ಭಾರತದಲ್ಲಿ ಒಂದೇ ದಿನ 44,059 ಹೊಸ ಕೊರೊನಾ ಕೇಸ್ : 511 ಸೋಂಕಿತರು ಸಾವು!

ದೇಶದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ 44,059 ಹೊಸ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 91.3 ಲಕ್ಷಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿಯುತ್ತದೆ.

24 ಗಂಟೆಗಳಲ್ಲಿ 44,059 ಹೊಸ ಕೋವಿಡ್ -19 ಸೋಂಕಿತರು ಸೇರದಂತೆ ಭಾರತದಲ್ಲಿ ಒಟ್ಟು ಪ್ರಕರಣಗಳು 91,39,866 ಕ್ಕೆ ಏರಿದೆ. ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 4,43,486 ರಷ್ಟಿದೆ. ನಿನ್ನೆ ಒಂದೇ ದಿನ ದೇಶಾದ್ಯಂತ 511 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,33,738ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 41,024 ಹೊಸ ಡಿಸ್ಚಾರ್ಜ್‌ಗಳೊಂದಿಗೆ ಇದುವರೆಗೆ 85.62 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಇತ್ತೀಚಿನ ನವೀಕರಣದಲ್ಲಿ ತಿಳಿಸಿದೆ. ಅಮೇರಿಕಾ ನಂತರ ಭಾರತ ವಿಶ್ವದ ಎರಡನೇ ಅತಿ ಹೆಚ್ಚು ಕೋವಿಡ್ -19 ಸೋಂಕನ್ನು ಹೊಂದಿದೆ.

ಕೊರೊನಾವೈರಸ್ ಲಸಿಕೆ ಲಭ್ಯವಾದಾಗ ಅದನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ವಿತರಿಸಲು ಕೇಂದ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಭಾರತದಲ್ಲಿ ಲಸಿಕೆ ಅಭಿವೃದ್ಧಿ ಕಾರ್ಯ ಮುಂದುವರಿದ ಹಂತದಲ್ಲಿದೆ. ಅದರಲ್ಲಿ ನಾಲ್ವರು 2/3 ಹಂತದಲ್ಲಿದ್ದಾರೆ ಮತ್ತು ಒಬ್ಬರು 1 / 2 ಹಂತದ ಪ್ರಯೋಗಗಳಲ್ಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights