‘ವಲಸಿಗರು ನಮ್ಮ ಪಕ್ಷದವರು, ಎಲ್ಲರೂ ಮಂತ್ರಿಯಾಗ್ತಾರೆ ಎಂದು ಹೇಳಲು ಸಾಧ್ಯವಿಲ್ಲ’ – ಕಟೀಲ್
ವಲಸಿಗರು ನಮ್ಮ ಪಕ್ಷದವರು, ಎಲ್ಲರೂ ಮಂತ್ರಿಯಾಗ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಜಭವನದಲ್ಲಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ನಳೀನ್ ಕುಮಾರ್ ಕಟೀಲ್, ‘ ವಲಸಿಗರು ನಮ್ಮ ಪಕ್ಷದವರು. ಆದರೆ ಎಲ್ಲರಿಗೂ ಸಚಿವ ಸ್ಥಾನ ಸಿಗುತ್ತೆ ಎಂದು ಹೇಲಲು ಸಾಧ್ಯವಿಲ್ಲ. ಯಾರು ಮಂತ್ರಿಯಾಗಬೇಕು ಎನ್ನುವುದು ಸಿಎಂ ನಿರ್ಧಾರ. ಸಾಮಾಜಿಕ ನ್ಯಾಯ, ಭೌಗೋಳಿಕ ಎಲ್ಲವನ್ನು ನೋಡಿ ಮಂತ್ರಿ ಸ್ಥಾನ ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.
ಇನ್ನೂ ಸಿಟಿ ರವಿ ಮಾತನಾಡಿ, ” ವಲಸಿಗರು ಎಂದು ನಾವು ಹೇಳಲು ಆಗುವುದಿಲ್ಲ. ಒಂದು ಬಾರಿ ನಮ್ಮ ಪಕ್ಷ ಸೇರಿದರೆ ಅವರು ನಮ್ಮ ಪಕ್ಷದವರೇ. ಅವರನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಯಾರು ಕೆಲಸ ಮಾಡುತ್ತಾರೋ ಅವರು ಹೆದರಬೇಕಾಗಿಲ್ಲ. ಯಾರು ಕೆಲಸ ಮಾಡುವುದಿಲ್ಲವೋ ಅವರ ಬಗ್ಗೆ ಪಕ್ಷ ಯೋಚಿಸುತ್ತದೆ” ಎಂದಿದ್ದಾರೆ.
ರಮೇಶ್ ಕುಮಾರ್ ಮಾತನಾಡಿ, “ರಾಜ್ಯಕ್ಕೆ ಹೊಸ ಸಿಎಂ ಬಂದಿದ್ದಾರೆ. ಬೊಮ್ಮಾಯಿ ಅವರು ಅನುಭವ ಉಳ್ಳವರು. ಎಲ್ಲಾ ಕ್ಷೇತ್ರದಲ್ಲೂ ಅವರಿಗೆ ಅನುಭವ ಇದೆ. ಸಿಎಂ ಸಂಪುಟದಲ್ಲಿ ಯಾರೆಲ್ಲಾ ಇರಬೇಕು ಎಂದು ಅವರೇ ತೀರ್ಮಾನ ಮಾಡ್ತಾರೆ” ಎಂದಿದ್ದಾರೆ.
ಮೈತ್ರಿ ಸರ್ಕಾರ ಬಿಟ್ಟ 11 ಸಚಿವರನ್ನ ಮಂತ್ರಿ ಮಂಡಲದಿಂದ ಕೈಬಿಡಲಾಗುತ್ತಾ? ಅಥವಾ ಮುಂದುವರೆಸಿಕೊಂಡು ಹೋಗಲಾಗುತ್ತಾ? ಕೆಲವರನ್ನು ಮಾತ್ರ ಮುಂದುವರೆಸಿಕೊಂಡು ಹೋಗಲಾಗುತ್ತಾ? ಹೊಸಬರಿಗೆ ಅವಕಾಶ ನೀಡಲಾಗುತ್ತಾ? ಇವೆಲ್ಲವೂ ಕುತೂಹಲ ಮೂಡಿಸಿದೆ.