ಶ್ವೇತಭವನಕ್ಕೆ ನಾನು ಮೊದಲ ಮಹಿಳೆಯಾಗಿರಬಹುದು; ಆದರೆ ಕೊನೆಯವಳಲ್ಲ: ಕಮಲಾ ಹ್ಯಾರಿಸ್‌

ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು, ಅಮೆರಿಕಾದ ಶ್ವೇತ ಭವನಕ್ಕೆ ಆಯ್ಕೆಯಾಗಿರುವ ಮೊದಲ ಮಹಿಳೆ ನಾನಾಗಿರಬಹುದು. ಆದರೆ, ನಾನೇ ಕೊಲೆಯವಳಲ್ಲ. ಮುಂದಿನ ದಿನಗಳಲ್ಲಿ ಹಲವು ಮಹಿಳೆಯರು ಶ್ವೇತಭವನಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಅಮೆರಿಕದ ಉನ್ನತ ಸ್ಥಾನಕ್ಕೆ ಆಯ್ಕೆಯಾದ ಮಹಿಳೆಯರ ಆಯ್ಕೆಯು ನನ್ನ ಗೆಲುವಿನ ಮೂಲಕ ಆರಂಭವಾಗಿದೆ ಅಷ್ಟೇ.  ಭವಿಷ್ಯದಲ್ಲಿ ಮಹಿಳೆಯರು ಮತ್ತೆ ಮತ್ತೆ ಗೆಲವು ಸಾಧಿಸಲಿದ್ದಾರೆ ಎಂದು ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಕಮಲಾ ಹ್ಯಾರಿಸ್‌ ಹೇಳಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕ್ರಿಯೆ ನಡೆಯುತ್ತಿದ್ದಾಗ, ಇಡೀ ವಿಶ್ವವೇ ಅಮೆರಿಕಾದತ್ತ ಚಿತ್ತ ಹರಿಸಿತ್ತು. ಅಮೆರಿಕಾದ ಪ್ರತಿಯೊಬ್ಬ ಪ್ರಜೆಯೂ ಹೊಸ ಅಮೆರಿಕಾವನ್ನು ಕಟ್ಟುವ ಕನಸಿಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವ ಕ್ಷಣ ಬಂದಿದೆ. ಅಮೆರಿಕಾದಲ್ಲಿ ಉಜ್ವಲ ದಿನಗಳು, ಪ್ರಗತಿ, ಸಂತೋಷವನ್ನು ಅಮೆರಿಕಾ ಜನರು ಕಾಣಲಿದ್ದಾರೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಅಮೆರಿಕಾದಲ್ಲಿ ಬೈಡನ್‌ ಗೆಲುವು: ಯಾರು ಗೊತ್ತೇ ಈ ಜೋ ಬೈಡನ್! ಪರಿಚಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights