ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಲಹೆ ನೀಡಿ, ಮೊಬೈಲ್‌ ಗೆಲ್ಲಿ: ಯೂತ್‌ ಕಾಂಗ್ರೆಸ್‌ ಹೊಸ ಅಭಿಯಾನ

ರಾಜ್ಯ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಎದುರಾಗುತ್ತಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು “ಲೆಟ್ಸ್‌ ಟೇಕ್ ‌ಚಾರ್ಜ್‌” ಹೆಸರಿನಲ್ಲಿ ಬೆಂಗಳೂರು ಯೂತ್‌ ಕಾಂಗ್ರೆಸ್ ಒಂದು ವಾರದ (7 ದಿನಗಳ) ಶಿಬಿರ ಹಮ್ಮಿಕೊಂಡಿದೆ.

ಭಾನುವಾರ ಶಿಬಿರ ಆರಂಭಗೊಂಡಿದ್ದು, ಪ್ರವಾಹ ಪೀಡಿತರಿಗೆ ನೆರವು ನೀಡಲು ಸಲಹೆ ಮತ್ತು ಐಡಿಯಾ ಕೇಳಲಾಗಿದ್ದು, ಉತ್ತಮ ಸಲಹೆ ನೀಡಿದ ವ್ಯಕ್ತಿಗೆ ಬಹುಮಾನ ಕೂಡ ನೀಡಲಾಗುವುದು ಎಂದು ಹೇಳಲಾಗಿದೆ.

ಲೆಟ್ಸ್‌ ಟೇಕ್ ‌ಚಾರ್ಜ್ ಸರಣಿಯಾಗಿ ನಡೆಯಲಿದ್ದು, ಮೊದಲ ಸರಣಿಯಲ್ಲಿ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ನಿಭಾಯಿಸಲು ಉದ್ದೇಶಿಸಲಾಗಿದೆ.

ಲೆಟ್ಸ್‌ ಟೇಕ್ ‌ಚಾರ್ಜ್‌ನಲ್ಲಿ ಭಾಗಿಯಾಗುವವರಿಗೆ ಹಾಗೂ ನಾಲ್ಕು ಮೊದಲ ಉತ್ತಮ ಸಲಹೆ ನೀಡಿದವರಿಗೆ ಐಪೋನ್ 12, ಸ್ಯಾಮಸಂಗ್ ಗ್ಯಾಲಕ್ಸಿ ಎ51 ಮತ್ತು ಸ್ಯಾಮ್ ಸಂಗ್ ಗ್ಸಾಲಕ್ಸಿ ಎ 21 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎ ನೀಡಲಾಗುವುದು ಎಂದು ಯೂತ್ ಕಾಂಗ್ರೆಸ್‌ ಹೇಳಿದ್ದಾರೆ.

ಜನರು ನೀಡುವ ಎಲ್ಲಾ ಸಲಹೆಗಳನ್ನು ತಜ್ಞರ ಸಮಿತಿಯು ಪರಿಶೀಲಿಸುತ್ತದೆ. ಮೊದಲ ದಿನದ ಕೆಲವು ಸಲಹೆಗಳಲ್ಲಿ ಮೂಲಸೌಕರ್ಯ ಬದಲಾವಣೆಗಳು ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸಬಹುದಾದ ನಿಯಮ ಬದಲಾವಣೆಗಳು ಸೇರಿವೆ.

ಕರ್ನಾಟಕದಲ್ಲಿ 18-35 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ, ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಸಂಖ್ಯೆ 9999835988 ಅನ್ನು ಸಂಪರ್ಕಿಸಬಹುದು ಎಂದು ಯೂತ್‌ ಕಾಂಗ್ರೆಸ್‌ ಹೇಳಿದೆ.


ಇದನ್ನೂ ಓದಿ: ಪ್ರತ್ಯೇಕ ಕನ್ನಡ ಧ್ವಜಕ್ಕೆ ಮಾನ್ಯತೆ ನೀಡದ ಕೇಂದ್ರ ದ್ರೋಹ ಎಸಗಿದೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights