ನವೆಂಬರ್ 17ರಿಂದ ಕಾಲೇಜುಗಳು ಆರಂಭ – ಶಿಕ್ಷಣ ಸಚಿವ ಅಶ್ವತ್ಥನಾರಾಯಣ

ಕೊರೊನಾ ವೈರಸ್ ನಿಂದ ಮುಚ್ಚಲಾಗಿದ್ದ ಕಾಲೇಜುಗಳನ್ನು ತೆರೆಯಲು ಮುಹೂರ್ತ ಫಿಕ್ಸ್ ಆಗಿದ್ದು ನವೆಂಬರ್ 17ರಿಂದ ಕಾಲೇಜುಗಳು ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಅಶ್ವತ್ಥನಾರಾಯಣ  ತಿಳಿಸಿದ್ದಾರೆ.

ಈ ಬಗ್ಗೆ ಸಿಎಂ ಯಡಿಯೂರಪ್ಪರೊಂದಿಗೆ ಇಂದು ಮಹತ್ವದ ಚರ್ಚೆ ಕೈಗೊಳ್ಳಲಾಗಿತ್ತು. ಚರ್ಚೆಯಲ್ಲಿ ಸಾರಿಗೆ, ಶಿಕ್ಷಣ ಎಲ್ಲಾ ಸಚಿವರು ಭಾಗವಹಿಸಿದ್ದರು. ಚರ್ಚೆ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ‘ಪದವಿ, ಇಂಜಿನೀಯರ, ಡಿಪ್ಲೊ ಕಾಲೇಜುಗಳು ನವೆಂಬರ್ 17ರಿಂದ ಆರಂಭವಾಗುತ್ತವೆ’ ಎಂದು ತಿಳಿಸಿದ್ದಾರೆ.

ತರಗತಿಗೆ ಹಾಜರಾಗಲು ಯಾರಿಗೂ ಬಲವಂತವಿಲ್ಲ. ಕಾಲೇಜುಗಳಿಗೆ ವಿದ್ಯಾರ್ಥಿಗಳು ಆಗಮಿಸಲು ಪೋಷಕರ ಅನುಮತಿ ಬೇಕು. ‘ ವಿದ್ಯಾರ್ಥಿಗಳು  ಆನ್ ಲೈನ್ ಶಿಕ್ಷಣ ಪಡೆಯಬಹುದು. ಇಲ್ಲವೇ ಕಾಲೇಜುಗಳಿಗೆ ಹೋಗಬಹುದು’ ಈ ಆಯ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಬಿಟ್ಟಿದ್ದು. . ಕಾಲೇಜುಗಳಲ್ಲಿ ಮಾಸ್ಕ್, ಸಮಾಜಿಕ ದೂರ, ಸ್ಯಾನಿಟೈಸರ್  ಕಡ್ಡಾಯವಾಗಿರುತ್ತದೆ.

ತರಗತಿಗಳನ್ನು ಪ್ರತಿನಿತ್ಯ ಸ್ಯಾನಿಟೈಸರ್ ಮಾಡಬೇಕು. ಇಂತೆಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights