ಎರಡು ದಿನಗಳಲ್ಲಿ ನಿವೃತ್ತಿ ಹೊಂದಲಿರುವ ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ!

ರಾಜ್ಯ ಸರ್ಕಾರವು ಎರಡು ದಿನಗಳಲ್ಲಷ್ಟೇ ನಿವೃತ್ತಿ ಹೊಂದಲಿರುವ ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ ವರ್ಗಾವಣೆ ಆದೇಶ ಹೊರಡಿಸಿದೆ.

ರಾಜಧಾನಿ ಬೆಂಗಳೂರು ಆಯುಕ್ತರಾಗಿದ್ದ ಟಿ. ಸುನೀಲ್ ಕುಮಾರ್ ಅವರಿಗೆ ನಿವೃತ್ತಿಗೂ ಮುನ್ನ ಒಂದು ದಿನಕ್ಕೆ ಡಿಜಿಪಿಯಾಗಿ ಬಡ್ತಿ ನೀಡಲಾಗಿದೆ ಎಂಬುದು ವಿಶೇಷ. ಭ್ರಷ್ಟಾಚಾರ ನಿಗ್ರಹದಳದ ಎಡಿಜಿಪಿಯಾಗಿದ್ದ ಸುನೀಲ್ ಕುಮಾರ್ ಅವರಿಗೆ 1 ದಿನದ ಮಟ್ಟಿದೆ ಬಡ್ತಿ ನೀಡಿ, ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಅದೇ ರೀತಿ ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾದ ಡಿಜಿಪಿ ಅಮರ್ ಕುಮಾರ್ ಅವರಿಗೆ ಪೊಲೀಸ್ ತರಬೇತಿ ವಿಭಾಗದ ಡಿಜಿಪಿ ಆಗಿ ನೇಮಿಸಿ ಬಡ್ತಿ ನೀಡಿ ವರ್ಗಾವಣೆಗೊಳಿಸಲಾಗಿದೆ.

ಸಿ.ಎಚ್.ಪ್ರತಾಪ್ ರೆಡ್ಡಿ ಅವರನ್ನು ರಾಜ್ಯ ಪೊಲೀಸ್ ಸಂಪರ್ಕ ಸಂವಹನ ಹಾಗೂ ಆಧುನೀಕರಣ ಜೊತೆಗೆ ಕಾನೂನು ಸುವ್ಯವಸ್ಥೆ ಹೊಣೆಯನ್ನು ನೀಡಲಾಗಿದೆ. ಈ ನಡುವೆ, ಇದೇ ತಿಂಗಳು 31ರ ನಂತರ ಅಗ್ನಿಶಾಮಕ ಇಲಾಖೆಯ ಡಿಜಿಪಿ ಎ.ಎಂ.ಪ್ರಸಾದ್ ಕೂಡ ನಿವೃತ್ತಿ ಹೊಂದಲಿದ್ದಾರೆಂದು ವರದಿಗಳು ತಿಳಿಸಿವೆ.


ಇದನ್ನೂ ಓದಿ: ಕೈ ಅಭ್ಯರ್ಥಿ ಮುದಿ ಎತ್ತು ಎಂದ ಬಿಜೆಪಿ: ಬಿಎಸ್‌ವೈ, ಮೋದಿ 2 ಹಲ್ಲಿನ ಎತ್ತುಗಳೇ ಎಂದ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights