ಫ್ಯಾಕ್ಟ್ಚೆಕ್: ಇದು ಚಂದ್ರಬಾಬು ನಾಯ್ಡು ಅವರ ಕಾರ್ಯಕ್ರಮವಲ್ಲ, ಸಿದ್ದೇಶ್ವರ ಶ್ರೀಗಳ ಅಂತಿಮ ಯಾತ್ರೆಯ ದೃಶ್ಯಗಳು
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರು ಆಂದ್ರ ಪ್ರದೇಶದಲ್ಲಿ ಮುಂಬರುವ 2024 ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ರಾಜ್ಯಾದ್ಯಂತ ತಮ್ಮ ಪಕ್ಷದ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ನಾಯ್ಡು ಅವರ ರೋಡ್ಶೋಗಳ ಸಮಯದಲ್ಲಿ ಕಾಲ್ತುಳಿತದಿಂದಾಗಿ ಎರಡು ವಿಭಿನ್ನ ಘಟನೆಗಳಲ್ಲಿ 11 ಜನರು ಸಾವನ್ನಪ್ಪಿದ ನಂತರ ಆಂಧ್ರ ಪ್ರದೇಶ ಸರ್ಕಾರವು 02 ಜನವರಿ 2023 ರಂದು ರಾಜ್ಯದಲ್ಲಿ ಸಾರ್ವಜನಿಕ ಸಭೆಗಳು, ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸದಂತೆ ನಿಷೇದಾಜ್ಞೆ ಹೊರಡಿಸಿದೆ.
ನಾಯ್ಡು ಅವರ ಸ್ಥಳೀಯ ಕ್ಷೇತ್ರವಾದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಜನವರಿ 4 ರಂದು ಆಂಧ್ರಪ್ರದೇಶ ಪೊಲೀಸರು ಟಿಡಿಪಿ ಮುಖ್ಯಸ್ಥರನ್ನು ರೋಡ್ ಶೋನಲ್ಲಿ ಭಾಗವಹಿಸದಂತೆ ತಡೆದ ನಂತರ ಹೆಚ್ಚಿನ ಉದ್ವಿಗ್ನತೆ ಉಂಟಾಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚಂದ್ರಬಾಬು ನಾಯ್ಡು ಅವರ ಪ್ರಚಾರ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಅವರು ಪಾದಯಾತ್ರೆಯ ಆರಂಭಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಎಷ್ಟೇ ಅಡೆತಡೆ ಹಾಕಿದರೂ #ಚಂದ್ರಬಾಬುಗಾರು ಆಗಮನದಿಂದ #ಜನ ರಸ್ತೆಗೆ ಬರುತ್ತಿದ್ದಾರೆ.. ಚಂದ್ರಣ್ಣನ ಆಗಮನದಿಂದ ಕುಪ್ಪಂ ರಸ್ತೆಗಳಲ್ಲಿ ಜನಸಾಗರ ಹರಿದು ಬಂದ ದೃಶ್ಯ ಎಂದು ಪ್ರತಿಪಾದಿಸಿ ಫೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
04 ಜನವರಿ 2023 ರಂದು ಕುಪ್ಪಂಗೆ ಚಂದ್ರಬಾಬು ಅವರ ಭೇಟಿ ಸಂದರ್ಭದಲ್ಲಿ, ಬೃಹತ್ ಜನಸಮೂಹ ಭಾಗವಹಿಸಿದೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. “ಕುಪ್ಪಂ ಜನರಿಂದ ನಾಯ್ಡು ಅವರಿಗೆ ಭವ್ಯವಾದ ಸ್ವಾಗತ” ಎಂಬ ಶೀರ್ಷಿಕೆಯೊಂದಿಗೆ ನಾಯ್ಡು ಅವರ ರೋಡ್ಶೋ ಎಂದು ಬೃಹತ್ ರ್ಯಾಲಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
నిన్న కుప్పంలో తెలుగుదేశం కార్యకర్తలకు తిక్క రేగితే ఇలానే ఉంటుంది తస్మాత్ జాగ్రత్త. హాల్ టికెట్ చదువురాని సన్యాసి pic.twitter.com/G6UihmQnZb
— Anam Venkata Ramana Reddy (@anamramana) January 5, 2023
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲಗುದೇಶಂ ಪಕ್ಷದ ರ್ಯಾಲಿ ಎಂದು ಹಂಚಿಕೊಂಡಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಕ್ಟ್ಚೆಕ್:
ಆಂದ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪಕ್ಷದ ಬೃಹತ್ ರ್ಯಾಲಿ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್ಅನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೋ ಇತ್ತಿಚೆಗೆ ನಿಧನರಾದ ಕರ್ನಾಟಕದ ವಿಜಯಾಪುರ ಶ್ರೀ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಅಂತ್ಯಕ್ರಿಯೆಯ ಮೆರವಣಿಗೆಯ ದೃಶ್ಯಗಳು ಎಂದು ಕಂಡುಬಂದಿದೆ. ಇದು ನಾಯ್ಡು ಅವರ ರಾಜಕೀಯ ರ್ಯಾಲಿಗೆ ಸಂಬಂಧಿಸಿದ್ದಲ್ಲ.
@MahiMidhun0106 and another clip . pic.twitter.com/tH4ChDOHVT
— aaaaa (@narendrababu44) January 5, 2023
82 ವರ್ಷದ ಸಿದ್ಧೇಶ್ವರ ಸ್ವಾಮಿಜಿಯವರು 02 ಜನವರಿ 2023 ರ ಸಂಜೆ ನಿಧನರಾದರು. ಜನವರಿ 03 ರಂದು ಅವರ ಅಂತಿಮ ಯಾತ್ರೆಯನ್ನು ವಿಜಯಪುರದ ಜ್ಞಾನಯೋಗ ಆಶ್ರಮದಲ್ಲಿ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಆಗಮಿಸಿದ್ದರು.

ಇದಲ್ಲದೆ, ಈ ಅಂತಿಮ ಯಾತ್ರೆಗೆ ಸಂಬಂಧಿಸಿದ ವೀಡಿಯೊಗಳನ್ನು ಪರಿಶೀಲಿಸುವಾಗ, ವೈರಲ್ ವೀಡಿಯೊದಲ್ಲಿ ಕಂಡುಬರುವ “ರೂಪಾ ದೇವಿ CBSE ಶಾಲೆ ಮತ್ತು ವಸತಿ ಪಿಯು ಕಾಲೇಜು, ವಿಜಯಪುರ” ಎಂಬ ಹೋರ್ಡಿಂಗ್ ಅನ್ನು 03 ಜನವರಿ 2023 ರಂದು ಕನ್ನಡ ಸುದ್ದಿ ವಾಹಿನಿ “ಸಾರ್ವಜನಿಕ” ನಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿಯೂ ಕಾಣಬಹುದು. ಟಿವಿ”. ಈ ರೂಪಾದೇವಿ ಶಿಕ್ಷಣ ಸಂಸ್ಥೆಗಳು ಕರ್ನಾಟಕದ ವಿಜಯಪುರದಲ್ಲಿವೆ. ಈ ಅಂತಿಮ ಪ್ರಯಾಣದ ಹೆಚ್ಚಿನ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.ಜನವರಿ 04 ರಂದು ಕುಪ್ಪಂ ಕ್ಷೇತ್ರಕ್ಕೆ ಚಂದ್ರಬಾಬು ನಾಯ್ಡು ಅವರ ಭೇಟಿಯಲ್ಲಿ ಪಾಲ್ಗೊಂಡಿದ್ದ ದೃಶ್ಯಗಳನ್ನು ಇಲ್ಲಿ ಕಾಣಬಹುದು.

ಕರ್ನಾಟಕದ ವಿಜಯಪುರದಲ್ಲಿ ಸಿದ್ಧೇಶ್ವರ ಸ್ವಾಮಿಯ ಅಂತಿಮ ಯಾತ್ರೆಯ ವೀಡಿಯೊವನ್ನು ಚಂದ್ರಬಾಬು ಅವರ ಕುಪ್ಪಂ ಭೇಟಿಗೆ ಲಿಂಕ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಧ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಹೆರಿಗೆ ಕೋಣೆಯಲ್ಲಿ ವೈದ್ಯರ ಜಗಳ! ಇದು ಪಾಕ್ನಲ್ಲಿ ನಡೆದ ಘಟನೆಯೇ?

