ಜೆಇಇ ಪರೀಕ್ಷೆಯಲ್ಲಿ ಶೇ.99.8 ಅಂಕಗಳಿಸಿದ ಅಭ್ಯರ್ಥಿ ಬಂಧನ: ಪರೀಕ್ಷೆ ಬರೆದವನೇ ನಕಲಿ!

ಜೆಇಇ ಪರೀಕ್ಷೆಯಲ್ಲಿ ಶೇ.99.8 ರಷ್ಟು ಗಳಿಸಿದ್ದ ಅಭ್ಯರ್ಥಿ ತನ್ನ ಪರವಾಗಿ ಬೇರೆಯವರ ಮೂಲಕ ಪರೀಕ್ಷೆ ಬರೆಸಿದ್ದಾರೆ ಎಂದು ಬಹಿರಂಗವಾಗಿದ್ದು, ಅಭ್ಯರ್ಥಿ ಮತ್ತು ಆತನ ತಂದೆ ಸೇದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ನ ಜೆಇಇ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಯೊಬ್ಬ ತನ್ನ ಪರವಾಗಿ ಬೇರೊಬ್ಬನಿಂದ ಪರೀಕ್ಷೆ ಬರೆಸಿದ್ದಾನೆ. ಅಲ್ಲದೆ, ಪರೀಕ್ಷಾ ಫಲಿತಾಂಶದಲ್ಲಿ ಶೇ.99.8 ರಷ್ಟು ಅಂಕ ಗಳಿಸಿದ್ದು, ಪರೀಕ್ಷೆ ಬರೆದ ಅಭ್ಯರ್ಥಿ ನಕಲಿ ಎಂದು ತಿಳಿದು ಬಂದಿದೆ.

ಹಾಗಾಗಿ ಅಸಲಿ ಅಭ್ಯರ್ಥಿ ನೀಲ್‌ ನಕ್ಷತ್ರ ದಾಸ್‌, ವೈದ್ಯನಾಗಿರುವ ಅಭ್ಯರ್ಥಿಯ ತಂದೆ ಡಾ. ಜ್ಯೋತಿರ್ಮೋಯ್‌ ದಾಸ್‌ ಮತ್ತು ಇದರಲ್ಲಿ ಶಾಮೀಲಾಗಿದ್ದ ಪರೀಕ್ಷಾ ಕೇಂದ್ರದ 3 ಸಿಬ್ಬಂದಿಗಳನ್ನು ಬಂಧಿಸಲಾಗಿದೆ.

ಸೆ.05 ರಂದು ಗುವಾಹಟಿ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಈ ಅಭ್ಯರ್ಥಿ ಹಾಜರಾಗಿರಲಿಲ್ಲ, ಆತನ ಪರವಾಗಿ ಬೇರೊಬ್ಬರು ಪರೀಕ್ಷೆಗೆ ಹಾಜರಾಗಿದ್ದರು ಎಂಬ ಬಗ್ಗೆ ಮಿತ್ರದೇವ್ ಶರ್ಮಾ ಎಂಬುವವರಿಂದ ಅ.23 ರಂದು ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಜೆಇಇ ಮೇನ್ಸ್ ನಲ್ಲಿ ಈ ಅಭ್ಯರ್ಥಿ ಶೇ.99.8 ರಷ್ಟು ಅಂಕ ಗಳಿಸಿದ್ದಾನೆ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ತನಿಖೆ ನಡೆಸಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ ಒಟ್ಟು 5 ಮಂದಿಯನ್ನು ಬಂಧಿಸಿದ್ದಾರೆ.

ಅಭ್ಯರ್ಥಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿರುವಾಗ ತಪ್ಪನ್ನು ಒಪ್ಪಿಕೊಂಡಿರುವುದು ರೆಕಾರ್ಡ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಂಚನೆಯಲ್ಲಿ ಗುವಾಹಟಿಯ ಖಾಸಗಿ ಕೋಚಿಂಗ್ ಇನ್ಸ್ಟಿಟ್ಯೂಟ್ ಕೂಡ ಶಾಮೀಲಾಗಿದೆ ಎಂದು ಶಂಕಿಸಲಾಗಿದೆ.


ಇದನ್ನೂ ಓದಿ: ಮಹಾನಾಯಕ’ನಿಗೆ ಅತ್ಯುನ್ನತ ಧಾರಾವಾಹಿ ಪ್ರಶಸ್ತಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights