ಫ್ಯಾಕ್ಟ್‌ಚೆಕ್: ಜಾತಿಯ ಕಾರಣಕ್ಕೆ ಬಾಡಿ ಬಿಲ್ಡರ್‌ಗೆ ಅನ್ಯಾಯವಾಗಿದೆಯೇ?

ಜಾತಿಯ ಕಾರಣಕ್ಕೆ ಬಾಡಿ ಬಿಲ್ಡರ್‌ಗೆ ಅವಮಾನ ಮಾಡಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೋ ಪೋಸ್ಟ್‌ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ‘ಎಷ್ಟೇ ಪ್ರತಿಭೆ ಇದ್ದರೂ ಏನು ಪ್ರಯೋಜನ, ಪ್ರತಿಭೆಯನ್ನು ಗುರುತಿಸುವುದು ಜಾತಿಯಿಂದ’  ಎಂದು ಪೋಸ್ಟ್‌ನ ವಿವರಣೆಯಲ್ಲಿ ಬರೆಯಲಾಗಿದೆ. ಭಾರತದಲ್ಲಿ ಎಲ್ಲವನ್ನು ಜಾತಿಯಿಂದಲೇ ಅಳೆಯಲಾಗುತ್ತದೆ. ಅವನು ಕೆಳ ಜಾತಿಯವನಾದರೇನು ಅವನೂ ಮನುಷ್ಯ ಅಲ್ಲವೇ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಘಟನೆ ಎಲ್ಲಿ ನಡೆದಿದೆ ಮತ್ತು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು, ಬಾಡಿ ಬಿಲ್ಡರ್‌ ಸ್ಪರ್ಧೆಗೆ ಸಂಬಂಧಿಸಿದಂತೆ ಸರ್ಚ್ ಮಾಡಿದಾಗ, YouTube ನಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಸಂಬಂಧಿಸಿದಂತೆ ವಿಡಿಯೋ ಲಭ್ಯವಾಗಿದೆ.

26 ಡಿಸೆಂಬರ್ 2022 ರಂದು, ಬಾಡಿ ಬಿಲ್ಡಿಂಗ್ ಇನ್ಸೈಡರ್ ಚಾನೆಲ್‌ನಲ್ಲಿ ವೈರಲ್ ವೀಡಿಯೊದಲ್ಲಿ ತುಣುಕನ್ನು ಕಾಣಿಸಿಕೊಂಡಿದೆ. ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ವಿಡಿಯೋ ವಿವರಣೆಯಲ್ಲಿ ಹೇಳಲಾಗಿದೆ. ಇದನ್ನೇ ಸುಳಿವಿನಂತೆ ತೆಗೆದುಕೊಂಡು, ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲವನ್ನು ಹುಡುಕಿದಾಗ ಘಟನೆಯ ಕುರಿತು ಹಲವಾರು ಸುದ್ದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಂಡುಬಂದಿವೆ.

ಈ ಸುದ್ದಿ ವರದಿಗಳ ಪ್ರಕಾರ, ಬಾಂಗ್ಲಾದೇಶ ಬಾಡಿ ಬಿಲ್ಡಿಂಗ್ ಫೆಡರೇಶನ್ (BABBF) ಅವರ ನ್ಯಾಷನಲ್ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್ 2022 ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಬಾಂಗ್ಲಾದೇಶದ ದೇಹದಾರ್ಢ್ಯ ಪಟು ಜಾಹಿದ್ ಹಸನ್ ಶುವೋ ಎಂಬಾತ ವೇದಿಕೆ ಮೇಲಿಂದ ಕೆಳಗಿಳಿದು ತನ್ನ ಬಹುಮಾನವನ್ನು ಒದ್ದಿದ್ದಾನೆ. ಇದಕ್ಕೂ ಮುನ್ನ ವೇದಿಕೆಯಲ್ಲಿದ್ದಾಗ ಯಾರೋ ತಾನು ಸಲಹೆ ನೀಡುತ್ತಿರುವವರ ಜೊತೆ ಮಾತನಾಡುವ ದೃಶ್ಯಗಳು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು. ಮಾಧ್ಯಮಗಳೊಂದಿಗೆ (ಇಲ್ಲಿ ಮತ್ತು ಇಲ್ಲಿ) ಮಾತನಾಡಿದ ಶುವೋ ಅವರು ಸ್ಪರ್ಧೆಯನ್ನು ಸಂಘಟಿಸಿದ ಸಂಘಟಕರ ಮಾತಿಗೆ ಪ್ರತಿಭಟಿಸಿ ಅವರು ಹಾಗೆ ಮಾಡಿದ್ದಾರೆ ಎಂದು ಹೇಳಿದರು.

ಜಾಹಿದ್ ಹಸನ್ ಶುವೋ ಅವರ ವರ್ತನೆಗೆ ಸಿಟ್ಟಾಗಿರುವ ಒಕ್ಕೂಟ ಅವರಿಗೆ ಶಿಕ್ಷೆಯಾಗಿ,  ಶುವೋವನ್ನು ದೇಹದಾರ್ಢ್ಯದಿಂದ ಜೀವನಪರ್ಯಂತ ನಿಷೇಧಿಸಿದೆ. ಅವರು ಹೊರಡಿಸಿರುವ ಸುತ್ತೋಲೆಯನ್ನು ಇಲ್ಲಿ ನೋಡಬಹುದು. ಈ ಸುದ್ದಿ ಲೇಖನಗಳಲ್ಲಿ ಎಲ್ಲಿಯೂ ಅವರು ಕೆಳಜಾತಿಗೆ ಸೇರಿದವರು ಮತ್ತು ಆದ್ದರಿಂದ ಅನ್ಯಾಯದ ವಿರುದ್ಧ ಈ ರೀತಿ ವರ್ತಿಸಿದರು ಎಂದು ಉಲ್ಲೇಖಿಸಲಾಗಿಲ್ಲ.

ಆದರೆ ಸಾಮಾಜಿಕ ಮಾಧ್ಯಮದಲ್ಲಿ ಬಾಂಗ್ಲಾದೇಶ ರಾಷ್ಟ್ರೀಯ ದೇಹದಾರ್ಢ್ಯ ಚಾಂಪಿಯನ್‌ಶಿಪ್ 2022 ರ ವಿಜೇತರಿಗೆ ಪದಕ ಮತ್ತು ಬಹುಮಾನಗಳನ್ನು ವಿತರಿಸುವ ಸಂದರ್ಭದಲ್ಲಿ ನಡೆದ ಘಟನೆಯನ್ನು ಭಾರತದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಡಿಯೋದಲ್ಲಿ ಬಾಡಿ ಬಿಲ್ಡರ್ ಝಾಹಿದ್ ಹಸನ್ ಶುವೋ ಎಂಬಾತ ಬಹುಮಾನ ಸ್ವೀಕರಿಸಿ ವೇದಿಕೆಯಿಂದ ಕೆಳಗಿಳಿದು ತನಗೆ ನೀಡಿದ್ದ ಬಹುಮಾನವನ್ನು ಕಾಲಿನಿಂದ  ಒದ್ದಿದ್ದಾನೆ. ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಪ್ರಶಸ್ತಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಶುವೋ ಆರೋಪಿಸಿದ್ದಾರೆ.

ಅವರ ವರ್ತನೆಗೆ ಶಿಕ್ಷೆಯಾಗಿ, ಬಾಂಗ್ಲಾದೇಶ ಬಾಡಿ ಬಿಲ್ಡಿಂಗ್ ಫೆಡರೇಶನ್ (BABBF) ಅವರ ಮೇಲೆ ಆಜೀವ ನಿಷೇಧ ವಿದಿಸಿದೆ. ಆದೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಾಂಗ್ಲಾದೇಶದ ದೇಹದಾರ್ಢ್ಯ ಪಟು ಜಾಹಿದ್ ಹಸನ್ ತನ್ನ ಬಹುಮಾನವನ್ನು ಒದೆಯುವ ದೃಶ್ಯಗಳನ್ನು ಭಾರತದ ಕೆಳಜಾತಿ ಯುವ ಸ್ಪರ್ಧಿಗೆ ಅವಮಾನ ಮಾಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಭಾರತದಲ್ಲಿ ಜಾತಿಯ ಕಾರಣಕ್ಕೆ ಕ್ರೀಡೆ ಮತ್ತು ಇತರೆ ಕ್ಷೇತ್ರದಲ್ಲಿ ತಳಸಮುದಾಯದ ಪ್ರತಿಭೆಗಳಿಗೆ ಅನ್ಯಾಯವಾಗವ ವರದಿಗಳು ಪ್ರಕಟವಾಗುತ್ತಿರುತ್ತವೆ. ಆದರೆ ಈ ಘಟನೆ ಭಾರತದ್ದಲ್ಲ. ಬಾಂಗ್ಲಾ ದೇಶದ್ದು ಮತ್ತು ಇದು ಜಾತಿಯ ಕಾರಣದಿಂದ ನಡೆದ ಘಟನೆಯಲ್ಲ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ, ರಿಷಬ್ ಪಂತ್‌ಗೆ ರಕ್ತ ನೀಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights