ಹಣೆಗೆ ತಿಲಕ ಇಟ್ಟು ರಾಖಿ ಕಟ್ಟಿ ವಿನಯ್ ಕುಲಕರ್ಣಿಯನ್ನು ಸ್ವಾಗತಿಸಿದ ಲಕ್ಷ್ಮೀ ಹೆಬ್ಬಾಳ್ಕರ್!

ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಕೇಸ್ ನಲ್ಲಿ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಇಂದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಯುದ್ಧ ಗೆದ್ದು ಬಂದಂತೆ ಅದ್ದೂರಿ ಸ್ವಾಗತ ಮಾಡಲಾಗುತ್ತಿದೆ.

ಬೆಳಗಾವಿಯಲ್ಲಿಂದು ವಿನಯ್ ಕುಲಕುರ್ಣಿಗೆ ಅದ್ದೂರಿ ಸ್ವಾಗತ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ಸೇರಿ ಪಟಾಕಿ ಸಿಡಿಸಿ, ಬೃಹತ್ ಸೇಬಿನ ಹಾರ ಹಾಕಿ, ವಿನಯ್ ಕುಲಕರ್ಣಿಯನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಿದ್ದಾರೆ. ಸ್ವಾಗತದ ಭರದಲ್ಲಿ ಯಾರೋಬ್ಬರೂ ಮಾಸ್ಕ್ ಹಾಕಿಲ್ಲ. ಯಾರೋಬ್ಬರೂ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿಲ್ಲ. ಹೀಗಾಗಿ ಕೋವಿಡ್ ನಿಯಮಗಳಿಗೆ ಬೆಲೆನೇ ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ. ಪೊಲೀಸರ ಬೇಜವಬ್ದಾರಿ ತನದಿಂದಾಗಿ ಇಲ್ಲಿ ನೂರಾರು ಬೆಂಬಲಿಗರು ಸೇರಿದ್ದಾನ್ನುವ ಆರೋಪಗಳು ಕೇಳಿ ಬರುತ್ತಿವೆ.

ಬೆಳಗಾವಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಜನ ಸೇರಲು ಅವಕಾಶ ಮಾಡಿಕೊಡಲಾಗಿದೆ. ಜನ ಸಾಮಾನ್ಯರಿಗೆ ಮಾತ್ರ ಕೊರೊನಾ ನಿಯಮ ಅನ್ವಯವಾಗುತ್ತಾ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೊಲೀಸರ ಬೆಂಗಾವಲಿನಲ್ಲಿ ರೋಡ್ ಶೋ ಮಾಡಲಾಗುತ್ತಿದೆ. ಯುದ್ಧಗೆದ್ದು ಬಂದಂತೆ ವಿನಯ್ ಕುಲಕರ್ಣಿಗೆ ಬೆಂಬಲಿಗರು ಸ್ವಾಗತಿಸಿದ್ದಾರೆ.

ಜಾಮೀನಿನ ಮೂಲಕ ಹೊರಬಂದ ವಿನಯ್ ಕುಲಕರ್ಣಿ ಹಣೆಗೆ ತಿಲಕ ಇಟ್ಟು ರಾಖಿ ಕಟ್ಟಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ವಾಗತಿಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.