ಜೈಲಿನಲ್ಲಿ ಅಮ್ಮನೊಂದಿಗೆ ಮಾತಿಗಾಗಿ ಸಂಜನಾ, ಚಪಾತಿ ಊಟಕ್ಕಾಗಿ ರಾಗಿಣಿ ಪಟ್ಟು..!

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ  ಹಾಗೂ ಸಂಜನಾ ಗರ್ಲಾನಿ ಅವರನ್ನು ನ್ಯಾಯಾಲಯ ಬಂಧನಕ್ಕೆ ಒಳಪಡಿಸಲಾಗಿದೆ. ಕೆಲ ದಿನಗಳಿಂದ ಜೈಲುವಾಸ ಅನುಭವಿಸುತ್ತಿರುವ ಇಬ್ಬರು ನಟಿಯರು ಪರಪ್ಪನ ಅಗ್ರಹಾರದಲ್ಲಿ ಗಲಾಟೆ ಶುರುಮಾಡಿದ್ದಾರೆ. ಅಮ್ಮನೊಂದಿಗೆ ಮಾತನಾಡಲು ನಟಿ ಸಂಜನಾ ಕಣ್ಣೀರು ಹಾಕಿದರೆ, ಚಪಾತಿ ಊಟ ಕೊಡಿ ಎಂದು ರಾಗಿಣಿ ಪಟ್ಟು ಹಿಡಿದು ಕುಳಿತಿದ್ದಾರೆ.

ಹೌದು… ಜೈಲಿನಲ್ಲಿ ಕೊಡುವ ಅನ್ನ ತಿಂದು ನಟಿ ರಾಗಿಣಿ ದಪ್ಪ ಆಗುತ್ತಿದ್ದಾರಂತೆ. ಹೀಗಾಗಿ ಚಪಾತಿ ಊಟ ಕೊಡಿ ಎಂದು ರಾಗಿಣಿ ಪಟ್ಟು ಹಿಡಿದಿದ್ದಾರಂತೆ. ಒಂದು ಕಡೆ ಜಾಮೀನು ದೊರೆಯುತ್ತಿಲ್ಲ ಎಂಬ ಹತಾಶೆ ಮನೋಭಾವ. ಮತ್ತೊಂದು ಕಡೆ ಜೈಲುವಾಸ ಸಾಕು ಸಾಕು ಎನ್ನಿಸುವಷ್ಟು ಬೇಸರ. ಇವೆರಡರ ಮಧ್ಯೆ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡುತ್ತಿದೆ. ಇದೆಲ್ಲದರಿಂದ ತುಪ್ಪದ ಹುಡುಗಿಗೆ ನಶೆ ಇಳಿಯುತ್ತಿದೆ.

ಇನ್ನೂ ನಟಿ ಸಂಜನಾ ಅವರಿಗೆ ಪರಪ್ಪನ ಅಗ್ರಹಾರ ಸಾಕು ಎನ್ನಿಸುತ್ತಿದ್ದು, ನನಗೆ ಯಾವ ಗತಿ ಬಂತು ಅಂತ ಕಣ್ಣೀರು ಇಟ್ಟಿದ್ದಾರಂತೆ. ತಾನು ತನ್ನ ತಾಯಿ ಜೊತೆ ಮಾತನಾಡಬೇಕು ಎಂದು ಸಂಜನಾ ಗಳಗಳ ಅಂತ ಅತ್ತಿದ್ದಾರಂತೆ.

ನಶೆ ನಟಿಯರಿಗೆ ಯಾಕೋ ಸದ್ಯಕ್ಕೆ ನಸೀಬು ಕೈಗೂಡುವಂತೆ ಕಾಣುತ್ತಿಲ್ಲ. ದಿನ ಕಳೆದಂತೆಲ್ಲ ಜೈಲೂಟವೇ ಗತಿ ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ನಟಿಯರಾದ ರಾಗಿಣಿ ಮತ್ತು ಸಂಜನಾ ಹತಾಷೆಯಿಂದ ಕಂಗಲಾಗಿ ಹೋಗಿದ್ದಾರೆ ಎನ್ನುತ್ತಿವೆ ಜೈಲಿನ ಆಪ್ತ ಮೂಲಗಳು. ಸ್ಯಾಂಡಲ್​​ವುಡ್ ಡ್ರಗ್ಸ್ ಪ್ರಕರಣದ ವಾಸನೆ ಪ್ರಾರಂಭದಲ್ಲಿಯೇ ನಟಿಯರಾದ ರಾಗಿಣಿ ಮತ್ತು ಸಂಜನಾ ಮೂಗಿಗೆ ಬಡಿದಿತ್ತು. ಇದರ ಬಗ್ಗೆ ಸುಳಿವು ಪಡೆದಿದ್ದ ಸಿಸಿಬಿ ನಶೆ ನಂಟು ಅಧಾರದ ಮೇಲೆ ಇಬ್ಬರು ನಟಿಯರನ್ನು ಒಂದು ವಾರಗಳ ಕಾಲ ತೀವ್ರ ವಿಚಾರಣೆ ನಡೆಸಿತ್ತು. ಮಾತ್ರವಲ್ಲದೆ ಹಲವು ಪರೀಕ್ಷೆಗಳನ್ನು ನಡೆಸಿ ಸುಸ್ತು ಹೊಡೆಸಿದ್ದರು. ಅದಾಗಲೇ ಇಬ್ಬರು ನಟಿಯರಿಗೆ ಡ್ರಗ್ ನಶೆ ಇಳಿದು ಗಿರಕಿ ಹೊಡೆಯುವಂತಾಗಿತ್ತು. ಇನ್ನೇನು ಸಿಸಿಬಿ ವಿಚಾರಣೆ ಮುಗಿಯಿತು, ಸಿಸಿಬಿ ಕಸ್ಟಡಿ ಅಂತ್ಯವಾಗ್ತಿದಂತೆ ಜಾಮೀನು ದೊರೆಯುತ್ತದೆ ಎಂದುಕೊಂಡಿದ್ದ ನಟಿಮಣಿಯರಿಗೆ ಕೋರ್ಟ್ ಶಾಕ್ ನೀಡಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದೆ.

ಆದರೂ ನಟಿಯರಿಬ್ಬರ ಜಾಮೀನು ಅರ್ಜಿ ವಿಚಾರಣೆ ನಶೆ ಬಿಡಿಸುತ್ತಾ ಅಥವಾ ನಶೆ ಏರುವಂತೆ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights