ಸದ್ಯದಲ್ಲೇ ವಿಶ್ವಕಪ್ ಎತ್ತಿ ಹಿಡಿಯಲಿದ್ದಾರೆ ವಿರಾಟ್ ಕೊಹ್ಲಿ: ಹರ್ಭಜನ್ ಸಿಂಗ್
ಪ್ರತಿ ಆಟಗಾರನಿಗೂ ವಿಶ್ವಕಪ್ ಗೆಲ್ಲುವ ಆಸೆ ಇದ್ದೇ ಇರುತ್ತದೆ. ಮಾತ್ರವಲ್ಲ ಈ ಸಾಧನೆಯನ್ನು ಮಾಡಲು ಕಾತುರನಾಗಿರುತ್ತಾನೆ. ಸದ್ಯ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಗೆಲ್ಲುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಹೌದು… ರಾಷ್ಟ್ರೀಯ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದರೂ ಐಪಿಎಲ್ನಲ್ಲಿ ಕೊಹ್ಲಿ ಮುನ್ನಡೆಸುತ್ತಿರುವ ತಂಡದ ಸತತ ವೈಫಲ್ಯವನ್ನು ಮುಂದಿಟ್ಟು ಕೊಹ್ಲಿ ನಾಯಕತ್ವದ ಸಾಮರ್ಥ್ಯವನ್ನು ಪ್ರಶ್ನಿಸಲಾಗುತ್ತಿದೆ. ಜೊತೆಗೆ ಐಸಿಸಿ ಟೂರ್ನಮೆಂಟ್ಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಉತ್ತಮ ಪ್ರದರ್ಶನಗಳು ಹೊರಬಾರದಿರುವುದು ಟೀಕೆಗೆ ಗುರಿಯಾಗಿದೆ ಆದರೆ ಟೀಮ್ ಇಂಡಿಯಾದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ಅತಿ ಶೀಘ್ರದಲ್ಲಿ ವಿಶ್ವಕಪ್ ಎತ್ತಿಹಿಡಿಯುವ ನಾಯಕನಾಗಲಿದ್ದಾರೆ ಎಂಬ ಮಾತನ್ನು ಹರ್ಭಜನ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬ ನಾಯಕನೂ ಈ ಸಾಧನೆಯನ್ನು ಮಾಡಲು ಕಾತುರನಾಗಿರುತ್ತಾನೆ. 2021ರ ವಿಶ್ವಕಪ್ನಲ್ಲಿ ಗೆಲುವು ಸಾಧಿಸುವುದು ಅದ್ಭುತವಾಗಿರಲಿದೆ ಎಂದು ಹರ್ಭಜನ್ ಸಿಂಗ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕೊಹ್ಲಿ ಈಗಾಗಲೇ ದೊಡ್ಡ ಆಟಗಾರ ಈ ಸಾಧನೆ ವಿರಾಟ್ ಕೊಹ್ಲಿಯನ್ನು ಎತ್ತರಕ್ಕೇರಿಸುವುದಿಲ್ಲ. ಯಾಕೆಂದರೆ ವಿರಾಟ್ ಕೊಹ್ಲಿ ಈಗಾಗಲೇ ದೊಡ್ಡ ಆಟಗಾರನಾಗಿದ್ದಾರೆ. ಆದರೆ ಇದು ಆ ಆಟಗಾರನ ಸಾಧನೆಯ ಹಾದಿಗೆ ಮತ್ತೊಂದು ಸಾಧನೆಯಾಗಿ ಸೇರಿಕೊಳ್ಳಲಿದೆ. ವಿಶ್ವಕಪ್ ವಿಜೇತ ನಾಯಕ ಎಂಬ ಹೆಗ್ಗಳಿಕೆಗೆ ಕಾರಣವಾಗಲಿದೆ ಎಂದು ಹರ್ಭಜನ್ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ.

