ಫ್ಯಾಕ್ಟ್‌ಚೆಕ್: ಹೆರಿಗೆ ಕೋಣೆಯಲ್ಲಿ ವೈದ್ಯರ ಜಗಳ! ಇದು ಪಾಕ್‌ನಲ್ಲಿ ನಡೆದ ಘಟನೆಯೇ?

“ವೈದ್ಯೋ ನಾರಾಯಣೋ ಹರಿ” (ವೈದ್ಯರು ದೇವರಿಗೆ ಸಮಾನ) ಎಂಬ ಜನಜನಿತವಾದ ಮಾತು ಹಾಗೂ ನಮ್ಮ ನಡುವಿನ ವೈದ್ಯರನ್ನು ಗೌರವಿಸಿವ ಪರಿ. ಆದರೆ ಇದಕ್ಕೆ ಅಪವಾದವೆಂಬಂತೆ ಕೆಲ ವೈದ್ಯರ ನಡವಳಿಕೆಗಳು, ರೋಗಿಗಳ ಹತ್ತಿರ ಹಣ ಸುಲಿಗೆ ಮಾಡುವವರಿಗೇನು ಕಡಿಮೆ ಇಲ್ಲ. ಈಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.

ಆಸ್ಪತ್ರೆಯೊಂದರ ಆಪರೇಷನ್ ಥಿಯೇಟರ್‌ನಲ್ಲಿ ಇಬ್ಬರು ವೈದ್ಯರು ಪರಸ್ಪರ ಜಗಳವಾಡುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. @HasnaZarooriHai ಎಂಬ ಬಳಕೆದಾರರು ಪೋಸ್ಟ್‌ ಮಾಡಿದ ಕ್ಲಿಪ್ ಅನ್ನು ಪತ್ರಕರ್ತ ತಾರೆಕ್ ಫತಾಹ್ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಆಸ್ಪತ್ರೆಯಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಸೂಚಿಸುವ ಮೂಲಕ “ಒಂದು ದೇಶವು ಇಷ್ಟೊಂದು ಕಸವನ್ನು ಹೇಗೆ ಉತ್ಪಾದಿಸುತ್ತದೆ? ಪಾಕಿಸ್ತಾನ ಅದನ್ನು ಹೇಗೆ ನಿಭಾಯಿಸುತ್ತದೆ? ಇಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ವೈದ್ಯರು ನರ್ಸಿಂಗ್ ಸಿಬ್ಬಂದಿಯೊಂದಿಗೆ ಹೀಗೆ ಜಗಳಕ್ಕೆ ಇಳಿಯುತ್ತಾರೆ ಎಂದರೆ ಏನ್ ಅರ್ಥ” ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಪತ್ರಕರ್ತೆ ಮಮತಾ ತ್ರಿಪಾಠಿ ಇದೇ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಚಂಡೀಗಢದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್‌ನಲ್ಲಿ ಇತ್ತೀಚೆಗೆ ಚಿತ್ರೀಕರಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಕೆಲವರು ಭಾರತದಿಂದ ಎಂದು, ಇನ್ನು ಕೆಲವರು ಪಾಕಿಸ್ತಾನದಿಂದ ಎಂದು ಹಂಚಿಕೊಂಡಿದ್ದಾರೆ, ಹಾಗಿದ್ದರೆ ಈ ವಿಡಿಯೋದ ಮೂಲ ಯಾವುದು ಎಂದು ಪೋಸ್ಟ್‌ನಲ್ಲಿ  ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಪೋಸ್ಟ್‌ನ ವಿಡಿಯೊದ ಸ್ಕ್ರೀನ್‌ಶಾಟ್‌ ಅನ್ನು ಗೂಗಲ್ ರಿವರ್ಸ್ ಇಮೇಜ್‌ಸ್‌ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 2017 ರ ಹಲವು ಲೇಖನಗಳು ಲಭ್ಯವಾಗಿದವೆ. ಆಗಸ್ಟ್ 31, 2017 ರ ಹಿಂದೂಸ್ತಾನ್ ಟೈಮ್ಸ್ ಲೇಖನದ ಪ್ರಕಾರ, ಜೋಧ್‌ಪುರದ ಉಮೈದ್ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞ ಅಶೋಕ್ ನೈನ್‌ವಾಲ್ ಅವರು ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ಅರಿವಳಿಕೆ ತಜ್ಞ ಮಥುರಾ ಲಾಲ್ ತಕ್ ಅವರೊಂದಿಗೆ ವಾದಿಸುತ್ತಿದ್ದ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ವರದಿಯ ಪ್ರಕಾರ, ಅನಿತಾ ಎಂದು ಗುರುತಿಸಲಾದ ರೋಗಿಯು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ತನ್ನ ನವಜಾತ ಶಿಶುವನ್ನು ಕಳೆದುಕೊಂಡಿದ್ದಾಳೆ ಎಂಬ ಆರೋಪವನ್ನು ಮಾಡಲಾದೆ. ಈ ಪ್ರಕರಣ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿತ್ತು.

ಅನಿತಾ ಅವರು ಸಿ-ಸೆಕ್ಷನ್‌ಗಾಗಿ ಆಪರೇಟಿಂಗ್ ಥಿಯೇಟರ್‌ನಲ್ಲಿದ್ದರು ಮತ್ತು ಅವರ ನವಜಾತ ಹೆಣ್ಣು ಮಗು ಜನನದ ನಂತರ ಸಾವನ್ನಪ್ಪಿತ್ತು. ಮಗುವಿನ ಸಾವಿನಲ್ಲಿ ಇಬ್ಬರು ವೈದ್ಯರ ಪಾತ್ರವಿದೆಯೇ ಎಂದು ಆ ಸಮಯದಲ್ಲಿ ವಿವರವಾದ ವಿಚಾರಣೆಯಿಂದ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿ ಹೇಳಿದ್ದರು.

ಆಗಸ್ಟ್ 31, 2017 ರ ಇಂಡಿಯನ್ ಎಕ್ಸ್‌ಪ್ರೆಸ್ ಲೇಖನದ ಪ್ರಕಾರ, ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ ರಂಜನಾ ದೇಸಾಯಿ ಅವರು ನವಜಾತ ಶಿಶುವಿನ ಸಾವಿಗೆ ವೈದ್ಯರ ವಾದಗಳಿಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ವಿಡಿಯೋ ಚಿತ್ರೀಕರಣದ ವೇಳೆ ಆಪರೇಟಿಂಗ್ ಟೇಬಲ್ ಮೇಲಿದ್ದದ್ದು ನಸೀಮ್ ಬಾನೋ ಎಂಬ ಮಹಿಳೆ ಆಕೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ರಾಜಸ್ಥಾನ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.NDTVBBCThe HinduDeccan HeraldScroll.in, ಮತ್ತು ANI ಸೇರಿದಂತೆ ಇತರ ಮಾಧ್ಯಮಗಳು ಆಗಸ್ಟ್ 2017 ರಲ್ಲಿ ಈ ಘಟನೆಯನ್ನು ವರದಿ ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಜೋಧ್‌ಪುರದ ಉಮೈದ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಇಬ್ಬರು ವೈದ್ಯರು ಜಗಳವಾಡುವ ಮತ್ತು ಹೊಲಸು ಭಾಷೆ ಬಳಸಿ ನಿಂಧಿಸುವ ವಿಡಿಯೊವನ್ನು ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚಿನ ವಿಡಿಯೊ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.

ವೀಡಿಯೋವನ್ನು ಪಾಕಿಸ್ತಾನದಲ್ಲಿ ಚಿತ್ರೀಕರಿಸಲಾಗಿದೆ ಎಂದು ಪತ್ರಕರ್ತ ತಾರೆಕ್ ಫತಾಹ್ ತಪ್ಪಾಗಿ ಹೇಳಿದರೆ, ಪತ್ರಕರ್ತೆ ಮಮತಾ ತ್ರಿಪಾಠಿ ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಈ ದೃಶ್ಯಾವಳಿಗಳು ಭಾರತದ ರಾಜಸ್ಥಾನದ್ದು ಮತ್ತು 2017ರ ಹಳೆಯ ವಿಡಿಯೋ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ನು ಓದಿರಿ: ಫ್ಯಾಕ್ಟ್‌ಚೆಕ್: ಜಾತಿಯ ಕಾರಣಕ್ಕೆ ಬಾಡಿ ಬಿಲ್ಡರ್‌ಗೆ ಅನ್ಯಾಯವಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights