ಸಚಿವ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರ ವಿಚಾರ : ಇಂದು ದೆಹಲಿಗೆ ತೆರಳಿದ ಸಿಟಿ ರವಿ..

ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ನಿನ್ನೆ ಸಂಜೆ ಅಂಗೀಕಾರವಾಗಿದ್ದು ಇಂದು ಸಿಟಿ ರವಿ ದೆಹಲಿಗೆ ತೆರಳಿದ್ದಾರೆ.

ಯಡಿಯೂರಪ್ಪ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗು ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸಿದ ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಸಿಟಿ ರವಿ ರಾಜೀನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ನಿನ್ನೆ ಅಂಗೀಕರಿಸಿದ್ದಾರೆ.

ಹೀಗಾಗಿ ಸಿಟಿ ರವಿ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಪಕ್ಷದ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅವರು ಮುಂದಾಗಿದ್ದಾರೆ.

ಸಿಟಿ ರವಿ ರಮಗೆ ಸಚಿವ ಸ್ಥಾನಕ್ಕಿಂತ ಪಕ್ಷದ ಸಂಘಟನೆಯಲ್ಲಿ ಹೆಚ್ಚು ಆಸಕ್ತಿ ಎಂದು ಹಲವು ಬಾರಿ ಹೇಳಿಕೊಂಡಿದ್ದುಂಟು. ಸಚಿವ ಸ್ಥಾನ ತಮ್ಮ ಶ್ರಮಕ್ಕೆ ಸಿಕ್ಕ ಫಲವಾಗಿತ್ತು. ತಾವು ಯಾವತ್ತೂ ನಕೆಟ್ ಹಿಡಿದು ಸಚಿವ ಸ್ಥಾನ ಪಡೆದವನಲ್ಲ. ಹಾಗೆ ಮಾಡಿದ್ದರೆ 2012ಕ್ಕಿಂತ ಮುಂಚೆಯೇ ಸಚಿವನಾಗಬಹುದಿತ್ತು ಎಂದೂ ತಮ್ಮ ವಿರೋಧಿಗಳನ್ನ ಅವರು ಕುಟುಕಿದ್ದರು.

Spread the love

Leave a Reply

Your email address will not be published. Required fields are marked *