Coronavirus : ಬೇಡ ಭಯ, ಇರಲಿ ಎಚ್ಚರ – ಚಸ್ಕರರಿಗೆ ಅಪಾಯ ವಿಲ್ಲವೆಂದಲ್ಲ..?

ಕೊರೊನಾ ವೈರಸ್ ಎಂದರೆ ಎಲ್ಲರ ಎದೆಯಲ್ಲೂ ನಡುಕ. ಮಾರಕ ಸೋಂಕು ಯಾವಾಗ ಯಾರಿಗೆ ಅಂಟಿಕೊಳ್ಳುತ್ತೋ ಎಂಬ ಭೀತಿ. ಎಲ್ಲಿ ಏನಾಗುತ್ತೋ ಏನೋ ಎಂಬ ಆತಂಕ. ಇದಕ್ಕೆಲ್ಲ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ. ಜಾಗತಿಕ ಮಟ್ಟದಲ್ಲಿ ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್ ಯಾರ ಪಾಲಿಗೆ ಅತಿಹೆಚ್ಚು ಅಪಾಯಕಾರಿ ಎಂಬುದು ಇದೀಗ ವರದಿಗಳ ಮೂಲಕ ಹೊರ ಬಿದ್ದಿದೆ.

ಮೊದಲು ಸೋಂಕು ಕಾಣಿಸಿಕೊಂಡ ಚೀನಾದಲ್ಲಿನ ಅಂಕಿ-ಅಂಶಗಳ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರಿಗೆ ಕೊರೊನಾ ವೈರಸ್ ತಗಲಿದರೆ ಹೆಚ್ಚು ಅಪಾಯ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಹಿರಿಯ ನಾಗರಿಕರನ್ನು ಸೋಂಕು ತಗಲದಂತೆ ಹೇಗೆ ಎಚ್ಚರಿಕೆ ವಹಿಸಬೇಕು ಎಂದು ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.

ಇಷ್ಟು ವಯೋಮಾನದವರಲ್ಲೇ ಹೆಚ್ಚು ಜನರು ಮೃತಪಡುತ್ತಾರೆ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಇದುವರೆಗಿನ ಅಂಕಿ-ಅಂಶಗಳನ್ನು ಗಮನಿಸಿದಾಗ ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರು ಕೊರೊನಾ ವೈರಸ್ ನಿಂದ ಹೆಚ್ಚು ಅಪಾಯಕ್ಕೆ ಸಿಲುಕಿದ್ದಾರೆ. ಅವರಲ್ಲಿನ ರೋಗನಿರೋಧಕ ಶಕ್ತಿಯ ಲೋಪವೋ ಏನೋ ಎಂಬುದಕ್ಕೆ ಕಾರಣ ಮಾತ್ರ ಇಂದಿಗೂ ಪತ್ತೆಯಾಗಿಲ್ಲ. ಇದರ ನಡುವೆ ನಮ್ಮ ಮನೆ, ನಮ್ಮ ಏರಿಯಾ, ನಮ್ಮ ಊರು, ನಮ್ಮ ರಾಜ್ಯ ಮತ್ತು ನಮ್ಮ ದೇಶದ ಪ್ರಜೆಗಳ ಮೇಲೆ ನಾವು ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಎದುರಾಗಿದೆ.

ಕೊವಿಡ್-19 ನಿಂದಾಗಿ ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವವರ ಬಗ್ಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಇರುವ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರವು ಸಿದ್ಧಪಡಿಸಿರುವ ಮಾರ್ಗಸೂಚಿಗಳ ಪಟ್ಟಿಯನ್ನು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಇದು ಸೋಂಕು ಹರಡುವುದನ್ನು ತಡೆಯಲು ರಚನೆಯಾಗಿರುವ ಟಾಸ್ಕ್ ಫೋರ್ಸ್ ಗೆ ಸಹಾಯಕವಾಗಲಿದೆ.

ಕೊರೊನಾ ವೈರಸ್ ನಿಂದಾಗಿ ಅನಾರೋಗ್ಯ ಪೀಡಿತರು ಮತ್ತು ಹಿರಿಯ ನಾಗರಿಕರಿಗೆ ಹೆಚ್ಚು ಅಪಾಯ ಎಂದು ತಿಳಿಯುತ್ತಿದ್ದಂತೆ ಇವರ ಆರೈಕೆಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಮಾರ್ಗಸೂಚಿಗಳು ಏನು ಹೇಳುತ್ತವೆ ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights