ದೂರು ಹಿಂಡೆಯುವಂತೆ ಒತ್ತಾಯ: ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ ಮೇಲ್ಜಾತಿ ಪುಂಡರು!

ದಲಿತ ಕುಟುಂಬವೊಂದರ ಮೇಲೆ ಮೇಲ್ಜಾತಿಯ ಗುಂಪೊಂದು ಹಲ್ಲೆ ಮಾಡಿದ್ದು, 2 ವರ್ಷದ ಹಿಂದಿನ ಪೊಲೀಸ್ ಪ್ರಕರಣ ಹಿಂಪಡೆಯಲು ನಿರಾಕರಿಸಿದ್ದಕ್ಕಾಗಿ ದಲಿತರ ಗುಡಿಸಲನ್ನು ಸುಟ್ಟು ಹಾಕಿರುವ ಘಟನೆ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ನಡೆದಿದೆ.

ವೇತನ ಪಾವತಿಯ ವ್ಯತ್ಯಾಸಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂದೀಪ್ ದೋಹರೆ ಅವರ ಸಹೋದರ ಸಂತ್ರಾಮ್ ದೋಹರೆ ಎಂಬುವವರು ಪವನ್ ಯಾದವ್ ಎನ್ನುವವರ ವಿರುದ್ಧ ದಲಿತ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿಯಲ್ಲಿ 2018 ರಲ್ಲಿ ದೂರು ಸಲ್ಲಿಸಿದ್ದರು.

ಆದರೆ ಪವನ್ ಯಾದವ್ ಕುಟುಂಬವು ತಮ್ಮ ಮೇಲಿನ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದು, ಆಗಾಗ ಇದಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕುತ್ತಿದ್ದರು. ಆದರೆ ದಲಿತ ಕುಟುಂಬವು ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಪವನ್ ಯಾದವ್ ಮತ್ತು ಅವರ ಕುಟುಂಬದವರು ಸಂದೀಪ್ ದೋಹರೆ ಅವರ ಸಹೋದರ ಸಂತ್ರಾಮ್ ದೋಹರೆಯನ್ನು ರೈಫಲ್ ಬಟ್‌ಗಳಿಂದ ಥಳಿಸಿ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಧಿಕಾರವಿದ್ದರೂ ನಿಲ್ಲದ ಶೋಷಣೆ; ಪಂಚಾಯತ್ ದಲಿತ‌ ಅಧ್ಯಕ್ಷರ ಮೇಲೆ ನಡೆಯುತ್ತಿವೆ ನಿರಂತರ ದೌರ್ಜನ್ಯಗಳು!

ಆರೋಪಿಗಳನ್ನು ಪವನ್ ಯಾದವ್, ಕಲ್ಲು ಯಾದವ್, ಅವರ ನಾಲ್ವರು ಸಂಬಂಧಿಕರು ಮತ್ತು ನೆರೆಹೊರೆಯವರು ಎಂದು ಗುರುತಿಸಲಾಗಿದೆ. ಅವರು ಐದು ಮೋಟರ್ ಸೈಕಲ್‌ಗಳಲ್ಲಿ 10-12 ಜನರ ಗುಂಪಿನೊಂದಿಗೆ ಬಂದು ಹಲ್ಲೆ ಮಾಡಿದ್ದಾರೆ. ನಂತರ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿ, ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ವರ್ಷದ ಜನವರಿಯಲ್ಲಿ, ಮಧ್ಯಪ್ರದೇಶದ ಸಾಗರ್ ನಗರದಲ್ಲಿ 24 ವರ್ಷದ ದಲಿತ ವ್ಯಕ್ತಿಯೊಬ್ಬನನ್ನು ನೆರೆಹೊರೆಯ ನಾಲ್ವರು ಸೇರಿ ಜೀವಂತವಾಗಿ ಸುಟ್ಟು ಹಾಕಿದ್ದರು.


ಇದನ್ನೂ ಓದಿ: ಆರ್‌ಎಸ್‌ಎಸ್‌ ಅಂತರ್‌ಧರ್ಮೀಯ ವಿವಾಹಗಳನ್ನು ವಿರೋಧಿಸುವುದಿಲ್ಲ: ರತನ್ ಶಾರದಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights