ಫ್ಯಾಕ್ಟ್‌ಚೆಕ್: ಬೇರಿಲ್ಲದೆ ನೇತಾಡುವ ಮರ ಅಸ್ತಿತ್ವದಲ್ಲಿದೆ ಎಂಬುದು ನಿಜವೇ?

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ಸಖತ್ ವೈರಲ್ ಆಗುತ್ತಿದ್ದು, ಹರಿಯಾಣದ ಸಮಧಾ ದೇವಸ್ಥಾನದ ಆವರಣದಲ್ಲಿ ಮರವೊಂದು ಯಾವುದೇ ಆಧಾರವಿಲ್ಲದೆ ಗಾಳಿಯಲ್ಲಿ ನಿಂತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಹರಿಯಾಣದ ಹಿಸಾರ್ ಜಿಲ್ಲೆಯ ಹನ್ಸಿ ನಗರದಲ್ಲಿರುವ ಸಮಧಾ ದೇವಸ್ಥಾನದ ಆವರಣದಲ್ಲಿ ನೇತಾಡುವ ಮರವು ಬೇರುಗಳ ಆಧಾರವಿಲ್ಲದೆ ನಿಂತಿದೆ ಇದು ದೇವರ ಪವಾಡ ಎಂದು ಹೇಳುವ ವಿಡಿಯೊ ವೈರಲ್ ಆಗಿದೆ.

ಫೇಸ್‌ಬುಕ್ ಬಳಕೆದಾರ ನರೇಂದ್ರಕ್ರೌನ್ ಪಟೇಲ್ ಎಂಬುವವರು ಅನಿಲ್ ಸಾಹು ಅವರ ರೀಲ್ ಅನ್ನು ‘ನೇತಾಡುವ ಮರ ಒಂದು ಪವಾಡ’ ಎಂಬ ಶೀರ್ಷಿಕೆಯೊಂದಿಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೊದಲ್ಲಿ ಮರವೊಂದು ಯಾವುದೇ ಆಧಾರವಿಲ್ಲದೆ ಗಾಳಿಯಲ್ಲಿರುವಂತೆ ಕಾಣುತ್ತಿದ್ದು, ಬಾವಿಯೊಳೆಗೆ ಅದರ ಬೇರು ಮತ್ತು ಬಾವಿ ಮೇಲೆ ಅಂದರೆ ಬೇರು ಮತ್ತು ಕಾಂಡದ ನಡುವೆ ಅಂತರವಿರುವುದನ್ನು ಕಾಣಬಹುದು. ಯಾವುದೇ ಮರ ಬೇರುಗಳ ಆಧಾರವಿಲ್ಲದೆ  ಬೆಳೆಯಲು ಸಾಧ್ಯವಿಲ್ಲ. ಆದರೆ ಈ ಮರ ಬೇರುಗಳ ಆಧಾರವಿಲ್ಲದೆ ಬೆಳೆದಿದೆ ಎಂದರೆ ಇದು ಪವಾಡ ಎಂಬ ಹೇಳಿಯನ್ನು ಪೋಸ್ಟ್‌ ಮೂಲಕ ಹಂಚಿಕೊಳ್ಳಲಾಗಿದೆ.

ಇದೇ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸುವಂತೆ ನಮ್ಮ ಏನ್‌ಸುದ್ದಿ.ಕಾಂನ ಓದುಗರು ಸಂದೇಶ ಕಳುಹಿಸುವ ಮೂಲಕ ವಿನಂತಿಸಿದ್ದಾರೆ. ಹಾಗಾಗಿ ಪವಾಡದ ಮರ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ‘ಪವಾಡ ಮರದ’ ವಿಡಿಯೋವನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ವಿಶ್ವಸ್ ನ್ಯೂಸ್ ಈ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ ಎಂದು ಕಂಡುಹಿಡಿದಿದೆ. ವಿಶ್ವಾಸ್ ನ್ಯೂಸ್ ವರದಿಯ ಪ್ರಕಾರ “ಈ ಮರವನ್ನು ಅಕ್ಷಯ ವತ್ ವೃಕ್ಷ ಅಥವಾ ಬಡ್ಕ ಮರ ಎಂದು ಕರೆಯಲಾಗುತ್ತದೆ ಮತ್ತು ಹನ್ಸಿಯ ಬಾಬಾ ಜಗನ್ನಾಥಪುರಿ ಸಮಾಧಾನ ದೇವಾಲಯದಲ್ಲಿದೆ. ಜಗನ್ನಾಥ ಪುರಿ ಬಾಬಾ ಈ ದೇವಾಲಯಕ್ಕೆ ಬಂದು ಇಲ್ಲಿ ‘ಸಮಾಧಿ’ ಯಾದರು ಎಂದು ನಂಬಲಾಗಿದೆ. ಅದಕ್ಕಾಗಿಯೇ ಜನರು ಈ ಮರವನ್ನು ಅದ್ಭುತವೆಂದು ಪರಿಗಣಿಸುತ್ತಾರೆ ಮತ್ತು ಅದರ ಸುತ್ತಲೂ ಕೆಂಪು ದಾರವನ್ನು ಕಟ್ಟುತ್ತಾರೆ.

‘ಪವಾಡ’ ವೃಕ್ಷದ ಬಗ್ಗೆ ಗಮನಸೆಳೆದ ಅವರು, “ಇದು ಮಧ್ಯದಿಂದ ಮುರಿದ ಆಲದ ಮರ, ಆದರೆ ಕೊಂಬೆ ನೆಲಕ್ಕೆ ತಾಗಿದಾಗ ಅದು ಬೇರು ಬಿಡುತ್ತದೆ. ಇದರರ್ಥ ಮರದ ಕೊಂಬೆಯು ಸ್ವತಃ ಹೊಸ ಮರವಾಗಿದೆ. ಅದರ ಕೊಂಬೆ ಹಳೆಯ ಮರಕ್ಕೆ ಅಂಟಿಕೊಂಡಿರುತ್ತದೆ. ಎಂದಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ವಿಶ್ವಸ್ ನ್ಯೂಸ್ ಹನ್ಸಿ ವಿಭಾಗದ ಅರಣ್ಯಾಧಿಕಾರಿ  ರಮೇಶ್ ಯಾದವ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಅವರ ಪ್ರಕಾರ, ಸಮಧಾ ದೇವಸ್ಥಾನದಲ್ಲಿ ನೇತಾಡುವ ಮರದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಾಗ, ನಾವು ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೇವೆ. ಅದು ನೇತಾಡುವ ಮರವಲ್ಲ ಎಂದು ಹೇಳಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಇರುವುದು ಆಲದ ಮರ ಎಂದು ತಿಳಿಸಿದ ರಮೇಶ್ ಕುಮಾರ್. ಇದರ ಬೇರುಗಳು ಕೆಳಗಿನ ಭಾಗದಲ್ಲಿ ಹರಡಿರುತ್ತವೆ ಮತ್ತು ಮೇಲಿನ ಭಾಗ ಕೊಂಬೆಗಳೊಂದಿಗೆ ಪರಸ್ಪರ ಸಂಪರ್ಕ ಹೊಂದಿವೆ. ಆಲದ ಮರದು ಗುಣ ಏನೆಂದರೆ ಅದು ವಿಶಾಲವಾಗಿ ಹರಡಿಕೊಳ್ಳುತ್ತದೆ ಮತ್ತು ಅದರ ಕೊಂಬೆಗಳು ನೆಲಕ್ಕೆ ಭಾಗಿದಾಗ ಬೇರುಗಳು ಬಿಟ್ಟು ಮತ್ತಷ್ಟು ಹರಡಿಕೊಳ್ಳುತ್ತದೆ ಎಂದಿದ್ದಾರೆ. ಇದೂ ಕೂಡ ಅದೇ ರೀತಿ ಹರಡಿಕೊಂಡಿದೆ, ಇಲ್ಲಿ ನೇತಾಡುವ ಮರವೂ ಇಲ್ಲ ಯಾವ ಪವಾಡವೂ ಇಲ್ಲ ಎಂದು ಹೇಳಿದ್ದಾರೆ.

Dodda Alada Mara - mesmerizing banyan tree near Bengaluru - BangaloreLocale.com
ಸಾಂದರ್ಭಿಕ ಚಿತ್ರ

ಆಲದ ಮರದ ವಿಶಿಷ್ಟವಾದ ರಚನೆಯನ್ನು ಅರ್ಥಮಾಡಿಕೊಳ್ಳಲು ವೆಬ್ ಅನ್ನು ಸಂಶೋಧಿಸುವಾಗ, ಏನ್‌ಸುದ್ದಿ.ಕಾಂ ಗೆ ಇದೇ ರೀತಿಯ ಸನ್ನಿವೇಶವನ್ನು ವಿವರಿಸುವ ‘ಪ್ರಾಪ್ ರೂಟ್’ ಪದವನ್ನು ಕಂಡುಬಂದಿತು. Dictionary.com ಪ್ರಕಾರ, ‘ಪ್ರಾಪ್ ರೂಟ್’ ಎಂಬುದು ಮ್ಯಾಂಗ್ರೋವ್‌ಗಳಂತಹ ಸಸ್ಯಗಳಲ್ಲಿ ನೆಲದ ಮೇಲಿರುವ ಕಾಂಡದಿಂದ ಬೆಳೆಯುವ ಮತ್ತು ಬೆಂಬಲಿಸುವ ಬೇರು.

“ಆಲದ ಮರ ಒಮ್ಮೆ ನೆಲದ ಮೇಲೆ ಬೇರು ಬಿಟ್ಟರೆ, ಅದು ನೂರಾರು ವರ್ಷಗಳ ಕಾಲ ಬೆಳೆದು ಬದುಕ ಬಲ್ಲದು. ಆಲದ ಮರ ಬೆಳೆದಂತೆ ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗುತ್ತಾ, ಸುಮಾರು ಒಂದು ಎಕರೆಯಷ್ಟು ಸ್ಥಳವನ್ನು ಅದು ಆಕ್ರಮಿಸಿಕೊಂಡು ಬಿಡುತ್ತದೆ. ಕಾಲಾನಂತರ ಕೊಂಬೆಗಳು ಬೇರುಗಳಾಗಿ ಮಾರ್ಪಡುತ್ತವೆ “.

ಒಟ್ಟಾರೆಯಾಗಿ ಹೇಳುವುದಾದರೆ, ಹಿಸಾರ್‌ನ ಹಂಸಿಯ ಸಮಧಾ ದೇವಸ್ಥಾನದಲ್ಲಿ ನೇತಾಡುವ ಮರದ ವಿಡಿಯೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ. ಹಿಸಾರ್ ಜಿಲ್ಲೆಯ ಹಂಸಿ ನಗರದಲ್ಲಿ ನೇತಾಡುವ ಮರದ ಹಿಂದೆ ವೈಜ್ಞಾನಿಕ ಮತ್ತು ತರ್ಕಬದ್ಧ ಹಿನ್ನಲೆ ಇದೆ. ಕೆಲವೊಮ್ಮೆ ಧಾರ್ಮಿಕ ಆಚರಣೆಗಳು ಪವಾಡ ಎಂಬ ಮೂಢನಂಬಿಕೆಯೊಂದಿಗೆ ಹೇಗೆ  ಜೊತೆಯಾಗುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ. ಹಾಗಾಗಿ ಇಂತಹ ವಿಡಿಯೋಗಳನ್ನು ನಂಬುವ ಮೊದಲು ಪರಿಶೀಲಿಸಿ.

ಕೃಪೆ: ವಿಶ್ವಾಸ್ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: 2023 ಹೊಸ ವರ್ಷದಿಂದ ಬ್ಯಾಂಕ್ ಸೇವಾ ಶುಲ್ಕದಲ್ಲಿ ಮತ್ತೆ ಹೆಚ್ಚಳವಾಗುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights