ನಾವು ರಿಪಬ್ಲಿಕ್‌ ಟಿವಿ ನೋಡುವುದಿಲ್ಲ; ಗೋಸ್ವಾಮಿಯನ್ನು ಗುರಿಮಾಡಿರುವುದು ತಪ್ಪು: ಸುಪ್ರೀಂ ಕೋರ್ಟ್

ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧದ 2018ರ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದ್ದು, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಈ ರೀತಿ ಮೊಟಕುಗೊಳಿಸಿದರೆ ಅದು ನ್ಯಾಯದ ವ್ಯವಸ್ತೆಯನ್ನು ನಗೆಪಾಟಲು ಮಾಡುತ್ತದೆ ಎಂದು ಹೇಳಿದೆ.

2018 ರಲ್ಲಿ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದೆರೆ ಎಂಬ ಆರೋಪ ಹೊತ್ತಿರುವ ಗೋಸ್ವಾಮಿ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರ ನ್ಯಾಯಪೀಠವು, ಗೋಸ್ವಾಮಿಯವರ ಪ್ರಕರಣವು “ವೈಯಕ್ತಿಕ ಸ್ವಾತಂತ್ರ್ಯ”ಕ್ಕೆ ಸಂಬಂಧಿಸಿರುವುದರಿಂದ ಅವರನ್ನು ಕಸ್ಟಡಿ ವಿಚಾರಣೆ ಮಾಡುವ ಅಗತ್ಯವಿದೆಯೇ ಎಂದು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದೆ.

ಭಾರತೀಯ ಪ್ರಜಾಪ್ರಭುತ್ವವು “ಅಸಾಧಾರಣ ಸ್ಥಿತಿಸ್ಥಾಪಕತ್ವ” ಹೊಂದಿದೆ. ಮಹಾರಾಷ್ಟ್ರ ಸರ್ಕಾರವು ಈ ಎಲ್ಲವನ್ನು (ಟಿವಿಯಲ್ಲಿ ಅನರ್ಬ್ ಅವರ ಅವಹೇಳನ ಮಾತುಗಳನ್ನು) ನಿರ್ಲಕ್ಷಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: ಅರ್ನಬ್‌ ಗೋಸ್ವಾಮಿಗೆ ಜೈಲಿನಲ್ಲೇ ದೀಪಾವಳಿ: ಜಾಮೀನು ನೀಡಲು ಬಾಂಬೆ ಹೈಕೋರ್ಟ್‌ ನಕಾರ!

“ಅವರ ಸಿದ್ಧಾಂತ ಏನೇ ಇರಲಿ. ನಾನು ಕನಿಷ್ಠ ಅವರ ಚಾನೆಲ್ ಅನ್ನು ಸಹ ವೀಕ್ಷಿಸುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಸಾಂವಿಧಾನಿಕ ನ್ಯಾಯಾಲಯವು ಇಂದು ಹಸ್ತಕ್ಷೇಪ ಮಾಡದಿದ್ದರೆ, ನಾವು ನಿರ್ವಿವಾದವಾಗಿ ವಿನಾಶದ ಹಾದಿಯಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದಾಗುತ್ತದೆ. ನೀವು ಅವರನ್ನು ನಿರಾಕರಿಸಬಹುದು. ಈ ಆರೋಪಗಳು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನದ್ದಾಗಿ” ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಮುಖ್ಯ ವಿಷಯವೆಂದರೆ, ಸರ್ಕಾರಗಳು ಅವರನ್ನು (ಟಿವಿಯಲ್ಲಿ ನಿಂದಿಸುವುದು) ನಿರ್ಲಕ್ಷಿಸಬೇಕು. ಇದು ಯಾವ ಆಧಾರದ ಮೇಲೆ ಚುನಾವಣೆಗಳನ್ನು ನಡೆಸುತ್ತದೆ ಎಂಬುದರ ಆಧಾರವಲ್ಲ. ಅವರು ಹೇಳುವುದು ಚುನಾವಣೆಯಲ್ಲಿ ಏನಾದರೂ ವ್ಯತ್ಯಾಸವನ್ನುಂಟುಮಾಡುತ್ತದೆ ಎಂದು ನೀವು ಭಾವಿಸುತ್ತೀರಾ? ಎಂದು ಸುಪ್ರೀಂ ಕೋರ್ಟ್‌ ಮಹಾರಾಷ್ಟ್ರ ಸರ್ಕಾರವನ್ನು ಕೇಳಿದೆ.

ರಾಜ್ಯ ಸರ್ಕಾರಗಳು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡರೆ, ನಾಗರಿಕರ ಸ್ವಾತಂತ್ರ್ಯವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಇದೆ ಎಂದು ಅವರು ಅರಿತುಕೊಳ್ಳಬೇಕು ಎಂದು ಸುಪ್ರೀಂ ಹೇಳಿದೆ.


ಇದನ್ನೂ ಓದಿ: ಗೋಸ್ವಾಮಿಯನ್ನು ಸಮರ್ಥಿಸಿಕೊಳ್ಳಲು ಸುಳ್ಳು ಸುದ್ದಿ ಪ್ರಕಟಿಸಿದ OpIndia ಸುದ್ದಿಸೈಟ್!‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights