿ ಅವರ ಮೇಲೆ ಕ್ರಿಮಿನಲ್ ದಾಖಲೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ಯಾಂಗ್ ಪೈಪೋಟಿ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.