ಭಾರತದಲ್ಲಿ 85 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ…!

ಭಾರತದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು ಜನರ ನಿದ್ದೆಗೆಡಿಸಿದೆ. ದೇಶದಲ್ಲಿ ಒಂದೇ ದಿನಕ್ಕೆ 45,674 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 85 ಲಕ್ಷಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 45,674 ದಾಖಲಾಗಿದ್ದು. ಒಟ್ಟಾರೆ ಸೋಂಕಿತರ ಸಂಖ್ಯೆ 85,07,754ಕ್ಕೆರಿದೆ. ಈವರೆಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಒಟ್ಟು 1,26,121 ಆಗಿದೆ. 24 ಗಂಟೆಯಲ್ಲಿ 49,082 ಜನ ಸೋಂಕಿನಿಂದ ಗುಣಮುಖರಾಗಿದ್ದರೆ ಒಟ್ಟು ಗುಣಮುಖರಾದವರ ಸಂಖ್ಯೆ 78,68,968ಕ್ಕೆ ಏರಿಕೆಯಾಗಿದೆ. ಸದ್ಯ ಭಾರತದಲ್ಲಿ ಸಕ್ರಿಯ ಪ್ರಕರಣಗಳು 5,12,655ಕ್ಕೆ ಕುಸಿದಿದೆ.

ಒಂದೇ ದಿನದಲ್ಲಿ ದೇಶಾದ್ಯಂತ 11,94,487 ಕೋವಿಡ್ ನಡೆಸಲಾಗಿದ್ದು, ಆ ಮೂಲಕ ದೇಸದ ಒಟ್ಟಾರೆ ಕೋವಿಡ್ ಪರೀಕ್ಷೆಗಳ ಸಂಂಕ್ಯೆ 11,77,36,791ಕ್ಕೆ ಏರಿಕೆ ಕಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights