ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್​ ಗೊಗೋಯ್ ನಿಧನ!

ತೀವ್ರ ಅನಾರೋಗ್ಯದಿಂದ ಗೌಹಾತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿ 86 ವರ್ಷದ ತರುಣ್​ ಗೊಗೋಯ್​ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ತರುಣ್ ಗೊಗೋಯ್​ ಅವರು ಕಳೆದ ಆಗಸ್ಟ್ 25 ರಂದು ಕೊರೋನಾ ವೈರಸ್​ಗೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಗೌಹಾತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತರುವಾಯ ಅವರು ಕೊರೋನಾದಿಂದ ಚೇತರಿಸಿಕೊಂಡು ಮನೆಗೆ ಮರಳಿದ್ದರು.

ಆದರೆ, ಎರಡು ತಿಂಗಳ ನಂತರ ಕೊರೋನಾ ಕಾರಣದಿಂದಾಗಿ ಉಲ್ಭಣಿಸಿದ ಅನಾರೋಗ್ಯದ ಸಮಸ್ಯೆಯಿಂದಾಗಿ ತರುಣ್ ಗೊಗೋಯ್ ಅವರನ್ನು ನವೆಂಬರ್​ 2 ರಂದು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರನ್ನು ದೆಹಲಿಗೆ ವರ್ಗಾಯಿಸಿ ಚಿಕಿತ್ಸೆ ನೀಡುವ ಕುರಿತು ಚಿಂತನೆ ನಡೆಸಲಾಗಿತ್ತು. ಆದರೆ, ಅವರ ದೇಹದ ಸ್ಥಿತಿ ಇದಕ್ಕೆ ಸ್ಪಂದಿಸದು ಎಂಬ ಕಾರಣಕ್ಕೆ ಅವರಿಗೆ ಗೌಹಾತಿಯಲ್ಲೇ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಚಕಿತ್ಸೆ ಫಲಕಾರಿಯಾಗದೆ ಕೊನೆಗೂ ತರುಣ್​ ಗೊಗೋಯ್​ ಇಂದು ಮೃತಪಟ್ಟಿದ್ದಾರೆ.


ಇದನ್ನೂ ಓದಿ: ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಸತೀಶ್ ದುಪೇಲಿಯಾ ನಿಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights